ಬ್ರೇಕಪ್ ಆಗಿ ತಿಂಗಳಿಗೇ ಸಾಲ್ಟ್ ಬೇ ಜೊತೆ ಲಿಂಕ್‌ಅಪ್? ಬಾಯಿಬಿಟ್ಟ ಕೃಷ್ಣಾ ಶ್ರಾಫ್!
ಬಾಲಿವುಡ್ ಹಿರಿಯ ನಟ ಜಾಕಿ ಶ್ರಾಫ್ ಮಗಳು ಕೃಷ್ಣಾ ಅವರ ವೈಯಕ್ತಿಕ ಜೀವನ ಯಾವಾಗಲೂ ಚರ್ಚೆಯಲ್ಲಿರುತ್ತದೆ. ಎಬೊನ್ ಹೈಮ್ಸ್‌ನ ಜೊತೆ ಬ್ರೇಕಪ್ ಮಾಡಿಕೊಂಡು, ತಿಂಗಳೊಳಗೆ ದುಬೈ ಶೆಫ್ ಜೊತೆ ಲಿಂಕಪ್ ಸುದ್ದಿ ವರದಿಯಾಗಿದೆ. ಅವರಿಬ್ಬರ ಫೋಟೋಗಳು ವೈರಲ್ ಆಗಿದ್ದು, ಅದರಲ್ಲಿ ಕೃಷ್ಣಾ ಶೆಫ್‌ಗೆ ಚುಂಬಿಸುತ್ತಿರುವುದು ಕಂಡುಬಂದಿದೆ. 'ಇಷ್ಟು ಬೇಗ ಮೂವ್‌ಅನ್ ಆಗಿದ್ದಿಯಾ' ಎಂದು ಫೋಟೋಗೆ ಎಕ್ಸ್ ಬಾಯ್‌ಫ್ರೆಂಡ್ ಎಬೊನ್ ಕೂಡ ಕಾಮೆಂಟ್ ಮಾಡಿದ್ದಾರೆ. ಕೃಷ್ಣಾ ಈ ಲಿಂಕ್ ಅಪ್ ಸುದ್ದಿಯ ಬಗ್ಗೆ ಮೌನ ಮುರಿದಿದ್ದಾರೆ.

ಕೃಷ್ಣಾ ತನ್ನ ಒಂಟಿ ಜೀವನ ಅದ್ಭುತವಾಗಿದೆ. ಈಗ ಅವರು ತನ್ನ ಮತ್ತು ತನ್ನ ವ್ಯವಹಾರದ ಮೇಲೆ ಮಾತ್ರ ಗಮನಹರಿಸಬಹುದೆಂದು ಸಂತೋಷಪಡುತ್ತಾರೆ. ಸಂಬಂಧದಲ್ಲಿರುವ ಯಾವುದೇ ನಾಟಕ ಇನ್ನೂ ಇಲ್ಲ ಎಂದು ಹೇಳಿದ್ದಾರೆ.

ಇದರೊಂದಿಗೆ ಕೃಷ್ಣಾ ಎಬೊನ್ ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡುತ್ತಾ ಕಾರಣ ತಿಳಿಸಿದ್ದಾರೆ.
'ಅನೇಕ ಸಂಗತಿಗಳಿವೆ, ಅದು ಸಂಭವಿಸಿದೆ ಆದರೆ ಅದನ್ನು ಖಾಸಗಿಯಾಗಿಡಲು ಬಯಸುತ್ತೇನೆ' ಎಂದಿದ್ದಾರೆ. ಯಾಕೆಂದರೆ, ಸಂಬಂಧದಲ್ಲಿರುವುದಕ್ಕಿಂತ ಹೆಚ್ಚಾಗಿ ಸ್ನೇಹಿತರಂತೆ ಇರುವುದು ಬೆಸ್ಟ್ ಎಂದು ಇಬ್ಬರೂ ಅರಿತು ಕೊಂಡಿದ್ದಾರೆ ಎಂದು ಅವರು ಭಾವಿಸುತ್ತಾರೆ' ಎಂದರು.
ಎಕ್ಸ್ ಬಾಯ್‌ಫ್ರೆಂಡ್ ಇನ್ನೂ ಅವರೊಂದಿಗೆ ಸಂಪರ್ಕದಲ್ಲಿದ್ದಾನೆ, ಆದರೆ ಅಷ್ಟಾಗಿ ಅಲ್ಲ ಎಂದಿದ್ದಾರೆ.
ಅದೇ ಸಮಯದಲ್ಲಿ, ಶೆಫ್ ಸಾಲ್ಟ್ ಬೇ ಜೊತೆ ವೈರಲ್ ಆದ ಲಿಂಕ್ಅಪ್ ಮತ್ತು ಫೋಟೋ ಬಗ್ಗೆಯೂ ಮಾತನಾಡಿದರು. ಅವರನ್ನು ಭೇಟಿಯಾಗಿದ್ದು ಇದು ಅವರ ಜೀವನದ ಬೆಸ್ಟ್ ಮೀಲ್ ಎಂದು ಹೇಳಿದರು. ಆಹಾರವು ಉತ್ತಮವಾಗಿರುವುದರ ಜೊತೆಗೆ, ಶೆಫ್ ಉತ್ತಮ ಪರ್ಫಾಮರ್ ಮತ್ತು ಫನ್ನಿ ಎಂದು ಬಣ್ಣಿಸಿದರು.
ಸಾಲ್ಟ್ ತುಂಬಾ ಫ್ರೆಂಡ್ಲಿ ಹಾಗೂ 3 ಕೋರ್ಸ್ ಮೀಲ್ ಸರ್ವ್ ಮಾಡಿದ್ದರು ಎಂದು ಹೇಳಿದರು.
ಈಗ ಅವರ ಬ್ರೇಕಪ್ ಆಗಿ 1 ತಿಂಗಳಾಗಿದೆ. ಈ ಸಮಯವನ್ನು ಆನಂದಿಸಲು ಮತ್ತು ಸ್ವತಃ ಸಮಯವನ್ನು ನೀಡಲು ಬಯಸುತ್ತಾರೆ ಎಂದಿದ್ದಾರೆ ಶ್ರಾಫ್ ಪುತ್ರಿ.
202 ರ ನೆಚ್ಚಿನ ಸಮಯವೆಂದರೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಕ್ಕಿ, ಅವರನ್ನು ಹತ್ತಿರಕ್ಕೆ ತಂದಿತು ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಕಳೆದ 2 ವಾರಗಳ ಕಾಲ ಮತ್ತು ಯಾವುದೇ ಸರ್ವೀಸ್ ಮತ್ತು ಮನೋರಂಜನೆ ಇಲ್ಲದ ಧೀರ್ಘವಾದ ವಿಮಾನ ಹಾರಾಟ 2020ರ ಅತ್ಯುತ್ತಮ ಸಮಯವೆಂದು ಅವರು ಪರಿಗಣಿಸುತ್ತಾರೆ.