ಗ್ರಾಜುಯೇಷನ್ ಡೇ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿ ಪ್ರಿಯಾ. 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿ ಪ್ರಮುಖ ನಟಿಯರಲ್ಲಿ ಒಬ್ಬರಾದ ಪ್ರಿಯಾ ಈಗ ಗ್ರಾಜುಯೇಟ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ. ಕಾಮೆಂಟ್‌ನಲ್ಲಿ ಸ್ನೇಹಿತರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. 

ಧಾರಾವಾಹಿ ಚಿತ್ರೀಕರಣ ಹಾಗೂ ಕಾಲೇಜ್‌ ಎರಡನ್ನೂ ಸಮವಾಗಿ ನಿಭಾಯಿಸಿ ಪ್ರಿಯಾ ಜೆ ಆಚಾರ್ ಪದವೀಧರೆ ಆಗಿದ್ದಾರೆ. 'ಹೌದು ಗ್ರಾಜುಯೇಷನ್ ಡೇ' ಎಂದು ಪ್ರಿಯಾ ಅಪ್ಪ-ಅಮ್ಮನ ಜೊತೆ ಫೋಟೋ ಹಂಚಿಕೊಂಡಿದ್ದಾರೆ. 

ಗಟ್ಟಿಮೇಳದಲ್ಲಿ ಹೆಚ್ಚು ಮಾತನಾಡೋ ಹುಡುಗಿ ಇವರೇ ನೋಡಿ..!

ಪ್ರಿಯಾ ನಟಿ ಮಾತ್ರವಲ್ಲದೆ ಮಾಡಲಿಂಗ್ ಕೂಡ ಮಾಡುತ್ತಾರೆ. ಅನೇಕ ಖಾಸಗಿ ಫೋಟೋಶೂಟ್‌ಗಳಲ್ಲಿ ಭಾಗಿಯಾಗುತ್ತಾರೆ. ಕೊರೋನಾ ಸಮಯದಲ್ಲಿ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಎಜುಕೇಷನ್ ಹಾಗೂ ಬಣ್ಣದ ಲೋಕ ಎರಡನ್ನೂ ಸಮವಾಗಿ ನಿಭಾಯಿಸಿದ್ದಾರೆ. ಕಾಮೆಂಟ್‌ನಲ್ಲಿ ಅಭಿಮಾನಿಗಳು ಮುಂದೇನು? ಎಂದು ಪ್ರಶ್ನೆ ಕೇಳಿದ್ದಾರೆ. 

ಗಟ್ಟಿಮೇಳ ಧಾರಾವಾಹಿ ಜೊತೆಗೆ 'ಧಮಾಕ' ಸಿನಿಮಾ ಮೂಲಕ ಪ್ರಿಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಲಕ್ಷ್ಮಿ ರಮೇಶ್ ನಿರ್ದೇಶನ ಮಾಡುತ್ತಿರುವ ಈ ಕಾಮಿಡಿ ಸಿನಿಮಾದಲ್ಲಿ ಪ್ರಿಯಾ ಅವರು ಸಿದ್ಧು, ಶಿವರಾಜ್‌ ಕೆ ಆರ್‌ ಪೇಟೆ ಹಾಗೂ ನಯನಾ ಜೊತೆ ಕಾಣಿಸಿಕೊಳ್ಳಲಿದ್ದಾರೆ.

View post on Instagram