ಪ್ರಮೀಳಾ ಜೋಶಾಯ್ ಅವರನ್ನು ಮಾನಭಂಗ ಮಾಡೋ ಸೀನ್ ನೋಡಿದ್ರೆ ಮದ್ವೆ ಆಗ್ತಿರಲಿಲ್ಲ: ಮುಖ್ಯಮಂತ್ರಿ ಚಂದ್ರು ಪತ್ನಿ
ಎರಡು ಸಲ ತುಪ್ಪ ಹೇಳಿ ಮದುವೆಯಾಗುವ ಹುಡುಗಿ ಮುಖ ನೋಡಿಕೊಂಡ ಚಂದ್ರು. ಮದುವೆ ಪ್ರಸಂಗ ವೈರಲ್......

ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಕಪಲ್ಸ್ ಕಿಚನ್ ಕಾರ್ಯಕ್ರಮ ಮೂಡಿ ಬರುತ್ತಿದೆ. ರುಚಿ ರುಚಿಯಾದ ಅಡುಗೆ ಜೊತೆಗೆ ಸೆಲೆಬ್ರಿಟಿಗಳ ಪರ್ಸನಲ್ ಲೈಫ್ ಬಗ್ಗೆನೂ ಕೊಂಚ ಮಾಹಿತಿ ಹಂಚಿಕೊಳ್ಳುತ್ತಾರೆ. ಬ್ಯುಸಿ ಲೈಫ್‌ನಿಂದ ಫ್ರೀ ಮಾಡಿಕೊಂಡು ಈ ಕಾರ್ಯಕ್ರಮದಲ್ಲಿ ನೆಚ್ಚಿನ ಅಡುಗೆ ಸವಿದು ರಿಲ್ಯಾಕ್ಸ್ ಮಾಡಿಕೊಳ್ಳುತ್ತಾರೆ. ಈ ವಾರ ಮುಖ್ಯಮಂತ್ರಿ ಚಂದ್ರು ಮತ್ತು ಅವರ ಪತ್ನಿ ಪದ್ಮ ಆಗಮಿಸಿದ್ದರು. ಕೊಂಚ ಸರ್ಪ್ರೈಸ್ ಕೊಡಲು ಅವರ ಸೊಸೆ ಕೂಡ ಎಂಟ್ರಿ ಕೊಟ್ಟಿದ್ದರು.
ಮದುವೆ ಪ್ರಸಂಗ:
ಮುಖ್ಯಮಂತ್ರಿ ಚಂದ್ರು ಅವರು ನೆಲಮಂಗಲದವರು. ರೈತಾಪಿ ಕುಟುಂಬದವರಾಗಿದ್ದು ಸ್ವಜಾತಿ ಮದುವೆ ಪ್ರಚಲಿತದಲ್ಲಿತ್ತು. ತುಮಕೂರಿನಲ್ಲಿ ನಮ್ಮ ಜಾತಿಯ ಹುಡುಗಿ ಇದ್ದಾಳೆ ನೋಡಿಕೊಂಡು ಬರುವುದಾಗಿ ಅವರ ತಾಯಿ ಹೇಳಿದರಂತೆ. ಹುಡುಗಿ ಮನೆಗೆ ಹೋಗಿದ್ದ ಚಂದ್ರು ಫುಲ್ ಕ್ಲಾರಿಟಿಯಲ್ಲಿ ಕುಳಿತಿದ್ದರು. ಸಾಮಾನ್ಯವಾಗಿ ಹೊಸ ಸೀರೆ ಉಟ್ಟುಕೊಂಡು ಚೆನ್ನಾಗಿ ರೆಡಿ ಆಗಿರುತ್ತಾರೆ ಅವಳೇ ವಧು ಅಂತ ಫಿಕ್ಸ್ ಆಗುತ್ತಾರೆ. ಮೊದಲು ತಿಂಡಿ ಕೊಡುತ್ತಿದ್ದರು ಆ ಮೇಲೆ ಯಾವ ಹುಡುಗಿ ತುಪ್ಪ ಬಡಿಸುತ್ತಾಳೋ ಅವಳೇ ಹುಡುಗಿ ಅಂತ ನಾವು ಅಂದಿಕೊಳ್ಳಬೇಕು. ತುಪ್ಪ ಹಾಕಿದ ಹೋಗುವಷ್ಟರಲ್ಲಿ ಮುಖ ನೋಡಿಕೊಳ್ಳಬೇಕು ಆದರೆ ನನಗೆ ಸರಿಯಾಗಿ ಮುಖ ಕಾಣಿಸಲಿಲ್ಲ ಹೀಗಾಗಿ ಮತ್ತೊಮ್ಮೆ ತುಪ್ಪ ಬೇಕು ಎಂದು ಕೇಳಿ ಅಷ್ಟರಲ್ಲಿ ಮುಖ ಸರಿಯಾಗಿ ನೋಡಿಕೊಂಡೆ ಎಂದು ಚಂದ್ರು ಹೇಳಿದ್ದಾರೆ.
