Asianet Suvarna News Asianet Suvarna News

ಗೀತಾ ಸಿನಿಮಾ ಇಷ್ಟ, ಕೊನೆಗೆ ಗೀತಾ ಹೆಸರಿನವರೇ ಹೆಂಡತಿಯಾಗಿ ಬಂದಿದ್ದಾರೆ: ಶಿವರಾಜ್‌ಕುಮಾರ್

ಶಂಕರ್‌ ನಾಗ್‌ ಎನರ್ಜಿ ಮೆಚ್ಚಿಕೊಂಡ ಶಿವಣ್ಣ. ಸಂತೋಷಕ್ಕೆ ಹಾಡಿಗೆ ಹೆಜ್ಜೆ ಹಾಕಿದ ಹ್ಯಾಟ್ರಿಕ್ ಹೀರೋ ಫೇವರೆಟ್ ಸಿನಿಮಾ ಇದಂತೆ...

Zee Kannada DKD Shivarajkumar says his favourite film is geetha so is his life partner vcs
Author
Bangalore, First Published May 16, 2022, 2:16 PM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿದೆ ನಂತರ ಇಡೀ ರಾಜ್‌ ಕುಟುಂಬದಲ್ಲಿ ಬರೀ ದುಃಖ, ಕಣ್ಣೀರುಮ ಮೌನ ಆವರಿಸಿಕೊಂಡಿತ್ತು. ಅಪ್ಪು ಸ್ಥಾನದಲ್ಲಿ ನಿಂತು ಅಶ್ವಿನಿ (Ashwini Revanth) ಪುನೀತ್ ರಾಜ್‌ಕುಮಾರ್ ಅವರು ಕೆಲಸ ಮುಂದುವರೆಸಲು ಶುರು ಮಾಡಿದ್ದಾರೆ. ಶಿವಣ್ಣ ಸಿನಿಮಾ ಶೂಟಿಂಗ್ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರು ಅಪ್ಪು ಮಾಡಿದ ಸಮಾಜ ಸೇವೆಗಳನ್ನು ಮುಂದುವರೆಸುತ್ತಿದ್ದಾರೆ. ಹೀಗೆ ಒಬ್ಬೊಬ್ಬರೆ ಕೆಲಸಗಳಲ್ಲಿ ತೊಡಗಿಸಿಕೊಂಡು ನೋವು ಮರೆಯುತ್ತಿದ್ದಾರೆ. ಅಪ್ಪು ಫೋಟೋ ಅಥವಾ ವಿಡಿಯೋ ನೋಡಿದಾಗ ದುಃಖವಾಗುತ್ತದೆ ಆದರೂ ನೋವು ತಡೆದುಕೊಂಡು ನಗುವಿನಲ್ಲಿ ದಿನ ಶುರು ಮಾಡುತ್ತಾರೆ. 

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ (Dance karnataka Dance) ರಿಯಾಲಿಟಿ ಶೋನಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ (Rakshitha), ಚಿನ್ನಿ ಮಾಸ್ಟರ್ (Chinniprakash master), ಅರ್ಜುನ್‌ ಜನ್ಯ (Arjun Janya) ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪವರ್ ಹೆಚ್ಚಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಸ್ಪೆಷಲ್‌ ಜಡ್ಜ್‌ ಆಗಿ ಭಾಗಿಯಾಗುತ್ತಿದ್ದಾರೆ. ಪುಟ್ಟ ಮಕ್ಕಳ ಡ್ಯಾನ್ಸ್‌ಯಿಂದ ಹಿಡಿದು ವಯಸ್ಸಾದವರು ಡ್ಯಾನ್ಸ್‌ ಮಾಡಿ ಎಂದು ವೇದಿಕೆ ಮೇಲೆ ಕರೆದರೆ ಶಿವಣ್ಣ ಮೊದಲು ಹೋಗುತ್ತಾರೆ. ಅವರ ಎನರ್ಜಿ ಮತ್ತು ನಗು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 

Zee Kannada DKD Shivarajkumar says his favourite film is geetha so is his life partner vcs

