ಫೈಲ್​ ಕೊಟ್ಟು ಮೋಸ ಹೋಗಿದ್ದಾಳೆ ತುಳಸಿ. ಮೀಟಿಂಗ್​ಗಿಂತ ಮೊದಲು ಫೈಲ್​ ರೆಡಿ ಮಾಡಲು ಸಮರ್ಥ್​ ಸಮರ್ಥನಾಗುತ್ತಾನಾ? ಕುತೂಹಲ ಘಟ್ಟದಲ್ಲಿ ಶ್ರೀರಸ್ತು ಶುಭಮಸ್ತು.  

ಅವಿಯ ಕಚೇರಿಯ ಫೈಲ್​ ಕೊಡುವಂತೆ ಯಾರೋ ಕೇಳಿಕೊಂಡು ಬಂದಾಗ ತುಳಸಿ ಹಿಂದು ಮುಂದು ನೋಡದೇ ಅದನ್ನು ಕೊಟ್ಟುಬಿಟ್ಟಿದ್ದಾಳೆ. ಅಷ್ಟಕ್ಕೂ ಇದು ದೀಪಿಕಾಳ ಕುತಂತ್ರ. ತುಳಸಿಯನ್ನು ಹೇಗಾದರೂ ಮಾಡಿ ಎಲ್ಲರ ದೃಷ್ಟಿಯಲ್ಲಿ ಕೆಳಗೆ ಮಾಡಬೇಕು ಎನ್ನುವುದು ದೀಪಿಕಾ ಮತ್ತು ಅತ್ತೆ ಶಾರ್ವರಿಯ ತಂತ್ರ. ಮನೆಯ ಯಜಮಾನಿಕೆಯನ್ನು ತುಳಸಿ ಕೈಯಲ್ಲಿ ಕೊಟ್ಟಿರುವ ಕಾರಣ, ಅದನ್ನು ವಾಪಸ್​ ಪಡೆಯಬೇಕು ಎನ್ನುವ ತಂತ್ರ ಹೆಣೆದಿದ್ದಾರೆ. ಆದರೆ ಪಾಪ ಮುಗ್ಧಳಾದ ತುಳಸಿಗೆ ಇದ್ಯಾವುದರ ಅರಿವೇ ಇಲ್ಲ. ಅವಳಿಗೆ ಯಜಮಾನಿಕೆಯೂ ಬೇಕಿರಲಿಲ್ಲ. ಆದರೆ ಅದು ತಂತಾನೇ ಬಂದುಬಿಟ್ಟಿದೆ. ಆದರೆ ಇದನ್ನು ಶಾರ್ವರಿ ಸಹಿಸುತ್ತಿಲ್ಲ. ಇದೇ ಕಾರಣಕ್ಕೆ ಸೊಸೆ ದೀಪಿಕಾ ಜೊತೆಗೂಡಿ ಕುತಂತ್ರ ರೂಪಿಸಿದ್ದಾಳೆ.

ಅರ್ಜೆಂಟ್​ ಆಗಿ ಫೈಲ್​ ಬೇಕು ಎಂದು ವ್ಯಕ್ತಿಯೊಬ್ಬ ಮನೆಗೆ ಬಂದಾಗ ಅದನ್ನು ತುಳಸಿ ಕೊಟ್ಟುಬಿಟ್ಟಿದ್ದಾಳೆ. ಮಕ್ಕಳಿಗೆ ತೊಂದರೆ ಆಗಬಾರದು ಎಂದು ಅವಳು ಈ ರೀತಿಮಾಡಿದ್ದಾಳೆ. ಆದರೆ ಅವಿ, ತುಳಸಿಗೆ ಚೆನ್ನಾಗಿ ಬೈದಿದ್ದಾನೆ. ಎಲ್ಲರೂ ಸೇರಿ ತುಳಸಿಯ ಮೇಲೆ ಹರಿಹಾಯ್ದಿದ್ದಾರೆ. ತುಳಸಿ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾಳೆ. ಮಾಡಿದ್ದು ತಪ್ಪಾಗಿದೆ. ಏನೋ ಒಳ್ಳೆಯ ಉದ್ದೇಶದಲ್ಲಿ ಅವಳು ಕೊಟ್ಟುಬಿಟ್ಟಿದ್ದಾಳೆ. ಆದರೆ ಅಂದು ನಡೆಯಬೇಕಿರುವ ಮೀಟಿಂಗ್​ನ ಮಹತ್ವದ ಫೈಲ್​ ಆಗಿತ್ತು. ಅದಕ್ಕಾಗಿಯೇ ಸಿಟ್ಟಿನಿಂದ ಎಲ್ಲರೂ ಬೈದಿದ್ದಾರೆ. ದೀಪಿಕಾ ಮತ್ತು ಶಾರ್ವರಿಯಂತೂ ಮನಸಾರೆ ಖುಷಿಪಡುತ್ತಿದ್ದಾರೆ.

ದೂರವಾಗಿರೋ ಪತಿ ಮೇಲೆ ರಜನೀ ಪುತ್ರಿಗೆ ಮತ್ತೆ ಶುರುವಾಯ್ತಾ ಪ್ರೀತಿ? ಮತ್ತೆ ಒಂದಾಗತ್ತಾ ಜೋಡಿ?

