ಕನ್ನಡತಿ ನಟಿ, ಕನ್ನಡಿಗರ ನೆಚ್ಚಿನ ಆನ್‌ಸ್ಕ್ರೀನ್ ಕನ್ನಡ ಟೀಚರ್ ಹೊಸ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಏನದು ? ನಿಮಗೊತ್ತಾ ಉತ್ತರ..? 

Jingles bells Jingle bells Jingle all the way ಇದನ್ನ ಕನ್ನಡದಲ್ಲಿ ಹೇಗ್ ಹೇಳೋದು? ಎಂದು ಪ್ರಶ್ನಿಸಿದ್ದಾರೆ ಕನ್ನಡತಿ ನಟಿ ರಂಜನಿ ರಾಘವನ್. ಕನ್ನಡತಿ ಸೀರಿಯಲ್‌ನ ಕನ್ನಡ ಟೀಚರ್ ಕ್ರಿಸ್ಮಸ್ ಆಚರಿಸಿದ್ದಾರೆ. ಸಾಂತಾ ಟೋಪಿ ಹಾಕ್ಕೊಂಡು ಫೋಟೋಗೂ ಪೋಸ್ ಕೊಟ್ಟಿದ್ದಾರೆ.

ಭಿನ್ನ ಕಥೆಯೊಂದಿಗೆ ಕನ್ನಡಿಗರನ್ನು ತಲುಪಿದ ಪ್ರಸಿದ್ಧ ಧಾರವಾಹಿ ಕನ್ನಡತಿಯಲ್ಲಿ ದಿನನಿತ್ಯ ಕನ್ನಡ ಪಾಠ ಮಾಡ್ತಾರೆ. ಒಂದು ಪದದ ವಿಭಿನ್ನ ಅರ್ಥಗಳನ್ನು ವಿವರಿಸ್ತಾರೆ. ಇದೀಗ ಕ್ರಿಸ್ಮಸ್ ಸೀಸನ್ ಆಗಿರೋದ್ರಿಂದ ನಟಿ ಈ ಸಂಬಂಧವೇ ಪ್ರಶ್ನೆ ಕೇಳಿದ್ದಾರೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ 'ಕನ್ನಡತಿ' ರಂಜನಿ ರಾಘವನ್‌; ಫೋಟೋ ನೋಡಿ!

ಸಾಂತಾನಾ ಟೋಪಿ ಹಾಕಿರೋ ಕ್ಯೂಟ್ ಫೋಟೋ ಶೇರ್ ಮಾಡಿದ ನಟಿ ಜಿಂಗಲ್ ಬೆಲ್ಸ್ ಹಾಡಿಗೆ ಕನ್ನಡದಲ್ಲಿ ಏನಂತಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಫ್ಯಾನ್ಸ್ ಕಮೆಂಟ್ ಮಾಡಿ, ನೀವೇ ಹೇಳಿ ಕನ್ನಡ ಟೀಚರ್ ಎಂದು ಕಮೆಂಟ್ ಮಾಡಿದ್ದಾರೆ.

View post on Instagram

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕ್ರಿಸ್ಮಸ್ ಸೀಸನ್‌ನಲ್ಲಿ ಎಲ್ಲರಿಗೂ ಹ್ಯಾಪಿ ಕ್ರಿಸ್ಮಸ್ ಎಂದು ಶುಭಾಶಯ ತಿಳಿಸಿದ್ದಾರೆ ನಟಿ.

View post on Instagram