ನಿಮ್ಮ ತೆವಲಿಗೋಸ್ಕರ ನ್ಯೂಸ್ ಹಾಕ್ಬೇಡಿ; ಆ ಸುದ್ದಿ ಓದಿ ಕಾಮಿಡಿ ಕಿಲಾಡಿಗಳು ನಯನಾ ಗರಂ!

ಸುಮ್ಮನೆ ಸುದ್ದಿ ಮಾಡಬೇಡಿ ಈ ಸಮಯದಲ್ಲಿ ಕಿರಿಕಿರಿ ಅನಿಸುತ್ತದೆ ಎಂದು ಮನವಿ ಮಾಡಿಕೊಂಡ ನಟಿ. 

Zee Kannada Comedy Kiladigalu Nayana anger over fake news about family and pregnancy vcs

ಜೀ ಕನ್ನಡ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿ, ಸಿನಿಮಾಗಳಲ್ಲಿ ನಟಿಸಿರುವ ನಯನಾ ಫೇಕ್ ನ್ಯೂಸ್ ನೋಡಿ ಮೀಡಿಯಾಗಳ ವಿರುದ್ಧ ಕಿಡಿ ಕಾರಿದ್ದಾರೆ. ನಯನಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಮಯದಲ್ಲಿ ಫೇಕ್ ನ್ಯೂಸ್ ಕ್ರಿಯೇಟ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

'ನಿನ್ನೆಯಿಂದ ಒಂದು ಫೇಕ್ ನ್ಯೂಸ್ ಓಡಾಡುತ್ತಿದೆ. ಕೆಲವೊಂದು ಪೇಜ್‌ಗಳು ವೀಕ್ಷಣೆ ಬರಲಿ ಫಾಲೋವರ್ಸ್‌ ಹೆಚ್ಚಾಗಬೇಕು ಅನ್ನೋ ಕಾರಣಕ್ಕೆ ತುಂಬಾ ಕಚ್ಚಿಡವಾಗಿ ತುಂಬಾ ಹೊಲಸಾಗಿ ನ್ಯೂಸ್‌ಗಳನ್ನು ಪೋಸ್ಟ್ ಮಾಡುತ್ತಿರುವುದಾಗಿ ಗಮನಿಸುತ್ತಿರುವೆ. ನಯನಾ ಅವರ ಗಂಡನಿಂದ ಪ್ರೆಗ್ನೆಂಟ್ ಆಗಿದ್ದಾರೆ, ನಯನಾ ಅವರಿಗೆ ಡಿಲಿವರಿ ಆಗಿ ಅವರಿಗೆ ಗಂಡು ಮಗು ಆಗಿದೆ ಅಂತ ಕೆಲವರು ಹಾಕಿದ್ದಾರೆ ಇನ್ನೂ ಕೆಲವರು ಅವಳಿ-ಜವಳಿ ಮಕ್ಕಳಾಗಿದ್ದಾರೆ ಅಂತ ಹಾಕಿದ್ದಾರೆ. ದಯವಿಟ್ಟು ನಿಮ್ಮ ತೆವಲಿಗೋಸ್ಕರ ನಿಮಗೆ ವಿವ್ಯೂಸ್ ಮತ್ತು ಫಾಲೋವರ್ಸ್ ಬೇಕು ಅಂತ ಈ ರೀತಿ ಫೇಕ್ ನ್ಯೂಸ್ ಹಾಕಬೇಡಿ' ಎಂದು ನಯನಾ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

ಅಬ್ಬಬ್ಬಾ! ಟಗರು ಪುಟ್ಟಿ ಎಷ್ಟು ಚೇಂಜ್ ಆಗಿದ್ದಾರೆ ನೋಡಿ; ನಟಿ ಮಾನ್ವಿತಾ ಹೊಸ ಅವತಾರ ವೈರಲ್!

'ಹೌದು ನಾನು ಪ್ರೆಗ್ನೆಂಟ್ ತುಂಬಾ ಜನ ವಿಶ್ ಮಾಡಿದ್ದೀರಿ ...ಪಾಸಿಟಿವ್ ಆಗಿರಿ ಆಕ್ಟಿವ್ ಆಗಿರಿ ಎಂದು ಸಲಹೆ ಕೊಟ್ಟಿದ್ದೀರಿ..ದೇವರ ಆಶೀರ್ವಾದ ಇರಲಿ ಅಂತ ಬ್ಲೆಸ್ ಮಾಡುತ್ತಿದ್ದೀರಿ ಇದರಿಂದ ನಾನು ಖುಷಿಯಾಗಿರುವೆ ಆದರೆ ದಯವಿಟ್ಟು ಈ ರೀತಿ ಫೇಕ್ ನ್ಯೂಸ್‌ನ ಯಾರೂ ನಂಬುವುದಕ್ಕೆ ಹೋಗಬೇಡಿ. ಮಗು ಆದ ಮೇಲೆ ನನ್ನ ಪ್ರೀತಿಯ ಕನ್ನಡದ ಜನತೆಗೆ ನಾನು ತಿಳಿಸುತ್ತೀನಿ  ನಾನೇ ಪೋಸ್ಟ್ ಮಾಡ್ತೀನಿ... ಬೆಳಗ್ಗೆಯಿಂದ ಸುಮಾರು ಮಂದಿ ನನಗೆ ಕರೆ ಮಾಡಿ ವಿಶ್ ಮಾಡುತ್ತಿದ್ದಾರೆ ಈ ಸಮಯದಲ್ಲಿ ಇಂತಹ ವಿಚಾರಗಳು ನನಗೆ ಕಿರಿಕಿರಿ ಅನಿಸುತ್ತದೆ. ಅಲ್ಲದೆ ಕೆಲವೊಂದು ಪೇಜ್‌ಗಳನ್ನು ಹೆಸರು ಹೇಳಬೇಕು...ನಿಮಗೆ ಒಂದು ಚೂರು ಮಾನ ಮರ್ಯಾದೆ  ನಾಚಿಕೆ ಅನ್ನೋದು ಇದ್ರೆ ದಯವಿಟ್ಟು ಈಗಲೇ ಅದನ್ನು ಡಿಲೀಟ್ ಮಾಡಬೇಕು ಅಂತ ಕೇಳಿಕೊಳ್ತೀನಿ. ನಿಮ್ಮನೆ ಹೆಣ್ಣು ಮಕ್ಕಳು ನನ್ನ ಜಾಗದಲ್ಲಿ ಇದ್ರೆ ಹೀಗೆ ವರ್ತಿಸುತ್ತೀರಾ? ದಯವಿಟ್ಟು ಅರ್ಥ ಮಾಡಿಕೊಳ್ಳಿ' ಎಂದು ನಯನಾ ಮಾತನಾಡಿದ್ದಾರೆ.

 

Latest Videos
Follow Us:
Download App:
  • android
  • ios