Asianet Suvarna News Asianet Suvarna News

ಭಾಗ್ಯಲಕ್ಷ್ಮೀ : ಸೊಸೆ ಮಾಡಿದ ಮ್ಯಾಂಗಿಫೆರಾ ಮುಸಾ ನ್ಯೂಡಲ್ಸ್ ಗೆ ಕುಸುಮಕ್ಕನ ಪ್ರತಿಕ್ರಿಯೆ ಏನು?

ಭಾಗ್ಯಲಕ್ಷ್ಮೀಯಲ್ಲಿ ಅತ್ತೆ ಕುಸುಮಾ ಸೊಸೆಯ ಫೈವ್‌ಸ್ಟಾರ್ ಹೊಟೇಲಿಗೆ ಎಂಟ್ರಿ ಕೊಟ್ಟಿದ್ದಾಳೆ. ತನ್ನ ಸೊಸೆಯ ಒತ್ತು ಶ್ಯಾವಿಗೆ ರಸಾಯನದ ರುಚಿ ಗುರುತಿಸುತ್ತಾಳಾ ಕುಸುಮಾ?

 

what is the reaction of kusuma to her daughter in laws recipe
Author
First Published Jun 29, 2024, 12:33 PM IST

ಭಾಗ್ಯಲಕ್ಷ್ಮೀ ಸೀರಿಯಲ್ ಇಂಟರೆಸ್ಟಿಂಗ್ ಘಟ್ಟದಲ್ಲಿದೆ. ಅತ್ತೆ ಕುಸುಮಾ ಸೊಸೆಯ ಬೆನ್ನು ಬಿದ್ದಿದ್ದಾಳೆ. ಫೈವ್‌ ಸ್ಟಾರ್ ಹೊಟೇಲಿಗೂ ಎಂಟ್ರಿ ಕೊಟ್ಟಿದ್ದಾಳೆ. ಇವಳು ಕುಸುಮಾ. ಫೈವ್‌ಸ್ಟಾರ್ ಹೊಟೇಲಿಗೆ ಹೋಗಲಿ, ಪೆಟ್ಟಿ ಅಂಗಡಿ ಎದುರು ನಿಲ್ಲಲಿ ಅವಳ ಜೋರು, ಗತ್ತು ಬದಲಾಗೋದಿಲ್ಲ. ತನ್ನ ಕೆಲಸ ಹೊಡೆದದ್ದು ಯಾರು ಅಂತ ಅವಳೀಗ ಪತ್ತೆ ಹಚ್ಚಲೇ ಬೇಕಿದೆ. ಅದಕ್ಕೆ ನೇರ ಫೈವ್‌ಸ್ಟಾರ್ ಹೊಟೇಲಿಗೆ ಬಂದಿದ್ದಾಳೆ.

ಕುಸುಮಾ ಕೆಲಸ ಹೋಗೋದಕ್ಕೆ ಕಾರಣ ಅವಳ ಸೊಸೆ ಭಾಗ್ಯ ಅಂತ ಕುಸುಮಾಗಿನ್ನೂ ಗೊತ್ತಾಗಿಲ್ಲ. ಕುಸುಮಾಗೆ ಹೋಟೆಲ್‌ನಲ್ಲಿ ಶಾಕ್‌ ಕಾದಿರುತ್ತದೆ. ಇನ್ನು ನೀನು ಕೆಲಸಕ್ಕೆ ಬೇಡ ಎಂದು ಓನರ್‌ ಹೇಳಿದಾಗ ಕುಸುಮಾ ಬೇಸರಗೊಳ್ಳುತ್ತಾಳೆ. ದಯವಿಟ್ಟು ನನ್ನನ್ನು ಕೆಲಸದಿಂದ ತೆಗೆಯಬೇಡಿ, ನನಗೆ ಈ ಕೆಲಸ ಬಹಳ ಅವಶ್ಯಕತೆ ಇದೆ ಎಂದು ಕುಸುಮಾ ಓನರ್‌ ಬಳಿ ಕೈ ಮುಗಿದು ಮನವಿ ಮಾಡಿಕೊಳ್ಳುತ್ತಾಳೆ. ಆದರೆ ಫೈವ್‌ ಸ್ಟಾರ್‌ ಹೋಟೆಲ್‌ನಿಂದ ಇನ್ಮುಂದೆ ಒತ್ತು ಶ್ಯಾವಿಗೆ ಮಾವಿನ ರಸಾಯನ ಬೇಡ ಎಂದು ಹೇಳಿರುವ ವಿಚಾರ ತಿಳಿದು ಕುಸುಮಾ ಬೇಸರಗೊಳ್ಳುತ್ತಾಳೆ. ಅವರು ನಮ್ಮನ್ನು ಕೇಳದೆ ಹೇಗೆ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ನಮಗೆ ಒಂದು ಮಾತು ಕೇಳಬಹುದಿತ್ತು ಎಂದು ಕೋಪದಿಂದ ಹೇಳುತ್ತಾಳೆ. ಈ ಮಾತನ್ನು ಕೇಳಿಸಿಕೊಂಡ ಮತ್ತೊಬ್ಬ ಕುಕ್‌, ನೀವು ಇದುವರೆಗೂ ಒಂದು ದಿನವಾದರೂ ಕೆಲಸಕ್ಕೆ ಸರಿಯಾಗಿ ಬಂದಿದ್ದೀರ? ನೀವು ಸರಿಯಾಗಿ ಕೆಲಸಕ್ಕೆ ಬಾರದೆ ಅವರನ್ನು ದೂರಿದರೆ ಹೇಗೆ? ಅವರೂ ಇಷ್ಟು ದಿನ ನೋಡಿದರು, ಕಾದೂ ಕಾದೂ ಸಾಕಾಗಿ ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಂಡರು ಎನ್ನುತ್ತಾನೆ.