ಅಯ್ಯೋ ಯಾಕಿಷ್ಟು ಸಣ್ಣ ?; ಗರ್ಭಿಣಿಯಾಗಿದ್ದರೂ ತೂಕ ಕಳೆದುಕೊಂಡ ಕಿರುತೆರೆ ನಟಿ ಮಾನಸ
'ನಮ್ಮ ಮನೆಯಿಂದ ಸುಮಾರು 6 ಕಿಮೀ ದೂರದಲ್ಲಿ ಬೆಂಕಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆ ವೇಳೆ ಪ್ರಮೀಳಾ ಜೋಶಾಯ್ ಅವರನ್ನು ಮಾನಭಂಗ ಮಾಡುವ ದೃಶ್ಯದ ಚಿತ್ರೀಕರಣ ಆಗುತ್ತಿತ್ತು. ನಾನು ಆ ಸೀನ್ ನೋಡಿದರೆ ಇವರನ್ನು ಮದುವೆ ಆಗುತ್ತಿರಲಿಲ್ಲ. ನಮ್ಮ ಮನೆಯವಲ್ಲಿ ಶೂಟಿಂಗ್ ನೋಡೋಕೆ ಬಿಡುತ್ತಿರಲಿಲ್ಲ ತಂದೆ ತಾಯಿ ತುಂಬಾ ಸ್ಟ್ರಿಕ್ಟ್ ಆಗಿದ್ದರು. ನಮ್ಮ ಜಾತಿಯ ಹುಡಗ ಸಿನಿಮಾದಲ್ಲಿದ್ದಾನೆ ಎಂದು ಹೇಳಿದರು ಅದಾದ ಮೇಲೆ ನಾನು ಆ ದೃಶ್ಯ ನೋಡಿದೆ. ನಮ್ಮ ಮನೆಯಲ್ಲಿಯೂ ಶೂಟಿಂಗ್ ನಡೆಯುವಾಗ ಕ್ಯಾಮರಾ ಇರುತ್ತಾರೆ ಆಮೇಲೆ ಸೆಟ್‌ನಲ್ಲೂ ಜನರು ಇರುತ್ತಾರೆ ಅದೆಲ್ಲಾ ಸಿನಿಮಾ ಅಂತ ಆಮೇಲೆ ಅರ್ಥ ಆಯ್ತು. ಅದಾದ ಮೇಲೆ ಚಂದ್ರು ಮೇಲೆ ಯಾವತ್ತು ಅನುಮಾನ ಪಟ್ಟಿಲ್ಲ' ಎಂದು ಪತ್ನಿ ಪದ್ಮ ಹೇಳಿದ್ದಾರೆ.
ಹೊಕ್ಕಳು ಚುಚ್ಚಿಸಿಕೊಂಡು, ಬ್ಲೌಸ್ ಹಾಕದೇ ಪೋಸ್ ಕೊಟ್ಟ ಪುಟ್ಟ ಗೌರಿ; ಬೋಲ್ಡ್ ಅವತಾರದಲ್ಲಿ ಸಾನ್ಯಾ ಅಯ್ಯರ್!
ಮುಖ್ಯ ಮಂತ್ರಿ ಚಂದ್ರು ಮಗನ ಮದುವೆ ಅದ್ಧೂರಿಯಾಗಿ ನಡೆಯಿತ್ತು. ಮದುವೆ ಮುಗಿಸಿಕೊಂಡು ಹುಡುಗಿ ಕರೆದುಕೊಂಡು ಹೋಗುವ ಸಮಯದಲ್ಲಿ ಚಂದ್ರು ಸೊಸೆ ತಂಗಿಯನ್ನು ಬಸ್ ಕಡೆ ಕರೆದುಕೊಂಡು ಹೋಗುತ್ತಿದ್ದರಂತೆ ಆಗ ಆಕೆ ಗಾಬರಿ ಆಗಿದ್ದಾರೆ. ಅಕ್ಕ ತಂಗಿ ಇಬ್ಬರೂ ಒಂದೇ ರೀತಿ ರೆಡಿಯಾಗಿದ್ದ ಕಾರಣ ಕನ್ಫ್ಯೂಸ್ ಆಯ್ತು ಎಂದು ತಮಾಷೆ ಮಾಡಿದ್ದಾರೆ.