ಧಾರಾವಾಹಿಗಳಿಗೆ ಲೇಡಿ ವಿಲನ್​ಗಳ  ತಂತ್ರ  ನಾಯಕರು ಎನಿಸಿಕೊಂಡವರಿಗೂ ತಿಳಿಯುವುದಿಲ್ಲ. ಗಂಡಸರನ್ನೇಲೆ ಇಷ್ಟು ಮುಗ್ಧ ಮಾಡುವುದು ಎಂದು ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು.  

ಬಹುತೇಕ ಯಾವುದೇ ಸೀರಿಯಲ್​ಗಳನ್ನು ತೆಗೆದುಕೊಳ್ಳಿ. ಪ್ರತಿಶತ 95ಕ್ಕೂ ಅಧಿಕ ಹೆಚ್ಚು ಧಾರಾವಾಹಿಗಳು ಮಹಿಳಾ ಪ್ರಧಾನವಾಗಿರುತ್ತವೆ. ಅವರೇ ಹೀರೋ, ಅವರೇ ವಿಲನ್​. ಇದಕ್ಕೆ ಕಾರಣ, ಸೀರಿಯಲ್​ ಪ್ರೇಮಿಗಳ ಪೈಕಿ ಅತಿಹೆಚ್ಚಿನವರು ಮಹಿಳೆಯರೇ ಎನ್ನುವುದು. ಮಹಿಳಾ ವೀಕ್ಷಕರನ್ನು ಕೇಂದ್ರೀಕರಿಸಿಕೊಂಡು ಧಾರಾವಾಹಿಗಳನ್ನು ರೂಪಿಸಲಾಗುತ್ತದೆ. ಅಲ್ಲಿ ನಡೆಯುವ ಘಟನೆಗಳನ್ನು ತಮ್ಮ ಸ್ವಂತ ಮನೆಯ ಘಟನೆಗಿಂತಲೂ ಹೆಚ್ಚಾಗಿ ಕಾಳಜಿ ವಹಿಸಿ ನೋಡುವ ದೊಡ್ಡ ವರ್ಗವೇ ಇದೆ. ಆದರೆ ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಗಂಡಸರು ಇದ್ದರೂ ಅಷ್ಟೇ, ಬಿಟ್ಟರೂ ಅಷ್ಟೇ ಅನ್ನಿಸುವ ಹಾಗೆ ನಾಮ್​ಕೇ ವಾಸ್ತೆ ಇದ್ದರೆ, ಇನ್ನಷ್ಟು ಸೀರಿಯಲ್​ಗಳಲ್ಲಿ ಪತ್ನಿ, ತಾಯಿ, ಚಿಕ್ಕಮ್ಮನವರ ಕುತಂತ್ರ ಗಂಡಸರಿಗೆ ಅರ್ಥ ಆಗದೇ ಇರುವುದು ಮಾತ್ರ ವಿಚಿತ್ರವಾದರೂ ಸತ್ಯವೇ ಎನ್ನುವುದು ಪುರುಷ ಸೀರಿಯಲ್​ ಪ್ರೇಮಿಗಳ ಅಭಿಮತ. 

ಇದೀಗ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಒಬ್ಬರು ಸಾಕಾಗಲ್ಲ ಎಂದು ಇಬ್ಬರು ಲೇಡಿ ವಿಲನ್​ಗಳು ಬಂದಿದ್ದಾರೆ. ಶಾರ್ವರಿ ಜೊತೆ ಸೊಸೆ ದೀಪಿಕಾ ಸೇರಿಕೊಂಡಿದ್ದಾಳೆ. ಸದಾ ಒಂದಿಲ್ಲೊಂದು ಕುತಂತ್ರ ಹೆಣೆಯುತ್ತಲೇ ಇರುವುದು ಇವರಿಗೆ ರೂಢಿ. ಇದೀಗ ಅಮ್ಮ ತುಳಸಿಯ ಮೇಲೆ ಕೆಟ್ಟದ್ದಾಗಿ ಮಾತನಾಡಿದ್ದಾನೆ ಎಂದು ತಮ್ಮ ಅವಿಯ ಮೇಲೆ ಅಭಿ ಕೈ ಎತ್ತಲು ಹೋಗಿದ್ದಾನೆ. ಇದನ್ನು ಕೋಪದಲ್ಲಿ ಮಾಡಿರಬಹುದು, ಅಣ್ಣ ತನ್ನ ಬಳಿ ಬಂದು ಕ್ಷಮೆ ಕೇಳಿಯೇ ಕೇಳುತ್ತಾನೆ ಎಂದು ಅವಿ ಹೇಳುತ್ತಿದ್ದಾನೆ. ಆದರೆ ಅಣ್ಣ- ತಮ್ಮಂದಿರ ನಡುವೆ ತಂದಿಟ್ಟು ಮಜ ನೋಡಲು ಬಯಸಿದ್ದಾರೆ ಈ ಅತ್ತೆ-ಸೊಸೆ.