8 ವರ್ಷದ ದಕ್ಷಿತ್ ಗೌಡ ಮತ್ತು 5 ಪ್ರಣನ್ಯ ಶಂಕರ್‌ ನಾಗ್‌ (Shankar Nag) ಅಭಿನಯಿಸಿರುವ ಗೀತಾ (Geetha) ಚಿತ್ರದ ಹಾಡಿಗೆ ಡ್ಯಾನ್ಸ್‌ ಮಾಡಿದ್ದರು. ಅವರಿಬ್ಬರ ಕೋ- ಆರ್ಡಿನೇಷನ್ ಎಲ್ಲಿಯೂ ಮಿಸ್ ಅಗಿಲ್ಲ ಎಗರಿ ಬಿದ್ದರು ಕುಣಿದು ಕುಪ್ಪಳಿಸಿದಾಗ ರಕ್ಷಿತಾ ಅವರು ಭಯದಲ್ಲಿಯೇ ನೋಡುತ್ತಿದ್ದರು. ಮಕ್ಕಳ ಪರ್ಫಾಮೆನ್ಸ್‌ನ ಮೆಚ್ಚು ಶಿವಣ್ಣ ಸೀಟಿನಿಂದ ಎದ್ದು ಚಪ್ಪಾಳೆ ಹೊಡೆದಿದ್ದಾರೆ. ಈ ಡ್ಯಾನ್ಸ್‌ ವೀಕ್ಷಿಸಿದ ನಂತರ ಗೀತಾ ಸಿನಿಮಾ ಮತ್ತು ಶಂಕರ್‌ನಾಗ್‌ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ.

DKD: ರಾಹುಲ್- ಬೃಂದಾ ಕೈ ಸೇರಿತ್ತು ಟ್ರೋಫಿ, ಐಷಾರಾಮಿ ಮನೆ

ಶಿವಣ್ಣ ಮಾತು:

'ಇವರಿಬ್ಬರ ಡ್ಯಾನ್ಸ್‌ ಸೂಪರ್ ಆಗಿತ್ತು. ಶಂಕರ್‌ನಾಗ್‌ ಅವರನ್ನು ತಿರ್ಗಾ ನೋಡಿದಂತೆ ಆಯ್ತು. ಗೀತಾ ಸಿನಿಮಾ ತುಂಬಾನೇ ಇಷ್ಟಪಟ್ಟಿದ್ದೆ. ಅದಕ್ಕೆ ಗೀತಾ ಹೆಸರಿನವರೇ ಹೆಂಡತಿಯಾಗಿ ಬಂದಿದ್ದಾರೆ' ಎಂದು ಶಿವಣ್ ಹೇಳಿದ್ದಾರೆ. 

'ಎನರ್ಜಿ ಎನರ್ಜಿ ಅಂತ ಕೇಳ್ತೀರಾ ಶಿವಣ್ಣನ ಎನರ್ಜಿ ಅಂತ ಅದಕ್ಕಿಂತ ಡಬಲ್ ಎನರ್ಜಿ ಶಂಕರ್‌ನಾಗ್‌ ಅವರಿಗೆ ಇತ್ತು. ಎಷ್ಟು ಗಂಟೆ ಬೇಕಿದ್ದರೂ ಕೆಲಸ ಮಾಡುತ್ತಾರೆ ತಲೆಯಲ್ಲಿ ಸಾಕಷ್ಟು ವಿಚಾರಗಳು ಇತ್ತು. ನಾನು ಅವರನ್ನು ಮೊದಲು ಭೇಟಿ ಆಗಿದ್ದು ಅಪ್ಪಾಜಿ (Dr Rajkumar) ಜೊತೆ ಒಂದು ಮುತ್ತಿನ ಕಥೆ (Ondu muttina kate) ಸಿನಿಮಾ ಸಮಯದಲ್ಲಿ. ನಾನು ಆಗ ಆಕ್ಟರ್ ಆಗಿರಲಿಲ್ಲ ಸಿನಿಮಾ ಇನ್‌ಸ್ಟಿಟ್ಯೂಟ್‌ನಲ್ಲಿ ಇದ್ದೆ, ಅವರ ಜೊತೆ ಕಾರವಾರದಲ್ಲಿ 25-40 ದಿನಗಳ ಇದ್ದವೆ. ತುಂಬಾ ಕ್ಲೋಸ್ ಆಗಿ ಇದ್ವೀ ನಮ್ಮ ಜೊತೆ ಅರುಂಧತಿ ನಾಗ್ (Arundathi Nag) ಅವರು ಕೂಡ ಇದ್ದರು' ಎಂದಿದ್ದಾರೆ ಶಿವಣ್ಣ.

 

Follow Us:
Download App:
  • android
  • ios