ಆಗ ಮಧ್ಯೆ ಪ್ರವೇಶಿಸಿದ ಸಮರ್ಥ್​ ಏನಾಯ್ತು ಎಂದು ಪ್ರಶ್ನಿಸಿದ್ದಾನೆ. ಅಮ್ಮನ ಮೇಲೆ ಎದುರಿಗೆ ದ್ವೇಷದಂತೆ ಮಾತನಾಡುತ್ತಿದ್ದರೂ, ಒಳಗೇ ಅಮ್ಮನ ಮೇಲೆ ಅಷ್ಟೇ ಪ್ರೀತಿ ಇದೆ ಅವನಿಗೆ. ಅಮ್ಮನಿಗೆ ಏನೇ ಸಣ್ಣ ನೋವಾದರೂ ಅದನ್ನು ಆತ ಸಹಿಸಿಕೊಳ್ಳುವುದಿಲ್ಲ. ತನ್ನ ಅಮ್ಮ ಈ ಮನೆಯಲ್ಲಿ ಖುಷಿಯಿಂದ ಇಲ್ಲ ಎನ್ನುವ ಸತ್ಯ ಅವನಿಗೂ ಗೊತ್ತು. ಆದರೆ ಅಮ್ಮ ತಮಗೆ ಹೇಳದೇ ಮದುವೆಯಾಗಿ ಹೋದಳು ಎನ್ನುವ ಚಿಕ್ಕ ನೋವು ಇದೆ. ಇದೇ ಕಾರಣಕ್ಕೆ ತುಳಸಿ ಎದುರಿಗೆ ಬಂದಾಗ ಮೇಡಂ, ಯಜಮಾನಿ ಎಂದೆಲ್ಲಾ ಮಾತಿನಲ್ಲಿಯೇ ಚುಚ್ಚುತ್ತಾನೆ. ಆದರೆ ಅಮ್ಮನಿಗೆ ಸ್ವಲ್ಪ ನೋವಾದರೂ ಸಹಿಸಿಕೊಳ್ಳುವುದು ಆತನಿಂದ ಸಾಧ್ಯವಿಲ್ಲ.

ಇದೀಗ ಈ ಸೀರಿಯಲ್​ಗೆ ಟ್ವಿಸ್ಟ್​ ಬಂದಿದೆ. ಎಲ್ಲರೂ ಸೇರಿ ಫೈಲ್​ಗೋಸ್ಕರ ಅಮ್ಮನಿಗೆ ಬೈಯುವುದನ್ನು ನೋಡಲು ಆಗದ ಸಮರ್ಥ್​, ಒಂದು ಫೈಲ್​ ತಾನೆ? ಅದೇನಾಯ್ತು ಅಂತ ಎಲ್ಲರೂ ಬೈತಾ ಇದ್ದೀರಾ? ಮೀಟಿಂಗ್​ನಿಂದ ಮುಂಚೆ ಅದನ್ನು ರೆಡಿ ಮಾಡಿದ್ರೆ ಆಯ್ತಲ್ವಾ ಎಂದು ಪ್ರಶ್ನಿಸಿದ್ದಾನೆ. ಅವಿ ಮತ್ತು ಅಭಿ ಸೇರಿ ಅವನಿಗೆ ಟಾಂಟ್​ ಕೊಟ್ಟಿದ್ದಾರೆ. ಹಾಗಿದ್ರೆ ನೀನು ಅದನ್ನು ರೆಡಿ ಮಾಡುತ್ತೀಯಾ ಎಂದುಕೇಳಿದ್ದಾರೆ. ಈ ಚಾಲೆಂಜ್​ ಅನ್ನು ಸಮರ್ಥ್​ ತೆಗೆದುಕೊಂಡಿದ್ದಾನೆ. ತಾನೇ ಫೈಲ್​ ರೆಡಿ ಮಾಡಿಕೊಡುವುದಾಗಿ ಹೇಳಿದ್ದಾನೆ. ಫೈಲ್​ ರೆಡಿ ಮಾಡಲು ಸಮರ್ಥ್​ ಸಮರ್ಥನಾಗುತ್ತಾನಾ? ಇದರಿಂದ ಅವನಿಗೆ ಒಳ್ಳೆಯ ಹುದ್ದೆ ಸಿಗುತ್ತಾ? ಅಮ್ಮನ ಮರ್ಯಾದೆ ಕಾಪಾಡುತ್ತಾನಾ ಅಥವಾ ಇದರಲ್ಲಿಯೂ ದೀಪಿಕಾ ಏನಾದರೂ ಮೋಸ ಮಾಡುತ್ತಾಳಾ ಎನ್ನುವುದು ಈಗಿರುವ ಪ್ರಶ್ನೆ. 

ಶಾರುಖ್​ ಪುತ್ರನ ಬಿಜಿನೆಸ್​ ಬಲು ಜೋರು: ಒಂದು ಲಕ್ಷ ರೂ. ಜಾಕೆಟ್​ 24 ಗಂಟೆಯಲ್ಲಿ ಸೋಲ್ಡ್​ ಔಟ್​!