ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಲ್ಲಿ ಮೋಕ್ಷಿತಾ ಪೈ ಅವರು ಇದ್ದಾಗ ಅವರ ಮೊದಲು ಹೆಸರು ಐಶ್ವರ್ಯಾ ಎನ್ನೋದು ರಿವೀಲ್‌ ಆಗಿತ್ತು. ಈ ಬದಲಾವಣೆಗೆ ಕಾರಣ ಏನು ಎಂದು ಮೋಕ್ಷಿತಾ ಪೈ ಹೇಳಿದ್ದಾರೆ. 

ʼಬಿಗ್‌ ಬಾಸ್‌ ಕನ್ನಡ 11ʼ ಶೋನಲ್ಲಿ ಮೋಕ್ಷಿತಾ ಪೈ ಅವರು ಸ್ಪರ್ಧಿಯಾಗಿದ್ದರು. ಮೋಕ್ಷಿತಾ ಅವರು ದೊಡ್ಮನೆಯೊಳಗಡೆ ಹೋದಬಳಿಕ ಹೊರಗಡೆ ಕೆಲವರು, ಮೋಕ್ಷಿತಾ ಪೈ ಈ ಹಿಂದೆ ಹೆಣ್ಣುಮಗುವಿನ ಕಿಡ್ನ್ಯಾಪ್‌ ಮಾಡಿದ್ದರು ಎಂದು ಟ್ರೋಲ್‌ ಮಾಡಿದ್ದರು. ಅಷ್ಟೇ ಅಲ್ಲದೆ ಮೋಕ್ಷಿತಾ ಪೈ ಮೊದಲ ಹೆಸರು ಐಶ್ವರ್ಯಾ ಪೈ ಅಂತ ಕೂಡ ಹೇಳಿದ್ದರು. ಈ ಬಗ್ಗೆ ಸ್ವತಃ ಮೋಕ್ಷಿತಾ ಪೈ ಸ್ಪಷ್ಟನೆ ನೀಡಿದ್ದಾರೆ. 

ಹೆಸರು ಯಾಕೆ ಬದಲಾಯ್ತು? 
“ನನಗೆ ಹೆಸರು ಇಡುವಾಗ ನ್ಯೂಮರಾಲಜಿ ಪ್ರಕಾರ ಹೆಸರು ಇಟ್ಟಿರಲಿಲ್ಲ. ಮೋ ಹಾಗೂ ಟ ಅಕ್ಷರದಿಂದ ಹೆಸರು ಇಡಬೇಕಿತ್ತು. ʼಪಾರುʼ ಧಾರಾವಾಹಿ ಮಾಡುವಾಗ ಹೆಸರು ಬದಲಾಯಿಸಿ ಅಂತ ಹೇಳಿದ್ದರು. ಇದಾದ ಬಳಿಕ ಯಶಸ್ಸು ಸಿಗುತ್ತದೆ ಅಂತ ಹೇಳಿದ್ದರು. ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ, ನನಗೆ ಈ ಹೆಸರು ಆಗಿ ಬರತ್ತಾ ಅಂತ ನಾವು ಕೇಳಿದ್ದೇವೆ. ಸಂಖ್ಯಾಶಾಸ್ತ್ರಜ್ಞರು ನನಗೆ ಮೊನಿಷಾ ಅಂತ ಹೆಸರಿಡಿ ಅಂದರು. ಆಗ ನನಗೆ ಮೋಕ್ಷಿತಾ ಅಂತ ಹೆಸರು ಇಟ್ಟಿದ್ದಾರೆ. ನನಗೆ ಮರುನಾಮಕರಣ ಮಾಡಿದ್ದಾರೆ. ಚಿತ್ರರಂಗಕ್ಕೋಸ್ಕರ ನಾನು ಹೆಸರು ಬದಲಾಯಿಸಿಕೊಂಡಿದ್ದೇನೆ. ನಾನು ಎಲ್ಲರಿಗೂ ಸ್ಪಷ್ಟನೆ ಕೊಡೋಕೆ ಆಗೋದಿಲ್ಲ. ನನ್ನ ಜೊತೆಯಲ್ಲಿ ಇದ್ದವರಿಗೆ ನಾನು ಏನು ಅಂತ ಗೊತ್ತಿರತ್ತೆ” ಎಂದು ಮೋಕ್ಷಿತಾ ಪೈ ಅವರು ಹೇಳಿದ್ದಾರೆ. 

ನಿರಪರಾಧಿ ಅಂತ ಲೆಟರ್‌ ಇದೆ ಜನರಿಗೆ ತಲೆ ಕೆಡಿಸಿಕೊಳ್ಳಲ್ಲ; ಕಿಡ್ನಾಪ್ ಕೇಸ್‌ ಬಗ್ಗೆ ಮೌನ ಮುರಿದ ಮೋಕ್ಷಿತಾ

