ಶೀಘ್ರದಲ್ಲಿ ಬರುತ್ತಿದೆ 'ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ 2': ನೀವು ರೆಡಿನಾ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ಖ್ಯಾತ ಕಾಮಿಡಿ ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು'. ಚಾಂಪಿಯನ್‌ಶಿಪ್ ಸೀಸನ್ ಹೇಗಿರುತ್ತದೆ?
ಕಿರುತೆರೆ ವೀಕ್ಷಕರ ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕು ನಗಿಸಲು ಸಿದ್ದವಾಗುತ್ತಿರುವ ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ ಸೀಸನ್ 2 ಇದೇ ಸೆಪ್ಟೆಂಬರ್ 12ರಿಂದ ಪ್ರಸಾರವಾಗಲಿದೆ.
ಜೀ ಕನ್ನಡದಲ್ಲಿ 'ಮಹಾನಾಯಕ' ನಿಲ್ಲಿಸುವಂತೆ ರಾಘವೇಂದ್ರ ಹುಣಸೂರುಗೆ ಬೆದರಿಕೆ ಕರೆ!
ತೀರ್ಪುಗಾರರಾದ ಜಗ್ಗೇಶ್, ರಕ್ಷಿತಾ ಹಾಗೂ ಯೋಗರಾಜ್ ಭಟ್ರು ಕಾಂಬಿನೇಷನ್ ಕಾಮೆಂಟ್ರಿ ಕೇಳಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಚಾಂಪಿಯನ್‌ಶಿಪ್ ಹೇಗಿರುತ್ತೆ? ಯಾರೆಲ್ಲಾ ಇರುತ್ತಾರೆ?
ಈಗಾಗಲೇ ನಡೆದಿರುವ ಮೂರು ಕಾಮಿಡಿ ಸೀಸನ್‌ಗಳಲ್ಲಿ ಬೆಸ್ಟ್ ಕಂಟೆಸ್ಟೆಂಟ್‌ಗಳನ್ನು ಆಯ್ಕೆ ಮಾಡಿಕೊಂಡು ತಂಡವನ್ನಾಗಿ ರಚಿಸಲಾಗುತ್ತದೆ. ಪ್ರತಿ ತಂಡವೂ ಒಂದೊಂದು ಸ್ಕಿಟ್ ಮಾಡುವ ಮೂಲಕ ಎಲ್ಲರನ್ನೂ ಮನೋರಂಜಿಸಿ ಅಂಕಗಳನ್ನು ಪಡೆದುಕೊಳ್ಳುತ್ತಾರೆ. ಪ್ರತಿ ಸೀಸನ್‌ನಂತೆ ಈ ಸೀಸನ್‌ನಲ್ಲೂ ಮಾಸ್ಟರ್ ಆನಂದ್ ನಿರೂಪಣೆ ಮಾಡಲಿದ್ದಾರೆ.
ಕಳೆದ ಸೀಸನ್‌ನಲ್ಲಿ ರಾಜೇಶ್ ಪೂಜಾರಿ ವಿನ್ನರ್ ಟ್ರೋಫಿ ಪಡೆದುಕೊಂಡು, 8 ಲಕ್ಷ ರೂಪಾಯಿ ನಗದು ಬಹುಮಾನ ಪಡೆದುಕೊಂಡಿದ್ದರು. ಒಟ್ಟಿನಲ್ಲಿ ಮನೆಯಲ್ಲಿ ಕೂತು ಕೂತು ಬೋರ್ ಆಗಿದ ಅಜ್ಜ, ಅಜ್ಜಿ, ಪುಟ್ಟ ಮಕ್ಕಳು, ಬ್ಯುಸಿ ಶೆಡ್ಯೂಲ್‌ನಲ್ಲಿ ನಾನ್‌ಸ್ಟಾಪ್ ಕೆಲಸ ಮಾಡುತ್ತಿರುವ ಅಪ್ಪ-ಅಮ್ಮಂದಿರಿಗೆ ಇದೀಗ ಫುಲ್ ಡೋಸ್ ಮನೋರಜನೆ.