ಕ್ರಿಕೆಟಿಗ ಚಾಹಲ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಆರ್‌ಜೆ ಮಹ್ವಾಶ್ ಮೌನ ಮುರಿದಿದ್ದಾರೆ. ತಾನು ಅವಿವಾಹಿತೆ ಹಾಗೂ ಸಿಂಗಲ್ ಆಗಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮದುವೆಯ ಪರಿಕಲ್ಪನೆಯ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮುಂಬೈ (ಏ.5): ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರ ವೈಯಕ್ತಿಕ ಜೀವನ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದೆ. ಧನಶ್ರೀ ವರ್ಮ ಜೊತೆಗಿನ ವಿಚ್ಛೇದನ ಪಡೆದ ಬಳಿಕ ಅವರು ಆರ್‌ಜೆ ಮಹ್ವಾಶ್‌ ಜೊತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ವದಂತಿಗಳು ಕಳೆದ ತಿಂಗಳಿನಿಂದ ಜೋರಾಗಿ ಹಬ್ಬುತ್ತಿದೆ. ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಸ್ಟೇಡಿಯಂನಲ್ಲಿಯೇ ವೀಕ್ಷಣೆ ಮಾಡಿದ್ದರು. ವರದಿಗಳ ಬಗ್ಗೆ ಅವರು ನೇರವಾಗಿ ಪ್ರತಿಕ್ರಿಯಿಸದಿದ್ದರೂ, ಆರ್ ಜೆ ಮಹ್ವಾಶ್ ಇತ್ತೀಚೆಗೆ ತಮ್ಮ ರಿಲೇಷನ್‌ಷಿಪ್‌ ಸ್ಟೇಟಸ್‌ ಬಗ್ಗೆ ಮಾತನಾಡಿದ್ದಾರೆ.

ಯುವಾ ಜೊತೆಗಿನ ಸಂಭಾಷಣೆಯ ಸಮಯದಲ್ಲಿ, ಆರ್ ಜೆ ಮಹ್ವಾಶ್ ಅವರು ತಾನು ಅವಿವಾಹಿತೆ ಹಾಗೂ ಸಿಂಗಲ್‌ ಆಗಿರುವುದಾಗಿ ತಿಳಿಸಿದ್ದಾರೆ. "ನಾನು ತುಂಬಾ ಒಂಟಿ, ಮತ್ತು ಇಂದಿನ ಕಾಲದಲ್ಲಿನ ಮದುವೆಯ ಪರಿಕಲ್ಪನೆ ನನಗೆ ಅರ್ಥವಾಗುತ್ತಿಲ್ಲ. ನಾನು ಮದುವೆಯಾಗಬೇಕಾದಾಗ ಮಾತ್ರ ಡೇಟಿಂಗ್ ಮಾಡುವ ವ್ಯಕ್ತಿ. ನಾನು ಕ್ಯಾಶುಯಲ್ ಡೇಟ್‌ಗಳಿಗೆ ಹೋಗುವುದಿಲ್ಲ ಏಕೆಂದರೆ ನಾನು ಮದುವೆಯಾಗಲು ಬಯಸುವ ಯಾರೊಂದಿಗಾದರೂ ಮಾತ್ರ ಡೇಟಿಂಗ್ ಮಾಡುತ್ತೇನೆ. ಧೂಮ್ ಚಿತ್ರದಲ್ಲಿರುವಂತೆ, ತನ್ನ ಹೆಂಡತಿ ಮತ್ತು ಮಕ್ಕಳನ್ನು ಬೈಕ್ ಹಿಂದೆ ನೋಡುವ ವ್ಯಕ್ತಿ ನಾನು." ಎಂದು ಹೇಳಿದ್ದಾರೆ.

"ಶಾದಿ ಕಾ ಕಾನ್ಸೆಪ್ಟ್ ಸಮಜ್ ನಹಿ ಆ ರಹಾ ಹೈ (ನನಗೆ ಮದುವೆಯ ಪರಿಕಲ್ಪನೆ ಅರ್ಥವಾಗುತ್ತಿಲ್ಲ), ಆದ್ದರಿಂದ ನಾನು ಅದನ್ನು ನಿಲ್ಲಿಸಿದ್ದೇನೆ" ಎಂದು ಅವರು ಹೇಳಿದರು.

ಈ ವೇಳೆ ಅತ್ಯಂತ ಮಹತ್ವದ ಸಂಗತಿ ತಿಳಿಸಿದ ಮಹ್ವಾಶ್‌, ತನಗೆ 19 ವರ್ಷವಾಗಿದ್ದಾಗಲೇ ನಿಶ್ಚಿತಾರ್ಥವಾಗಿತ್ತು ಎಂದಿದ್ದಾರೆ. “ನನಗೆ 19ನೇ ವಯಸ್ಸಿನಲ್ಲಿ ನಿಶ್ಚಿತಾರ್ಥವಾಗಿತ್ತು, ಮತ್ತು ನಾನು 21ನೇ ವಯಸ್ಸಿನಲ್ಲಿ ಅದನ್ನು ರದ್ದುಗೊಳಿಸಿದೆ. ಅಲಿಘಢದಂತಹ ಸಣ್ಣ ಪಟ್ಟಣದಲ್ಲಿ ಬೆಳೆದ ನಮಗೆ ಒಳ್ಳೆಯ ಗಂಡನನ್ನು ಹುಡುಕಿ ಮದುವೆಯಾಗಬೇಕು ಎನ್ನುವುದು ಒಂದೇ ಆಸೆಯಾಗಿತ್ತು. ಅದು ನಮ್ಮ ಗುರಿಯಾಗಿತ್ತು. ಹಾಗಾಗಿ 19ನೇ ವರ್ಷಕ್ಕೆ ನಾನು ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದೆ. ಆದರೆ, ಸಂಬಂಧ ಸರಿಬರದ ಹಿನ್ನಲೆಯಲ್ಲಿ 21ನೇ ವರ್ಷದಲ್ಲಿ ಬ್ರೇಕಪ್‌ ಆಯಿತು' ಎಂದಿದ್ದಾರೆ.

ರೋಹಿತ್ ಶರ್ಮಾ ಪತ್ನಿ ರಿತಿಕಾ, ಧನಶ್ರೀ ವರ್ಮಾರನ್ನು ಶುಗರ್ ಡ್ಯಾಡಿ ಎಂದರಾ? ಏನಿದು ವಿವಾದ

ಇತ್ತೀಚೆಗೆ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ರೀಲ್‌ನಲ್ಲಿ, ಮಹ್ವಾಶ್ ತನಗೆ ಸರ್ವಸ್ವವಾಗುವ ಒಬ್ಬ ವ್ಯಕ್ತಿಯನ್ನು ಬಯಸುವುದರ ಬಗ್ಗೆ ಮಾತನಾಡಿದ್ದಾಳೆ. ಕ್ಲಿಪ್‌ನಲ್ಲಿ, "ನನ್ನ ಜೀವನದಲ್ಲಿ ಯಾವ ಹುಡುಗ ಬಂದರೂ, ಅವನು ನನ್ನ ಜೀವನದ ಏಕೈಕ ಹುಡುಗ. ಅವನು ನನ್ನ ಸ್ನೇಹಿತನಾಗಿರುತ್ತಾನೆ, ಅವನು ನನ್ನ ಗೆಳೆಯನಾಗಿರುತ್ತಾನೆ, ಅವನು ನನ್ನ ಗಂಡನಾಗಿರುತ್ತಾನೆ. ನನ್ನ ಜೀವನವು ಅವನ ಸುತ್ತ ಸುತ್ತುತ್ತದೆ. ನನಗೆ ನಿಷ್ಪ್ರಯೋಜಕ ಜನರು ಬೇಡ. ಆ ಸನ್ನಿವೇಶದಲ್ಲಿ ನಾನು ಇತರ ಹುಡುಗರೊಂದಿಗೆ ಮಾತನಾಡಲು ಸಾಧ್ಯವಿಲ್ಲ' ಎಂದಿದ್ದಾರೆ.

ಕೊನೆಗೂ ಬಯಲಾಯ್ತು ಚಹಲ್-ಧನಶ್ರೀ ಡಿವೋರ್ಸ್ ಸೀಕ್ರೇಟ್; ಇದೇ ಕಾರಣಕ್ಕೆ ಕುಟುಂಬದಲ್ಲಿ ಮೂಡಿತ್ತು ಬಿರುಕು!