ಮೊದಲ ಸ್ಕಿಟ್‌ನಲ್ಲೇ ವೀಕ್ಷಕರ ಗಮನ ಸೆಳೆದ ವಂಶಿಕಾ ಮಾಸ್ಟರ್ ಆನಂದ್. ಮಗ ಪರೀಕ್ಷೆ ರಿಸಲ್ಟ್‌ ಏನಾಯ್ತು?  

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿರುವ ಮಾಸ್ಟರ್ ಆನಂದ್ ಪುತ್ರಿ, ನನ್ನಮ್ಮ ಸೂಪರ್ ಸ್ಟಾರ್ ಶೋ ವಿನ್ನರ್ ವಂಶಿಕಾ ತಮ್ಮ ಮೊದಲ ಸ್ಕಿಟ್‌ನಲ್ಲಿ ತೀರ್ಪುಗಾರರು ಮತ್ತು ವೀಕ್ಷಕರ ಗಮನ ಸೆಳೆದಿದ್ದಾರೆ. ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಈ ಶೋ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. 

ವಂಶಿಕಾ ಮೊದಲ ಸ್ಕಿಟ್‌ನಲ್ಲಿ ಎಕ್ಸಾಂ ರಿಸಲ್ಟ್‌ ಬಗ್ಗೆ ಮಾಡಿದ್ದಾರೆ. ಅತಿ ಚಿಕ್ಕ ವಯಸ್ಸಿಗೆ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಂಶಿಕಾ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನೂ ಮಗನ ಎಕ್ಸಾಂ ರಿಸಲ್ಟ್‌ ಬಂದೇ ಇಲ್ಲ ಆಗಲೇ ಟಿವಿ ಮತ್ತು ಪೇಪರ್‌ಗೆ ಸ್ಪೀಚ್‌ ರೆಡಿ ಮಾಡಿಸಿದ್ದಾಳೆ. ಪಿಂಕ್ ಬಣ್ಣದ ಸೀರಿಯಲ್ಲಿ ಪಟಪಟ ಅಂತ ಮಾತನಾಡುತ್ತಾಳೆ. ಇಡೀ ಕರ್ನಾಟಕಕ್ಕೆ ನೀನೆ ಮೊದಲು ಬರಬೇಕು ಏಕೆಂದರೆ ನಾನು ಸ್ಕೂಲ್‌ಗೆ ಹೋಗುವ ಮುನ್ನವೇ ನನ್ನಮ್ಮ ಸೂಪರ್ ಸ್ಟಾರ್ ಟ್ರೋಫಿ ಪಡೆದುಕೊಂಡಿದ್ದೀನಿ ಎಂದು ಆಗಾಗ ಪಂಚ್ ಡೈಲಾಗ್ ಹೇಳುತ್ತಾಳೆ.

ಗಿಚಿ ಗಿಲಿಗಿಲಿಯಲ್ಲಿ ವಂಶಿಕಾ ಮಾತ್ರವಲ್ಲದೆ ನಿವೇದಿತಾ ಗೌಡ, ಅಯ್ಯಪ್ಪ, ಅನನ್ಯಾ ಅಮರ್,ಜೋಗಿ ಸುನೀತಾ, ಸೌಮ್ಯಾ, ಪ್ರಿಯಾಂಕಾ, ಪ್ರಶಾಂತ್,ಶ್ರೀಕಾಂತ್, ದಿವ್ತಾ ವಸಂತ್ ಸೇರಿಂದತೆ ಅನೇಕರು ಜೋಡಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇದೇ ಮೊದಲ ಸೀಸನ್ ಅಗಿರುವ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಹೆಸರು ಮಾಡಿರುವ ಅನೇಕರನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗಿದೆ.

ಗಿಚ್ಚಿ ಗಿಲಿಗಿಲಿ ಶೋಗೆ ರೀಲ್ಸ್‌ ಮಾಡುವವರ ಎಂಟ್ರಿ ಆಗಿದೆ, ಶ್ರುತಿ ಅವರೇ ಆಫ್‌ ಸ್ಕ್ರೀನ್‌ ತರ್ಲೆ: ಸೃಜನ್ ಲೋಕೇಶ್

'ಸೋಷಿಯಲ್ ಮೀಡಿಯಾದಿಂದ (Social Media) ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಏಕೆಂದರೆ ಜನರೊಂದಿಗೆ ಬೇಗ ಕನೆಕ್ಟ್ ಆಗುತ್ತಾರೆ ಅದು ನಮಗಿರುವ ಪ್ಲಸ್ ಪಾಯಿಂಟ್.ರೀಲ್ಸ್ ಅಥವಾ ಯೂಟ್ಯೂಬ್ ನೋಡಿದರೆ ತುಂಬಾನೇ ವೆರೈಟಿ ಕಾಣಿಸುತ್ತದೆ ಅವರಿಗೆ ಇರುವ ಟ್ಯಾಲೆಂಟ್ ನೋಡಿದರೆ ಸರ್ಪ್ರೈಸ್ ಆಗುತ್ತದೆ ಇದ್ಯಾಕೆ ನಮಗೆ ಹೊಳೆದಿಲ್ಲ ಅನೋಷ್ಟು ಕ್ರಿಯೇಟಿವ್ ಆಗಿದ್ದಾರೆ. ನಾವು ನಮ್ಮನ್ನು ಅಪ್‌ಗ್ರೇಡ್ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ ಇಲ್ಲ ಅಂದ್ರೆ ನಾವು ಹಿಂದೆ ಉಳಿದುಬಿಡ್ತೀವಿ' ಎಂದು ಸೃಜನ್ ಲೋಕೇಶ್ ಮಾತನಾಡಿದ್ದಾರೆ. 

'ನಾವು ಜಡ್ಜ್ ಆಗಿ ಯಾರನ್ನೂ ಜಡ್ಜ್ ಮಾಡೋಕೆ ಬಂದಿಲ್ಲ ಮಜಾ ಮಾಡೋಕೆ ಬಂದಿದ್ದೀವಿ ಸಪೋರ್ಟ್ ಮಾಡೋಕೆ ಬಂದಿದ್ದೀವಿ. ಈ ಶೋ ಕಂಟೆನ್ಟ್‌ ಕಾಮಿಡಿ ಆಗಿರುವುದರಿಂದ ಎಲ್ಲರನ್ನು ನಗಿಸುವುದೇ ಕೆಲಸ. ಮಜಾಭಾರತ ಆದ್ಮೇಲೆ ಆ ತರದ ಮತ್ತೊಂದು ಶೋ ಇದು ಆದರೆ ಇಲ್ಲಿ ಒಬ್ಬರು ಪ್ರೊಫೆಷನಲ್ ಆಗಿರುವವರು ನಾನ್ ಪ್ರೊಫೆಷನಲ್‌ಗೆ ಜೋಡಿ ಆಗುತ್ತಾರೆ. ಅದೇ ಒಂದು ಹೊಸತನ ಕೊಡಲಿದೆ. ಮಜಾಭಾರತದಲ್ಲಿ ಇದ್ದಾಗ ಇವೆರೆಲ್ಲಾ ಹೊಸಬರು ಆದರೀಗ ತುಂಬಾನೇ ಎಕ್ಸ್ಪೀರಿಯನ್ಸ್ ಕಲಾವಿದರು ಆಗ್ಬಿಟಿದ್ದಾರೆ. ಇದು ಸಖತ್ ತಮಾಷೆ ಕೊಡುವ ಕಾರ್ಯಕ್ರಮ ಆಗಲಿದೆ. ಟೈಟಲ್ ಬಂದು ರತ್ನನ್ ಪ್ರಪಂಚದ ಹಾಡು ತುಂಬಾ ಹಿಟ್ ಆಗಿದೆ ಈ ಟೈಟಲ್ ನೋಡಿದರೆ ಗೊತ್ತಾಗುತ್ತದೆ ಇದೊಂದು ಫನ್ ಇರುವ ಶೋ ಅಂತ' ಎಂದು ನಟಿ ಶ್ರುತಿ ಹೇಳಿದ್ದಾರೆ.