ಮಾನವ ಹಕ್ಕುಗಳ ಉಲ್ಲಂಘನೆ ಆರೋಪ: ಬಿಗ್‌ಬಾಸ್ ಮನೆಗೆ ಮಹಿಳಾ ಆಯೋಗ ಭೇಟಿ?

ಬಿಗ್‌ಬಾಸ್ ಕನ್ನಡ ಸೀಸನ್ 11 ರಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಮಹಿಳಾ ಆಯೋಗದ ತಂಡವು ಬಿಗ್‌ಬಾಸ್ ಮನೆಗೆ ಭೇಟಿ ನೀಡಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

Women s Commission Set to Shake Up Bigg Boss House

ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 11ನೇ ಆವೃತ್ತಿಯ ಬಿಗ್‌ಬಾಸ್ ಶೋ ಬಗ್ಗೆ ಅಪಸ್ವರ ಕೇಳಿ ಬಂದಿದ್ದು, ಕೆಲ ದಿನಗಳ ಹಿಂದಷ್ಟೇ ಈ ಶೋ ವಿರುದ್ಧ ಮಹಿಳಾ ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿತ್ತು. ಬಿಗ್‌ ಬಾಸ್‌ ಶೋದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮಹಿಳಾ ವಕೀಲೆ ರಕ್ಷಿತಾ ಸಿಂಗ್  ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಬಿಗ್ ಬಾಸ್‌ ಮನೆಗೆ ಮಹಿಳಾ ಆಯೋಗದ ತಂಡ ಭೇಟಿ ನೀಡಲಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಪೊಲೀಸರ ಜೊತೆಗೆ ಬಿಗ್‌ಬಾಸ್‌ ಮನೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನೀಡಲಿದ್ದಾರೆ. ಅಲ್ಲಿ ಹೆಣ್ಮಕ್ಕಳ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ. ಶೋನಲ್ಲಿ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ಆಗಿರುವುದು ಕಂಡು ಬಂದಲ್ಲಿ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾದಲ್ಲಿ ಬಿಗ್ಬಾಸ್‌ನ ಆಟದ ಶೈಲಿ ಬದಲಾಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. 

ಬಿಗ್ ಬಾಸ್ ಕನ್ನಡ ಸಪ್ರೈಸ್‌ ಎಲಿಮಿನೇಷನ್, ಮೊದಲನೇವಾರ ಯಮುನಾ ಶ್ರೀನಿಧಿ ಔಟ್!

ನಟ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್‌ ಶೋ ಈ ಬಾರಿ ಸೆಪ್ಟೆಂಬರ್ 29 ರಂದು ಅದ್ದೂರಿಯಾಗಿ ಆರಂಭವಾಗಿತ್ತು. ಇದರಲ್ಲಿ ಈ ಬಾರಿ  ಸ್ವರ್ಗ ಮತ್ತು ನರಕ ಎಂದು  ಸ್ಪರ್ಧಿಗಳನ್ನು  ವಿಭಾಗಿಸಿ ಆಟವಾಡಲಾಗುತ್ತಿತ್ತು.  ಆದರೆ ಈ ಆಟದ ಕೆಲ ನಿಯಮಗಳಿಂದ ಮಹಿಳೆಯರ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. 

ವಕೀಲೆ ನೀಡಿದ ದೂರಿನಲ್ಲಿಇರೋದೇನು

ಬಿಗ್​ಬಾಸ್ 11 ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪುರುಷ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಸ್ವರ್ಗ ಮತ್ತು ನರಕ ಎಂದು ಎರಡು ವಿಭಾಗದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಕೊಠಡಿ ತುಂಬಾ ಕ್ಯಾಮರಾ ಇಟ್ಟು ಅವರ ಚಲನವಲನಗಳನ್ನು ಅವರು ಚಟುವಟಿಕೆಗಳನ್ನು ಪ್ರಸಾರ ಮಾಡಲಾಗುತ್ತದೆ. ವಾಹಿನಿಯಲ್ಲಿ ಪ್ರಸಾರವಾಗಿರುವ ದೃಶ್ಯಾವಳಿಯಂತೆ ನರಕದಲ್ಲಿರೋರಿಗೆ ಕೇವಲ ಗಂಜಿ ಮಾತ್ರ ನೀಡಲಾಗುತ್ತಿದೆ. ಭಾರತದ ಸಂವಿಧಾನ ಪ್ರಕಾರ ನಾಗರಿಕರಿಗೆ ಪೌಷ್ಟಿಕ ಆಹಾರವನ್ನು ಕೊಡದಿರುವುದು ಅಪರಾಧ. ಹಾಗೆಯೇ ಇಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಲಗುವ ವ್ಯವಸ್ಥೆಯನ್ನೂ ನೀಡಿಲ್ಲ. ಶೌಚಾಲಯ ಉಪಯೋಗಿಸಲು ಬಲವಂತಕ್ಕೆ ಒಳಪಡಿಸುವುದರಿಂದ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ಪರ್ಧಿಗಳೊಂದಿಗೆ ಕಾನೂನು ಬದ್ಧವಾಗಿ ಒಪ್ಪಂದ ಮಾಡಿಕೊಂಡಿದ್ದು, ಇಂತಹ ನಿರ್ಬಂಧಗಳನ್ನು ಹೇರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮಹಿಳಾ ವಕೀಲರೊಬ್ಬರು ದೂರು ನೀಡಿದ್ದರು.

ಚೈತ್ರಾ ಕುಂದಾಪುರಗೆ ಮಾತು ಕಲಿಸಿದ್ದೇ ರಂಜಿತ್​ ಅಂತೆ: ಚೈತ್ರಾರ ಮಾತು ಕೇಳಿ ಖುದ್ದು ಸುದೀಪ್​ ಶಾಕ್​!

Latest Videos
Follow Us:
Download App:
  • android
  • ios