ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ' ಎಲ್ಲರ ಮನೆ ಮಾತಾಗಿದೆ. ನಾಲ್ಕು ಹೆಣ್ಣು ಮಕ್ಕಳಿರುವ ಮಧ್ಯಮ ವರ್ಗದ ಕುಟುಂಬ ತಮ್ಮ  ಜೀವನ ನಡೆಸಲು  ಹೇಗೆಲ್ಲಾ ಕಷ್ಟ ಪಡುತ್ತಾರೆ, ಪೋಷಕರು ಮಕ್ಕಳ  ಮದುವೆ ವೆಚ್ಚ ಹೊಂದಿಸಲು ಹರಸಾಹಸ ಪಡುವ ರೀತಿ ಅನೇಕರ ಮನಸ್ಸು ಮುಟ್ಟಿದೆ.  ಸಿರಿವಂತ ಅಳಿಯನನ್ನು ಮನೆಯಲ್ಲಿ ಉಪಚಾರ ಮಾಡಲು ಪರದಾಡುತ್ತಾರೆ. ಇಂಥ ಸಣ್ಣ ಪುಟ್ಟ ಸಂಗತಿಗಳು ವೀಕ್ಷಕರ ಗಮನ ಸೆಳೆಯುತ್ತಿದೆ.

ಪುಟ್ಟಗೌರಿ ಮದುವೆಯಲ್ಲಿ ಅಭಿನಯಿಸುತ್ತಿದ್ದ ರಕ್ಷಕ್‌ ಈ  ಧಾರಾವಾಹಿಯ ಪ್ರಮುಖ ಫಾತ್ರಧಾರಿ. ವೇದಾಂತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಕ್ಷಕ್‌ ಕೆಲ ಎಪಿಸೋಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಧಾರಾವಾಹಿಯ ಕಥೆ ಪ್ರಕಾರ ವೇದಾಂತ್ ಕೆಲಸ ವಿಚಾರದ ಮೇಲೆ ವಿದೇಶಕ್ಕೆ  ಪ್ರಯಣ ಮಾಡಿರುತ್ತಾರೆ.  ಈ ಸಮಯದಲ್ಲಿ ವೇದಾಂತ್‌ನನ್ನು ಮದುವೆಯಾಗಬೇಕಿರುವ  ಸಾಹಿತ್ಯ ಆಫೀಸ್‌ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಸೊಕ್ಕಿನಿಂದ ಮೆರೆಯುತ್ತಿರುವ ಹೆಣ್ಣಿನ ಗರ್ವ ಕುಗ್ಗಿಸಲು ಅಮೂಲ್ಯಗೆ ವೇದಾಂತ್ ಸಹೋದರರು ಸಾಥ್ ನೀಡುತ್ತಾರೆ. ಈ ಸಮಯದಲ್ಲಿ ಅಭಿಮಾನಿಗಳಲ್ಲಿ ಎರಡು ರೀತಿಯ ಅನುಮಾನ ಉಂಟಾಗಿದೆ.

'ಗಟ್ಟಿಮೇಳ' ಧಾರಾವಾಹಿಯಿಂದ ಹೊರ ನಡೆದ ವೇದಾಂತ್ ತಾಯಿ ಸುಹಾಸಿನಿ?

ಅಭಿಮಾನಿಗಳ ಪ್ರಶ್ನೆ:

ವೇದಾಂತ್ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳದ ಕಾರಣ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆಗಳು ಉಂಟಾಗಿದೆ. ವೇದಾಂತ್ ನಿಜಕ್ಕೂ ಆಸ್ಟ್ರೇಲಿಯಾಗಿ ಹೋಗಿದ್ದಾರಾ ಅಥವಾ ಸಾಹಿತ್ಯ ಇನ್ನೊಂದು ಮುಖ ರಿವೀಲ್  ಮಾಡಲು ಎಲ್ಲೋ ಹೋಗಿದ್ದಾರಾ? ಎಂಬ ಪ್ರಶ್ನೆ ಒಂದಾದರೆ ಇದೇ ರೀತಿಯ ಸನ್ನಿವೇಶ  ಈ ಹಿಂದೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಡೆಯಿತ್ತು. ವಿಜಯ್ ಸೂರ್ಯ ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಿಲಾಗಿತ್ತು ಆದರೆ ಅವರ ಧಾರಾವಾಹಿಯಿಂದಲ್ಲೆ ಹೊರನಡೆದಿದ್ದರು. ಹಾಗಾಗಿ ವೇದಾಂತ್ ಕೂಡ ಹಾಗೆ ಮಾಡಿದ್ದಾರೆ ಎಂಬ ಅನುಮಾನಗಳಿದೆ. 

ಒಟ್ಟಿನಲ್ಲಿ ವೇದಾಂತ್ ಹಾಗೂ ಅಮೂಲ್ಯ  ಕಿತ್ತಾಟ- ಪ್ರೀತಿ ತುಂಟಾಟಗಳನ್ನು ವೀಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ.