ಕಿರುತೆರೆ ಜನಪ್ರಿಯ ನಿರೂಪಕಿ ಅನುಷಾ ಮೊದಲ ಬಾರಿ ಮನನೊಂದು ಭಾವುಕ ಪತ್ರ ಬರೆದಿದ್ದಾರೆ. ಕರಣ್‌ ಕುಂದ್ರಾ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎಂದು ಹಲವು ತಿಂಗಳುಗಳಿಂದ ಕೇಳಿ ಬರುತ್ತಿತ್ತು ಆದರೆ ಎಲ್ಲಿಯೂ ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಈಗ ಸ್ವತಃ ಅನುಷಾ ಅದಕ್ಕೆ ಉತ್ತರ ನೀಡಿದ್ದಾರೆ.

ಹೀಗಾಗುತ್ತಿದ್ದರೆ ಶೀಘ್ರದಲ್ಲೇ ಸಂಗಾತಿ ನಿಮ್ಮಿಂದ ದೂರ ಆಗಬಹುದು!

ಅನುಷಾ ಪೋಸ್ಟ್:

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಅನುಷಾ ವೃತ್ತಿಗೆ ಸಂಬಂಧಿಸಿದ ಮಾಹಿತಿಗಳ ಬಗ್ಗೆ ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಾರೆ. ಇದೇ ಮೊದಲ ಬಾರಿ ಪ್ರೀತಿ, ಮೋಸದ ವಿಚಾರವನ್ನು ಪತ್ರದ ಮೂಲಕ ಬರೆದುಕೊಂಡಿದನ್ನು ನೋಡಿ ಓದುಗರು ಶಾಕ್ ಆಗಿದ್ದಾರೆ. ಅದರ ಜೊತೆಗೆ 2020 ಮುಕ್ತಾಯ ಮಾಡಿ 2021ರ ಹೊಸ ಜೀವನ ಬರ ಮಾಡಿಕೊಂಡಿದ್ದಾರೆ.

ಬ್ರೇಕಪ್‌ ಆಗಿ ತಿಂಗಳಿಗೇ ಸಾಲ್ಟ್ ಬೇ ಜೊತೆ ಲಿಂಕ್‌ಅಪ್‌? ಬಾಯಿಬಿಟ್ಟ ಕೃಷ್ಣಾ ಶ್ರಾಫ್‌! 

'2020 ಅಂತ್ಯವಾಗುವ ಮುನ್ನ ಇದನ್ನು ಹೇಳಲೇಬೇಕು. ನಾನು ಲವ್‌ ಸ್ಕೂಲ್‌ ಕಾರ್ಯಕ್ರಮ ನಡೆಸಿಕೊಡುತ್ತಿದ್ದೆ ಅಲ್ಲಿ ನಿಮಗೆ ನೀಡುತ್ತಿದ್ದ ಸಲಹೆ ನಿಜವಾಗಿಯೂ ಸತ್ಯ ನಾನು ಜೀವನದಲ್ಲಿ ಅನುಭವಿಸುತ್ತಿದ್ದ ಘಟನೆಯನ್ನೇ ಹಂಚಿಕೊಂಡಿರುವೆ ಅಷ್ಟರ ಮಟ್ಟಕ್ಕೆ ನಾನು ಪ್ರೀತಿಯಲ್ಲಿದ್ದು ಪ್ರೀತಿಸುತ್ತಿದ್ದೆ. ಪ್ರೀತಿಯನ್ನು ಕೊನೆಯ ಕ್ಷಣದವರೆಗೂ ಉಳಿಸಿಕೊಳ್ಳಲು ಪ್ರಯತ್ನ ಪಡುವೆ, ನಾನು ಮನುಷ್ಯ ನನಗೂ ಭಾವನೆ ಇರುತ್ತದೆ ಒಂದು ಅಂತ ಮೀರುತ್ತಿದೆ ಎನ್ನುವಷ್ಟರಲ್ಲಿ ನಾನು ಕೈ ಬಿಡಲೇ ಬೇಕಾಗುತ್ತದೆ. ನನಗೆ ಮೋಸ ಮಾಡಿದ್ದಾರೆ, ಸುಳ್ಳು ಹೇಳಿದ್ದಾರೆ...ಆದರೂ ಕ್ಷಮೆ ಬಯಸಿದೆ ಅದರೂ ಬರದಿದ್ದಾಗ ನಾನು ಅದರಿಂದ ಹೊರ ಬರಬೇಕಾಗಿತ್ತು.  ನಾನು ಕ್ಷಮಿಸುವುದನ್ನು ಕಲಿತಿರುವವಳು, ಇದರಿಂದ ಹೊರ ಬಂದು ಬೆಳೆಯುವೆ ಇನ್ನೂ ಎತ್ತರಕ್ಕೆ ಬೆಳೆಯುವೆ. ಲೈಫ್‌ನ ಪಾಸಿಟಿವ್‌ಗೆ ಹೆಚ್ಚಿನ ಗಮನ ಕೊಡುವೆ' ಎಂದು ಅನುಷಾ ಬರೆದುಕೊಂಡಿದ್ದಾರೆ.

ನಿಮಗೊಂದು ಸಲಹೆ:

'ನಾನು ಪ್ರೀತಿಯ ವಿಚಾರದಲ್ಲಿ ತುಂಬಾನೇ ಓಪನ್ ಆಗಿದ್ದಾಗ ನೀವು ನನ್ನನ್ನು ನೋಡಿದ್ದೀರಾ.  ಈಗ ನಾನು ನನ್ನನ್ನು ಪ್ರೀತಿಸುತ್ತಿರುವುದನ್ನು ನೀವು ನೋಡಲೇ ಬೇಕು. ನನ್ನದೊಂದು ಸಲಹೆ. ಪ್ರೀತಿ ಹಲವು ರೀತಿಯಲ್ಲಿ ಬರುತ್ತದೆ ಇಷ್ಟೇ ಜೀವನ ಇಷ್ಟಕ್ಕೆ ಸಾಕು ಎಂದು ಸೀಮಿತವಾಗಿರ ಬೇಡಿ. ಪ್ರೀತಿಯನ್ನು ಗೌರವಿಸಿ, ಕ್ಷಮಿಸಿ ಹಾಗೂ ಪ್ರಾಮಾಣಿಕವಾಗಿದ್ದು ಅರ್ಥ ಮಾಡಿಕೊಳ್ಳಿ. ನಾನು ಏನು ಒಪ್ಪಿಕೊಳ್ಳುತ್ತೇವೋ ಅದಷ್ಟು ಮಾತ್ರ ನಮಗೆ ಅರ್ಹತೆ ಇದೆ ಎಂದು ತಿಳಿದುಕೊಳ್ಳುತ್ತೇವೆ.  ನಾನು ಇದ್ದ ಹಾಗೆ ನನ್ನನ್ನು ಒಪ್ಪಿಕೊಂಡು ಪ್ರೀತಿಸಿದ ಪ್ರತಿಯೊಬ್ಬರಿಗೂ ಧನ್ಯವಾಗಳು. ಒಳ್ಳೆಯದು ಕೆಟ್ಟದು ಎಲ್ಲವೂ ಈ ವರ್ಷ ಕಲಿಸಿರು. ನಾನು ನನ್ನನ್ನು ಪ್ರೀತಿಸುವ ಹೊಸ ಸ್ಟೋರಿ ಆರಂಭವಾಗುತ್ತಿದೆ'ಎಂದು ಅನುಷಾ ಹೇಳಿಕೊಂಡಿದ್ದಾರೆ.

ಬಿಪಾಶಾ ಬಸು ರಾಣಾ ದಗ್ಗುಬಾಟಿ ರಿಲೆಷನ್‌ಶಿಪ್‌ ಬಗ್ಗೆ ಗೊತ್ತಾ? 

ಬೋಲ್ಡ್‌ ಹುಡುಗಿ ಅನುಷಾ ಮೊದಲ ಬಾರಿ ಭಾವುಕರಾಗಿ ಬರೆದಿರುವ ಪತ್ರವನ್ನು ನೋಡಿ ಸ್ನೇಹಿತರು ಹಾಗೂ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕಮೆಂಟ್ಸ್‌ ಮೂಲಕ ಸಾಂತ್ವಾನ ಹೇಳಿದ್ದಾರೆ, 2021 ನಿನ್ನದಾಗಿರಲಿದೆ ಎಂದು ಧೈರ್ಯ ತುಂಬಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Anusha Dandekar (@vjanusha)