ಡಿನ್ನರ್ ಡೇಟ್‌ಗಾಗಿ ಟಾಪ್‍ಲೆಸ್ ಆದ ಉರ್ಫಿ, ಇಂಟರ್ನೆಸ್ ಬಿಸಿ ಏರಿಸಿದ ವಿಡಿಯೋ!
ಉರ್ಫಿ ಜಾವೇದ್ ಅವತಾರ ಹಲವರು ಸುಸ್ತಾಗಿದ್ದಾರೆ. ಆದರೂ ಉರ್ಫಿ ದಿನಕ್ಕೊಂದು ಫ್ಯಾಶನ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಇದೀಗ ಡಿನ್ನರ್ ಡೇಟ್‌ಗಾಗಿ ಉರ್ಫಿ ಟಾಪ್‌ಲೆಸ್ ಆಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಮುಂಬೈ(ಸೆ.16) ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್ ಹೊಸ ಹೊಸ ಅವತಾರ ಇದೀಗ ಟ್ರೆಂಡ್. ದಿನಕ್ಕೊಂದು ಫ್ಯಾಶನ್, ಚಿತ್ರವಿಚಿತ್ರ ಬಟ್ಟೆ ಮೂಲಕ ಉರ್ಫಿ ಹಲವರನ್ನು ಉರಿಸುತ್ತಲೇ ಇದ್ದಾರೆ. ತಿಳಿ ನೀಲ ಸ್ಯಾರಿ, ಅಕ್ವೇರಿಯಂ ಬ್ರಾ, ಟಾಯ್ಸ್ ಬ್ರಾ, ಶರ್ಟ್ ಕಾಲರ್ ಡ್ರೆಸ್ ಸೇರಿದಂತೆ ಉರ್ಫಿಯ ಅವತರಾ ಒಂದಾ ಎರಡಾ. ಇದೀಗ ಉರ್ಫಿ ಜಾವೇದ್ ಮತ್ತಷ್ಟು ಎಕ್ಸ್‌ಪೋಸ್ ಮಾಡಿ ನಿದ್ದೆಗೆಡಿಸಿದ್ದಾರೆ. ಡಿನ್ನರ್ ಡೇಟ್‌ಗಾಗಿ ಉರ್ಫಿ ಟಾಪ್‌ಲೆಸ್ ಆಗಿದ್ದಾರೆ. ಈ ವಿಡಿಯೋ ಇಂಟರ್ನೆಟ್ ಬಿಸಿ ಎರಿಸಿದೆ.
ಈ ಬಾರಿ ಉರ್ಫಿ ಜಾವೇದ್ ಮುಂಬೈನ ಪ್ರಖ್ಯಾತ ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಟಾಪ್‌ಲೆಸ್ ಆಗಿರುವ ಉರ್ಫಿ ಕೆಲ ಕುತೂಹಲ ಹಾಗೇ ಉಳಿಸಿದ್ದಾರೆ. ಈ ಬಾರಿ ಟಾಪ್‌ಲೆಸ್ ಆದ ಉರ್ಫಿಯ ಮಾನ ಕಾಪಾಡಿದ್ದು ನೀಳ ಕೂದಲು. ಪಾದರ್ಶಕ ನೆಟ್ ಟಾಪ್ ಧರಿಸಿರುವ ಉರ್ಫಿ, ಅದೇ ರೀತಿಯ ಪಾರದರ್ಶಕ ಸ್ಕರ್ಟ್ ಹಾಕಿದ್ದಾರೆ.
ಉರ್ಫಿಯ ಅಕ್ವೇರಿಯಂ ಬ್ರಾದೊಳಗೆ ಜೀವಂತ ಮೀನು, ತುಂಬಿ ತಳುಕುವ ವಿಡಿಯೋ ಹರಿಬಿಟ್ಟ ಜಾವೇದ್!
ಡಿನ್ನರ್ ಡೇಟ್‌ಗೂ ಮೊದಲು ಕ್ಯಾಮೆರಾಗೆ ಫೋಸ್ ನೀಡಿದ ಉರ್ಪಿ, ನಗು ನಗುತ್ತಲೇ ರೆಸ್ಟೋರೆಂಟ್‌ಗೆ ತೆರಳಿದ್ದಾರೆ. ಈ ಮೂಲಕ ತಮ್ಮ ಹಿಂಭಾಗದ ಸೌಂದರ್ಯವನ್ನು ತೋರಿಸಿ ಕಿಚ್ಚು ಹಚ್ಚಿದ್ದಾರೆ. ಉರ್ಫಿಯ ಹೊಸ ಅವತಾರಕ್ಕೆ ಎಂದಿನಂತೆ ಪರ ವಿರೋಧಗಳು, ಟೀಕೆಗಳು, ಹೊಗಳಿಕೆ ವ್ಯಕ್ತವಾಗಿದೆ. ಉರ್ಫಿಯನ್ನು ಬಾಲಿವುಡ್ ಫ್ಯಾಶನ್ ಡಿಸೈನರ್ ಆಗಿ ನೇಮಿಸಿಕೊಳ್ಳಿ, ಎಲ್ಲಾ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಎಂದು ಸಲಹೆ ನೀಡಿದ್ದಾರೆ.
ಉರ್ಫಿಯ ಫ್ಯಾಶನ್ ಟೇಸ್ಟ್‌ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉರ್ಫಿ ಪ್ರತಿ ದಿನ ಹೊಸ ಹೊಸ ಫ್ಯಾಶನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ಫ್ಯಾಶನ್ ಊಹೆಗೂ ನಿಲುಕದ ರೀತಿಯಲ್ಲಿದೆ. ಈ ಫ್ಯಾಶನ್ ಸೆನ್ಸ್‌ಗೆ ಮೆಚ್ಚುಗೆ ಇದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಎಂದಿನಂತೆ ಟಾಪ್‌ಲೆಸ್ ಆದರೂ, ಫುಲ್ ಆದರೂ ಎಲ್ಲಾ ತೋರಿಸಿ ಆಗಿದೆ. ಇನ್ನೇನು ಉಳಿದಿಲ್ಲ. ಈ ಅವತಾರ ಯಾಕೆ? ನೆಟ್ಟಗೆ ಒಂದು ಡ್ರೆಸ್ ನಿಮ್ಮಲ್ಲಿ ಇಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಬಾಯ್ಸ್ ನಿಮ್ಮ ಶರ್ಟ್ ಜಾಗೃತೆ, ಉರ್ಫಿ ಜಾವೇದ್ ಹೊಸ ಅವತಾರಕ್ಕೆ ನೆಟ್ಟಿಗರ ಕಮೆಂಟ್!
ಇತ್ತೀಚೆಗಷ್ಟೇ ಉರ್ಫಿ ತಿಳಿ ನೀಲ ಉಡುಗೆ ತೊಟ್ಟು ಸಂಚಲನ ಸೃಷ್ಟಿಸಿದ್ದರು. ಪುರುಷರ ಶರ್ಟ್ ಕಾಲರ್‌ನ್ನೇ ಬಳಸಿಕೊಂಡು ಗೌನ್ ಮಾಡಿಕೊಂಡ ಉರ್ಫಿ ಹೊಸ ಅಲೆ ಸೃಷ್ಟಿಸಿದ್ದರು. ಇದಕ್ಕೂ ಮೊದಲು ಜೀವಂತ ಮೀನು ತುಂಬಿದ ಅಕ್ವೇರಿಯಂ ಬ್ರಾ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದರು.