Asianet Suvarna News Asianet Suvarna News

ಪಟಾಕಿ ಯಾರದ್ದೇ ಆದ್ರೂ ಹೊಡೆಯೋದು ನಾನೇ; ತನಿಷಾ ಕೆನ್ನೆ ಮುಟ್ಟಿ ತಟ್ಟಿದ ವರ್ತೂರು ಸಂತೋಷ್

ನಮ್ರತಾ ಬಳಿಕ ಕಿಚ್ಚ ಸುದೀಪ್ ತನಿಷಾ ಅವರನ್ನು ಕರೆದಾಗ ಎಲ್ಲರೂ ಕಣ್ಣರಳಿಸಿ ನೋಡುತ್ತಾರೆ. ತನಿಷಾ ಬರಲು ವರ್ತೂರು ಸಂತೋಷ್ 'ಪಟಾಕಿ ಯಾರದ್ದೇ ಆದ್ರೂ ಹಚ್ಚೋದು ನಾವೇ' ಎಂದು ತನಿಷಾ ಕೆನ್ನೆ ಮುಟ್ಟಲು ಎಲ್ಲರೂ ಗೊಳ್ಳೆಂದು ನಗುತ್ತಾರೆ. 

Varthur Santhosh slaps Tanisha from kichch sudeep talks in Bigg Boss Kannada season 10 srb
Author
First Published Dec 17, 2023, 4:37 PM IST

ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆಯಲ್ಲಿ ಹೊಸ ಹೊಸ ಕುತೂಹಲಕಾರಿ ಪ್ರಯೋಗಗಳು ನಡೆಯುತ್ತಲೇ ಇವೆ. ಇಂದು ರವಿವಾರ, 11 ವೀಕೆಂಡ್‌ ಸಂಚಿಕೆ 'ಸೂಪರ್ ಸಂಡೇ ವಿತ್ ಸುದೀಪ' ರಾತ್ರಿ 9.00 ಗಂಟೆಗೆ ಪ್ರಸಾರವಾಗಲಿದೆ. ಇಂದು ಈ ಸಂಬಂಧ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕಿಚ್ಚ ಸುದೀಪ್ ವರ್ತೂರು ಸಂತೋಷ್‌ ಅವರನ್ನು ಕಾಲೆಳೆದಿದ್ದಾರೆ. 'ಏನ್ರೀ ವರ್ತೂರು ಸಂತೋಷ್ ಅವ್ರೇ, ಪಟಾಕಿ ಕೈನಲ್ಲೇ ಹಚ್ತೀನಿ ಅಂತ ಮಾತಾಡ್ತೀರ?' ಬನ್ನಿ ಇಲ್ಲಿ' ಸುದಿಪ್ ಕರೆದಿದ್ದಾರೆ. ವರ್ತೂರು ಸಂತೋಷ್ ಬಳಿ ವಿನಯ್ ಅವರನ್ನು ಕರೆದಿದ್ದಾರೆ. 

ವಿನಯ್ ಕೆನ್ನೆ ಮುಟ್ಟಿ ವರ್ತೂರು ಸಂತೋಷ್ 'ಪಟಾಕಿ ಯಾರದ್ದೇ ಆದ್ರೂ ಹಚ್ಚೋದು ನಾವೇ' ಎಂದು ಹೇಳುತ್ತ ವಿನಯ್ ಕೆನ್ನೆ ಮಟ್ಟುತ್ತಾರೆ. ವರ್ತೂರು ಸಂತೋಷ್ ಅವರು ಕೆನ್ನೆ ಮುಟ್ಟಲು ವಿನಯ್ ನಾಚಿ ನೀರಾಗಿದ್ದಾರೆ. ಅದನ್ನು ನೋಡಿದ ಸುದೀಪ್ 'ವಿನಯ್, ನೀವು ತುಂಬಾ ನಾಚ್ಕೋತಾ ಇದ್ದೀರಾ' ಎಂದು ಹೇಳಲು ಎಲ್ಲರೂ ನಗುತ್ತಾರೆ. ವಿನಯ್ ಬಳಿಕ ಕಿಚ್ಚ ಸುದೀಪ್ ನಮ್ರತಾ ಅವರನ್ನು ಕರೆದಾಗ, ವರ್ತೂರು ನಮ್ರತಾ ಕೆನ್ನೆ ಮುಟ್ಟಲು ಹಿಂದೆ ಮುಂದೆ ನೋಡುತ್ತಾರೆ. ಎಲ್ಲರೂ ನಗುತ್ತಾರೆ. 

ಮನೆಯ ಮೇನ್ ಗೇಟ್ ಓಪನ್ ಮಾಡಿಸ್ತೀನಿ, ಗೆಟ್ ಔಟ್; ಕಿಚ್ಚನ ಮಾತಿಗೆ ತಲೆ ಕೆಡಿಸಿಕೊಂಡ ನೆಟ್ಟಿಗರು!

ನಮ್ರತಾ ಬಳಿಕ ಕಿಚ್ಚ ಸುದೀಪ್ ತನಿಷಾ ಅವರನ್ನು ಕರೆದಾಗ ಎಲ್ಲರೂ ಕಣ್ಣರಳಿಸಿ ನೋಡುತ್ತಾರೆ. ತನಿಷಾ ಬರಲು ವರ್ತೂರು ಸಂತೋಷ್ 'ಪಟಾಕಿ ಯಾರದ್ದೇ ಆದ್ರೂ ಹಚ್ಚೋದು ನಾವೇ' ಎಂದು ತನಿಷಾ ಕೆನ್ನೆ ಮುಟ್ಟಲು ಎಲ್ಲರೂ ಗೊಳ್ಳೆಂದು ನಗುತ್ತಾರೆ. ತನಿಷಾ ನಾಚಿ ಕೆನ್ನೆ ಕೆಂಪಾಗಿಸಿಕೊಂಡರೆ ಸ್ವತಃ ವರ್ತೂರು ಸಂತೋಷ್ ನಗುತ್ತಾರೆ. ಕಿಚ್ಚ ಸುದೀಪ್ ಅವರಂತೂ ವರ್ತೂರು ಸಂತೋಷ್ ಮತ್ತು ತನಿಷಾ ಅವರನ್ನೇ ಟಾರ್ಗೆಟ್ ಮಾಡಿದ್ದರು ಎಂಬುದು ಅವರ ನಗುವಿನಲ್ಲೇ ಹೈಲೈಟ್‌ ಆಗುತ್ತಿದೆ. 

ಸೂಪರ್ ಸ್ಟಾರ್ ಮಗನಾಗಿದ್ದರೂ ದೇಶದ ದೊಡ್ಡ ಫ್ಲಾಪ್ ನಟ, 12 ವರ್ಷಗಳಲ್ಲಿ 19 ಸೋಲು; ಮತ್ತೆ ಕಂಬ್ಯಾಕ್!

ಒಟ್ಟಿನಲ್ಲಿ, ಇಂದು ಬಿಗ್ ಬಾಸ್ ಮನೆಯಿಂದ ಒಬ್ಬರು ಸ್ಪರ್ಧಿಗಳು ಹೊರಹೋಗಲಿದ್ದಾರೆ. ಔಟ್ ಆಗಲಿರುವ ಸದಸ್ಯರು ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್ . ಆದರೆ, ನಾಳೆಯಿಂದ ಬಿಗ್ ಬಾಸ್ ಮನೆಯಲ್ಲಿ ಒಬ್ಬರು ಸದಸ್ಯರು ಕಡಿಮೆ ಆಗಲಿರುವುದಂತೂ ಪಕ್ಕಾ. ಅಂದಹಾಗೆ, ಬಿಗ್ ಬಾಸ್‌ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ  ವೀಕ್ಷಿಸಬಹುದು.

 

 

Follow Us:
Download App:
  • android
  • ios