ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಜೀವನದ ಕುರಿತಾದ ಮಾಹಿತಿ ಇಲ್ಲಿದೆ. ಅವರ ಕುಟುಂಬ, ಬಾಲ್ಯ, ಶಿಕ್ಷಣ, ವೃತ್ತಿ ಜೀವನದ ಬಗ್ಗೆ ತಿಳಿಯಿರಿ. ಅವರು ಪುನೀತ್ ರಾಜ್‌ಕುಮಾರ್ ಅವರ ಪತ್ನಿಯಾಗಿ ಮತ್ತು ನಿರ್ಮಾಪಕಿಯಾಗಿ ಹೇಗೆ ಗುರುತಿಸಿಕೊಂಡಿದ್ದಾರೆ ಎಂಬುದನ್ನು ಕಂಡುಕೊಳ್ಳಿ.
ಬೆಂಗಳೂರು (ಫೆ.28): ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟೀವ್ ಇಲ್ಲದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಪುನೀತ್ ಇರುವವರೆಗೂ ಅಷ್ಟಾಗಿ ಹೊರಗೆ ಕಾಣಿಸಿಕೊಂಡವರೂ ಅಲ್ಲ. ಕೆಲವೊಂದು ಸಿನಿಮಾ ಕಾರ್ಯಕ್ರಮಗಳಲ್ಲಿ ಪುನೀತ್ ಜೊತೆಯಾಗಿ ಕಾಣಿಸಿಕೊಳ್ಳೋದು ಬಿಟ್ಟರೆ ಮತ್ತೆಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಅವರು ನಿರ್ಮಾಪಕಿಯಾಗಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ ನೋಡಿಕೊಳ್ಳುತ್ತಿರುವ ಅವರು ಸಿನಿಮಾ ನಿರ್ಮಾಣ, ವೆಬ್‌ಸಿರೀಸ್‌ಗಳ ನಿರ್ಮಾಣದಲ್ಲಿ ಬ್ಯೂಸಿಯಾಗಿದ್ದಾರೆ. ಈಗ ಮಾರ್ಚ್ 14 ರಂದು ಪುನೀತ್ ರಾಜ್‌ಕುಮಾರ್ (ಪುನೀತ್ ಜನ್ಮದಿನ ಮಾರ್ಚ್ 17) 50ನೇ ವರ್ಷದ ಪ್ರಯುಕ್ತ ಅವರ ಮೊದಲ ಸಿನಿಮಾ ಅಪ್ಪು ಮರುಬಿಡುಗಡೆಯ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಚ್ಚಿನವರಿಗೆ ಪುನೀತ್ ರಾಜ್‌ಕುಮಾರ್ ಪತ್ನಿ ಎಂದೇ ಹೆಚ್ಚಾಗಿ ಪರಿಚಿತ. ಆದರೆ, ಅವರ ತಂದೆ ಯಾರು? ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ತವರೂರು ಯಾವುದು? ಅವರು ಓದಿದ್ದೆಷ್ಟು? ಅನ್ನೋದರ ಬಗ್ಗೆ ಹೆಚ್ಚಾಗಿ ಎಲ್ಲೂ ಮಾಹಿತಿಗಳಿಲ್ಲ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಈ ಬಗ್ಗೆ ಎಲ್ಲಿಯೂ ಹೇಳಿಕೊಳ್ಳೋದಿಲ್ಲ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಮೂಲ ಹೆಸರು ಅಶ್ವಿನಿ ರೇವನಾಥ್. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಇವರ ಮೂಲ ಊರು. 1981 ಮಾರ್ಚ್ 14 ರಂದು ಜನಿಸಿದ್ದರು. ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಈಗ 43 ವರ್ಷ. ಚಿಕ್ಕಮಗಳೂರಿನಲ್ಲಿಯೇ ಅವರು ತಮ್ಮ ಓದು ಮುಗಿಸಿದ್ದು, ಪದವೀಧರೆ ಹಾಗೂ ಫ್ಯಾಶನ್ ಡಿಸೈನರ್. 1999ರ ಡಿಸೆಂಬರ್ 1 ರಂದು ಪುನೀತ್ ಅವರನ್ನು ಮದುವೆಯಾಗಿದ್ದರು.
ಇನ್ನು ಅವರ ತಂದೆಯ ಹೆಸರು ಬಾಗಮನೆ ರೇವನಾಥ್. ಪುನೀತ್ ರಾಜ್‌ಕುಮಾರ್ ನಿಧನರಾದ ನಾಲ್ಕನೇ ತಿಂಗಳಲ್ಲಿ 2022ರ ಫೆ.20 ರಂದು ಇವರೂ ಕೂಡ ಹೃದಯಾಘಾತದಿಂದ ನಿಧನರಾದರು. 78ನೇ ವರ್ಷದಲ್ಲಿ ಅವರಗೆ ಭಾರೀ ಹೃದಯಾಘಾತವಾಗಿ ಸಾವು ಕಂಡಿದ್ದರು. ರೇವನಾಥ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ (NHAI) ಮುಖ್ಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. 20 ವರ್ಷಗಳ ಹಿಂದೆ ಅವರು ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಶಸ್ತ್ರಚಿಕಿತ್ಸೆಯ ಬಳಿಕ ಆರೋಗ್ಯವಾಗಿದ್ದ ರೇವನಾಥ್ ಅಳಿಯನ ನಿಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದರು. ಸಾಯುವ ದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ಅವರು ಕೊನೆಯುಸಿರೆಳೆದರು. ಅವರ ಅಳಿಯ ಪುನೀತ್ ರಾಜ್‌ಕುಮಾರ್ ಅವರಂತೆಯೇ, ರೇವನಾಥ್ ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು.
ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬಕ್ಕೆ 'ಅಪ್ಪು' ಸಿನಿಮಾ ಮತ್ತೆ ರಿಲೀಸ್ ಮಾಡಲು ಮುಂದಾದ ಪತ್ನಿ ಅಶ್ವಿನಿ
ಇನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಸಹೋದರ ಕೂಡ ಇದ್ದು, ಬಾಗಮನೆ ವಿನಯ್ ರೇವನಾಥ್ , ಸಿವಿಲ್ ಟೆಕ್ ಡಿಜ಼ೈನ್ ಕಂಸಲ್ಟೆಂಟ್‌ನಲ್ಲಿ ಸ್ಟ್ರಕ್ಚರಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಅಭಿಮಾನಿ ಖರೀದಿಸಿದ ಐಷಾರಾಮಿ ಕಾರಿನ ಮೇಲೆ ಆಟೋಗ್ರಾಫ್ ಹಾಕಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