ಭಾಗ್ಯಾಳಿಗೆ ಸಲಹೆ ಕೊಡೋಹಾಗೆ ನಿಜ ಜೀವನದಲ್ಲೂ ಹೀಗೇ ಹೇಳ್ತೀರಾ? ನೆಟ್ಟಿಗರ ವಾದ- ಪ್ರತಿವಾದ

ಇದು ಸಾಧ್ಯವೇ ಇಲ್ಲ ಎಂದು ಅವರು ಹೇಳಿದರೂ, ತನ್ನಣ್ಣನ ಬಗ್ಗೆ ನನಗೆ ಗೊತ್ತು ಎಂದಿದ್ದಾನೆ ಅವಿ. ಅದೇ ಇನ್ನೊಂದೆಡೆ ಆತನ ಮೇಲೆ ಕೈ ಮಾಡಿದ್ದಕ್ಕೆ ಅಭಿ ಪಶ್ಚಾತ್ತಾಪ ಪಡುತ್ತಿದ್ದು, ತಮ್ಮನ ಕ್ಷಮೆ ಕೋರಲು ಹೋಗಿದ್ದಾನೆ. ಇತ್ತ ದೀಪಿಕಾ, ಗಂಡ ಅಭಿಯ ಬಳಿ, ನಿಮ್ಮ ಅಣ್ಣ ಬಂದು ಕ್ಷಮೆ ಕೋರಲು ಸಾಧ್ಯವೇ ಇಲ್ಲ. ಒಂದು ವೇಳೆ ಇಂದು ರಾತ್ರಿಯ ಒಳಗೆ ಅವರು ಬರಲಿಲ್ಲ ಎಂದರೆ ನಿಮ್ಮ ಮೇಲೆ ಪ್ರೀತಿ ಇಲ್ಲ ಎಂದೇ ಅರ್ಥ ಎಂದಿದ್ದಾಳೆ. ಆದರೆ ಅಣ್ಣ ಬಂದೇ ಬರುತ್ತಾನೆ ಎನ್ನುವುದು ಅವಿಯ ಅಭಿಮತ.

ಅದರಂತೆ ಅಭಿ ಕೂಡ ಕ್ಷಮೆ ಕೋರಲು ಹೋದಾಗ ಶಾರ್ವರಿ ಎದುರಾಗಿದ್ದಾಳೆ. ರಾತ್ರಿಯ ಒಳಗೆ ಕ್ಷಮೆ ಕೋರಿ ಬಿಟ್ಟರೆ ಅಣ್ಣ-ತಮ್ಮ ಒಂದಾಗುತ್ತಾರೆ ಎನ್ನುವ ಕಾರಣಕ್ಕೆ ಕುತಂತ್ರ ರೂಪಿಸಿದ್ದಾಳೆ. ಈಗ ಅವಿ ತುಂಬಾ ಬೇಸರದಲ್ಲಿ ಇದ್ದಾನೆ. ನಾಳೆ ಬೆಳಿಗ್ಗೆ ಹೋಗಿ ಅವನ ಬಳಿ ಮಾತನಾಡು ಎಂದಿದ್ದಾಳೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅತ್ತ ಅವಿಗಾಗಲೀ, ಇತ್ತ ಅಭಿಗಾಗಲೀ ದೀಪಿಕಾ ಶಾರ್ವರಿ ತಂತ್ರ ರೂಪಿಸುತ್ತಿದ್ದಾರೆ ಎಂದು ತಿಳಿಯುತ್ತಲೇ ಇಲ್ಲ. ಒಂದು ಸಲವಾಗಿದ್ರೆ ಪರವಾಗಿಲ್ಲ. ಪ್ರತಿ ಸಲವೂ ಹೀಗೆಯೇ ಆದರೂ ಅದು ಗೊತ್ತಾಗುವುದೇ ಇಲ್ಲ. ಈ ಸೀರಿಯಲ್​ ಮಾತ್ರವಲ್ಲದೇ ಸೀತಾರಾಮದಲ್ಲಿ ಚಿಕ್ಕಮ್ಮ ಭಾರ್ಗವಿ ಬಗ್ಗೆ ರಾಮ್​ಗೆ ತಿಳಿಯದೇ ಹೋದರೆ, ಅಮೃತಧಾರೆಯಲ್ಲಿ ಚಿಕ್ಕಮ್ಮ ಶಕುಂತಲಾ ಕುತಂತ್ರದ ಬಗ್ಗೆ ಗೌತಮ್​ಗೆ ತಿಳಿಯುವುದಿಲ್ಲ. ಹೀಗೆ ಪ್ರತಿ ಸೀರಿಯಲ್​ಗಳಲ್ಲಿಯೂ ನಾಯಕರನ್ನು ಇಷ್ಟು ಮುಗ್ಧರನ್ನಾಗಿ, ತಿಳಿವಳಿಕೆ ಇಲ್ಲದವರನ್ನಾಗಿ ಮಾಡುವುದು ಎಷ್ಟು ಸರಿ ಎನ್ನುವುದು ಒಂದು ವರ್ಗದ ವಾದ. 

https://kannada.asianetnews.com/cine-world/rakhi-sawant-slips-into-mumbai-in-burqa-after-deadline-to-surrender-adil-khan-statement-suc-scr8jh