ಏನಿದು ಪ್ರಕರಣ? 
ಮೋಕ್ಷಿತಾ ಪೈ ಅವರು ಈ ಹಿಂದೆ ಟ್ಯೂಷನ್‌ ಹೇಳಿಕೊಡುತ್ತಿದ್ದರು. ಆಗ ಅವರ ವಿದ್ಯಾರ್ಥಿನಿಯೋರ್ವರನ್ನು ಪ್ರಿಯಕರನ ಜೊತೆ ಸೇರಿ ಕಿಡ್ನ್ಯಾಪ್‌ ಮಾಡಿಸಿ, ಇಪ್ಪತ್ತೈದು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆಗ ಮೋಕ್ಷಿತಾ ಪೈ ಹೆಸರು ಐಶ್ವರ್ಯಾ ಆಗಿತ್ತು. ಈ ಘಟನೆ 2014ರಲ್ಲಿ ನಡೆದಿತ್ತು. ಇದಾದ ಬಳಿಕ ಆ ಹುಡುಗಿಯ ಪಾಲಕರು ಮೋಕ್ಷಿತಾ ತಪ್ಪಿಲ್ಲ ಅಂತ ಹೇಳಿದ್ದರಂತೆ. ಹೀಗಾಗಿ ಈ ಪ್ರಕರಣ ಖುಲಾಸೆಯಾಗಿದೆ. ಈ ಬಗ್ಗೆಯೂ ಮೋಕ್ಷಿತಾ ಮಾತನಾಡಿದ್ದಾರೆ.

“ನಾನು ನಿರಪರಾಧಿ ಅಂತ ಸರ್ಟಿಫಿಕೇಟ್‌ ಇದೆ. ಮತ್ತೆ ಇದೇ ವಿಚಾರ ಇಟ್ಕೊಂಡು ಟ್ರೋಲ್ ಮಾಡ್ತಾರೆ ಅಂದ್ರೆ ನಾನು ಏನು ಹೇಳೋಕೆ ಆಗೋದಿಲ್ಲ. ಅದೀಗ ಮುಗಿದು ಹೋಗಿರೋ ವಿಚಾರ. ಈಗ ಅದನ್ನು ಕೆದಕೋದಿಕ್ಕೆ ಇಷ್ಟ ಪಡಲ್ಲ. ನನಗೆ ಕಾನೂನು ಮೂಲಕ ಆ ಟ್ರೋಲ್‌ ಮಾಡಿದವರಿಗೆ ಉತ್ತರ ಕೊಡುವ ಮನಸ್ಸು ಇಲ್ಲ. ಆ ನೋವು ಏನು ಅಂತ ನನಗೆ ಗೊತ್ತು, ಹೀಗಾಗಿ ನಾನು ಆಕ್ಷನ್‌ ತಗೊಳ್ತಿಲ್ಲ. ನಾನಂತೂ ಯಾರಿಗೂ ತೊಂದರೆ ಕೊಡೋದಿಲ್ಲ. ಬಿಗ್‌ ಬಾಸ್‌ ಮನೆಯಲ್ಲಿದ್ದಾಗಲೇ ಈ ವಿಚಾರ ಯಾಕೆ ಹೊರಗಡೆ ಬಂತು ಅಂತ ನನಗೆ ಗೊತ್ತಿಲ್ಲ. ಈ ಸಮಯದಲ್ಲಿ ಆ ರೀತಿ ಆಗಿದ್ದೂ ಒಳ್ಳೆಯದೇ ಆಗಿದೆ. ನನ್ನ ಅಭಿಮಾನಿಗಳು ನನ್ನ ಪರ ನಿಂತಿದ್ದು ನಿಜಕ್ಕೂ ಖುಷಿ ಕೊಟ್ಟಿದೆ” ಎಂದು ಮೋಕ್ಷಿತಾ ಪೈ ಹೇಳಿದ್ದಾರೆ. 

ಮೇಕಪ್‌ ಹಾಕಿರೋ ಬಿಗ್ ಬಾಸ್ ಮೋಕ್ಷಿತಾ ಪೈನ ನೆಟ್ಟಿಗರು ಕಂಡು ಹಿಡಿಯಲೇ ಇಲ್ಲ; ಫೋಟೋ ವೈರಲ್

ಅಂದಹಾಗೆ ʼಪಾರುʼ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ನಟಿಸಿದ್ದರು. ಈ ಸೀರಿಯಲ್‌ ಐದು ವರ್ಷಗಳಿಗೂ ಅಧಿಕ ಕಾಲ ಪ್ರಸಾರ ಆಗಿತ್ತು. ಇನ್ನು ಪರಭಾಷೆಯ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದಾರೆ. ಅಷ್ಟೇ ಅಲ್ಲದೆ ಈಗಾಗಲೇ ಅವರು ಸಿನಿಮಾವೊಂದರಲ್ಲಿ ನಟಿಸಿದ್ದು, ಆದಷ್ಟು ಬೇಗ ಆ ಚಿತ್ರ ರಿಲೀಸ್‌ ಆಗಲಿದೆಯಂತೆ. ಇನ್ನು ʼಬಿಗ್‌ ಬಾಸ್ʼ ಮನೆಯಲ್ಲಿ ಮೋಕ್ಷಿತಾ ಅವರ ಆಟ ಅನೇಕರಿಗೆ ಇಷ್ಟ ಆಗಿದೆ. ಮುಂದಿನ ದಿನಗಳಲ್ಲಿ ಅವರು ಮದುವೆಯಾಗಬೇಕು ಅಂತ ಮೋಕ್ಷಿತಾ ತಾಯಿ ಬಯಸುತ್ತಿದ್ದಾರೆ. ನೀವು ಏನು ಹೇಳ್ತೀರಾ?