ಬಾಯ್ಸ್ ನಿಮ್ಮ ಶರ್ಟ್ ಜಾಗೃತೆ, ಉರ್ಫಿ ಜಾವೇದ್ ಹೊಸ ಅವತಾರಕ್ಕೆ ನೆಟ್ಟಿಗರ ಕಮೆಂಟ್!
ಉರ್ಫಿ ಜಾವೇದ್ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಪ್ರತಿ ಭಾರಿ ಉರ್ಫಿ ಊಹೆಗೂ ನಿಲುಕದ ಫ್ಯಾಶನ್ ಪ್ರದರ್ಶಿಸಿ ಎಲ್ಲರ ಗಮನಸೆಳೆದಿದ್ದಾರೆ. ಇದೀಗ ಪುರುಷರ ಶರ್ಟ್‌ನ್ನೇ ಗೌನ್ ಆಗಿ ಮಾಡಿಕೊಂಡ ಡ್ರೆಸ್‌ನಲ್ಲಿ ಉರ್ಫಿ ಪ್ರತ್ಯಕ್ಷರಾಗಿದ್ದಾರೆ.
ಆಕ್ವೇರಿಯಂ ಬ್ರಾ ತೊಟ್ಟು ಭಾರಿ ಸಂಚಲನ ಸೃಷ್ಟಿಸಿದ್ದ ಮಾಡೆಲ್ ಉರ್ಫಿ ಜಾವೇದ್ ಭಾರಿ ಸಂಚಲನ ಸೃಷ್ಟಿಸಿದ್ದರು. ಜೀವಂತ ಮೀನುಗಳನ್ನು ಬ್ರಾದೊಳಗೆ ಹಾಕಿ ಕಲ್ಪನೆಗೂ ಮೀರದ ಡ್ರೆಸ್ ಪ್ರದರ್ಶಿಸಿದ್ದರು.
ಪ್ರತಿ ಬಾರಿ ಹೊಸ ಹೊಸ ಪರಿಕಲ್ಪನೆಯೊಂದಿಗೆ ಉರ್ಫಿ ಕಾಣಿಸಿಕೊಳ್ಳುತ್ತಾರೆ. ಇದೀಗ ಉರ್ಫಿ ಜಾವೇದ್ ಹೊಸ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಪುರುಷರ ಶರ್ಟ್‌ನ್ನೇ ಗೌನ್ ಮಾಡಿಕೊಂಡಿದ್ದಾರೆ.
ಉರ್ಫಿ ಹೊಸ ಗೌನ್ ಶರ್ಟ್ ಕೋಲಾರ್‌ಗಳಿಂದ ಮಾಡಲ್ಪಟ್ಟಿದೆ. ಪಿಂಕ್ ಬಣ್ಣದ ಹಾಫ್ ಶೋಲ್ಡರ್ ಬಾಡಿಕಾನ್ ಗೌನ್ ಡ್ರೆಸ್ ಮೂಲಕ ಉರ್ಫಿ ಸೆಕ್ಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಕುರಿತು ವಿಡಿಯೋ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಪೋಸ್ಟ್ ಮಾಡಿ ಶರ್ಟ್ ಅಪ್ ಎವರಿಒನ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಈ ಡ್ರೆಸ್ ಶರ್ಟ್ ಅಪ್ ಎಂದೂ ಹಾಗೂ ಕೆಟ್ಟಕಮೆಂಟ್ ಮಾಡುವವರಿಗೆ ಶಟ್ ಅಪ್ ಎಂದೂ ಮಾರ್ಮಿಕವಾಗಿ ಹೇಳಿದ್ದಾರೆ.
ಉರ್ಫಿಯ ಹೊಸ ಅವತಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಎಂದಿನಂತೆ ಭಾರಿ ಕಮೆಂಟ್ ವ್ಯಕ್ತವಾಗಿದೆ. ಹಲವರು ಹುಡುಗರೆ ಎಚ್ಚರ ನಿಮ್ಮ ಶರ್ಟ್ ಕಾಣೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಹಲವರು ಉರ್ಫಿ ಜಾವೇದ್ ಹೊಸ ಫ್ಯಾಶನ್ ವಿರುದ್ಧ ಟೀಕೆ ಮಾಡಿದ್ದಾರೆ. ಕೆಲವರು ಕಾರ್ಟೂನ್ ನೆಟ್‌ವರ್ಕ್ ಎಂದಿದ್ದಾರೆ. ಮತ್ತೆ ಕೆಲವರು ಈ ಅವತಾರ ಯಾರಿಗಾಗಿ ಎಂದು ಪ್ರಶ್ನಿಸಿದ್ದಾರೆ.
ಉರ್ಫಿ ಜಾವೇದ್ ಕಮೆಂಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಇಷ್ಟೇ ಅಲ್ಲ ಕಮೆಂಟ್‌ನಿಂದ ತಮ್ಮ ಫ್ಯಾಶನ್ ಪ್ರತಿಭೆಯನ್ನು ಮೊಟಕುಗೊಳಿಸಿಲ್ಲ. ಅದಷ್ಟೇ ಟೀಕಿಸಿದರೂ ಉರ್ಫಿ ಮತ್ತೆ ಹೊಸ ಅವತಾರದಲ್ಲಿ ಪ್ರತ್ಯಕ್ಷರಾಗುತ್ತಾರೆ.