 ಅಳುತ್ತಲೇ ಅತ್ತೆಗೆ ಹೈ ವೋಲ್ಟೇಜ್​ ಶಾಕ್​ ಕೊಟ್ಟುಬಿಟ್ಟಳಲ್ಲಾ ಭೂಮಿ ಮಿಸ್ಸು! ಶಕುಂತಲಾ ತಲೆ ಗಿರ್​....

ಅಷ್ಟರಲ್ಲಿ ದರ್ಶಿನಿ ಹೋಟೆಲ್‌ ಓನರ್‌, ಹೌದು ಅವರು ಹೇಳುತ್ತಿರುವುದು ನಿಜ, ಇನ್ಮುಂದೆ ಅವರು ನಮ್ಮ ಹೋಟೆಲ್‌ನಲ್ಲಿ ಒತ್ತು ಶ್ಯಾವಿಗೆ ಮಾವಿನ ರಸಾಯನ ಬೇಡವೆಂದ ಮೇಲೆ ನೀವು ಕೆಲಸಕ್ಕೆ ಇರುವುದು ಬೇಡ, ದಯವಿಟ್ಟು ಹೊರಡಿ, ಇಷ್ಟು ದಿನಗಳ ಕಾಲ ನೀವು ಇಲ್ಲಿ ಕೆಲಸ ಮಾಡಿದ್ದಕ್ಕೆ ಹಣ ತೆಗೆದುಕೊಳ್ಳಿ ಎಂದು ಜೇಬಿನಿಂದ ಸ್ವಲ್ಪ ದುಡ್ಡು ತೆಗೆದು ಕುಸುಮಾಗೆ ಕೊಡುತ್ತಾನೆ. ಕುಸುಮಾ ದುಃಖದಿಂದಲೇ ದರ್ಶಿನಿ ಹೋಟೆಲ್‌ನಿಂದ ಹೊರ ಹೋಗುತ್ತಾಳೆ. ಆದರೆ ಆಕೆಗೆ ಒಮ್ಮೆ ಫೈವ್‌ ಸ್ಟಾರ್‌ ಹೋಟೆಲ್‌ಗೆ ಹೋಗಬೇಕು ಎನಿಸುತ್ತದೆ. ತನ್ನ ಕೆಲಸ ಕಸಿದುಕೊಂಡ ಆ ಕುಕ್‌ ಯಾರು ನೋಡಬೇಕೆಂದು ಅಲ್ಲಿಗೆ ಹೋಗುತ್ತಾಳೆ.

ಫೈವ್‌ ಸ್ಟಾರ್‌ ಹೋಟೆಲ್‌ಗೆ ಹೋದ ಕುಸುಮಾ ಅಲ್ಲಿ ಒತ್ತು ಶ್ಯಾವಿಗೆ ರಸಾಯನ ಆರ್ಡರ್‌ ಮಾಡುತ್ತಾಳೆ. ಅದರೆ ಅಂತ ಯಾವ ಐಟಮ್‌ ಕೂಡಾ ಇಲ್ಲಿ ನಾವು ಮಾಡುವುದಿಲ್ಲ ಎಂದು ವೇಟರ್‌ ಹೇಳುತ್ತಾಳೆ. ಕುಸುಮಾ ಕೋಪದಿಂದ ಅದು ಬೇಕೇ ಬೇಕು ಎನ್ನುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬರುವ ಹಿತಾಗೆ ಪರಿಸ್ಥಿತಿ ಅರ್ಥವಾಗುತ್ತದೆ. ಇಲ್ಲಿ ಆ ತಿಂಡಿಗೆ ಮ್ಯಾಂಗಿಫೆರಾ ಮುಸಾ ನ್ಯೂಡಲ್ಸ್‌ ಅಂತ ಹೆಸರಿಟ್ಟಿದ್ದೇವೆ ಎಂದಾಗ ಕುಸುಮಾ ಕನ್ಫ್ಯೂಸ್‌ ಆಗುತ್ತಾಳೆ. ಸರಿ ಅದು ಯಾವುದೋ ಒಂದು ಅದನ್ನು ತೆಗೆದುಕೊಂಡು ಬಾ ರುಚಿ ಮಾಡಬೇಕು ಎನ್ನುತ್ತಾಳೆ. ಹಿತಾಳನ್ನು ಮತ್ತೆ ಬಳಿಗೆ ಕರೆಯುವ ಕುಸುಮಾ, ನೀನು ಹೇಳಿದ ಆ ತಿಂಡಿಯನ್ನು ದರ್ಶಿನಿ ಹೋಟೆಲ್‌ನಿಂದ ತಾನೇ ತರಿಸುತ್ತಿದ್ದು ಎನ್ನುತ್ತಾಳೆ. ಆದರೆ ಹಿತಾ ಏನೂ ಗೊತ್ತಿಲ್ಲದವಳಂತೆ ನಾಟಕ ಮಾಡುತ್ತಾಳೆ. ನೀನು ನಿಜ ಒಪ್ಪಿಕೊಳ್ಳದಿದ್ದರೆ ಎಲ್ಲರಿಗೂ ಕೂಗಿ ಹೇಳುತ್ತೇನೆ ಎನ್ನುತ್ತಾಳೆ. ಅದಕ್ಕೆ ಹೆದರುವ ಹಿತಾ, ಹೌದು ಇಷ್ಟು ದಿನಗಳ ಕಾಲ ಅಲ್ಲಿಂದಲೇ ತರಿಸಿಕೊಳ್ಳುತ್ತಿದ್ದು ಆದರೆ ಇನ್ಮುಂದೆ ಅಲ್ಲಿ ಆರ್ಡರ್‌ ಮಾಡುವುದಿಲ್ಲ. ನಮ್ಮಲ್ಲೇ ಎಕ್ಸ್‌ಪರ್ಟ್‌ ಕುಕ್‌ ಸಿಕ್ಕಿದ್ದಾರೆ. ಅವರ ಕೈ ರುಚಿ ತಿಂದರೆ ನೀವು ಕಳೆದುಹೋಗುತ್ತೀರಿ ಎನ್ನುತ್ತಾಳೆ. ನಾನು ಒತ್ತು ಶ್ಯಾವಿಗೆ ರಸಾಯನ ಮಾಡಿದಷ್ಟು ನಿಮ್ಮ ಕುಕ್‌ ತಿಂದಿರುವುದಿಲ್ಲ ಎಂದು ಕುಸುಮಾ ಹೇಳುತ್ತಾಳೆ. ಅದಕ್ಕೆ ಉತ್ತರಿಸುವ ಹಿತಾ ನೀವು ಹೇಗೆ ಮಾಡುತ್ತೀರೋ ನನಗೆ ಗೊತ್ತಿಲ್ಲ ಆದರೆ ನಮ್ಮ ಶೆಫ್‌ ಮಾಡುವ ತಿಂಡಿ ಬಹಳ ರುಚಿಯಾಗಿರುತ್ತೆ ಎನ್ನುತ್ತಾಳೆ. ಸರಿ ಅದೇನು ತರ್ತೀಯೋ ಹೋಗಿ ತೆಗೆದುಕೊಂಡು ಬಾ ನಾನು ರುಚಿ ಮಾಡೇ ಬಿಡುತ್ತೇನೆ ಎಂದು ಕುಸುಮಾ ಹೇಳುತ್ತಾಳೆ.

 ಆ್ಯಕ್ಟರ್ಸ್​ ಹಣೆಬರಹ ನೋಡಿ... ಬಚ್ಚಲು ಮನೆಯ ಪೊರಕೆಯಲ್ಲಿ ಹೂವು ಗುಡಿಸಿ ತಲೆ ಮೇಲೆ ಸುರೀತಾರೆ...

ಇದೀಗ ನಮ್ಮ ಮುಂದಿರೋ ಪ್ರಶ್ನೆ ಕುಸುಮಾಗೆ ಈ ಒತ್ತು ಶಾವಿಗೆ ತನ್ನ ಸೊಸೆಯೇ ಮಾಡಿರೋದು ಅಂತ ಗೊತ್ತಾಗುತ್ತಾ? ಒಂದು ವೇಳೆ ಗೊತ್ತಾದರೆ ಭಾಗ್ಯಗೆ ಸಿಕ್ಕಿರೋ ಕೆಲಸದ ಗತಿ ಏನು? ಸೊಸೆ ಕೆಲಸಕ್ಕೆ ಹೋಗಬಾರದು ಅಂತಲೇ ಇರುವ ಕುಸುಮಾ ಅವಳ ಭವಿಷ್ಯಕ್ಕೆ ಸವಾಲಾಗ್ತಾಳಾ? ಮುಂದೈತೆ ಈ ಕುತೂಹಲಕ್ಕೆ ಉತ್ತರ..

 

Latest Videos
Follow Us:
Download App:
  • android
  • ios