ಅಮ್ನೋರು ಧಾರಾವಾಹಿ ಈಗ ನನ್ನ ಐಡೆಂಟಿಟಿ: ಸುಕೀರ್ತಿ
ಹೆಸರಿಗೆ ಇದು ಕಿರುತೆರೆ. ಆದರೆ, ಇಲ್ಲಿ ಪಾತ್ರ ಮಾಡುವವರು ಯಾರಿಗೂ ಕಮ್ಮಿ ಇಲ್ಲದಂತೆ ದೊಡ್ಡ ತಾರೆಗಳಾಗಿ ಮಿಂಚುತ್ತಿದ್ದಾರೆ. ಮನೆ ಮನೆಗೆ ತಲುಪುತ್ತಿರುವ ಈ ಬಿಗ್ ಸ್ಟಾರ್‌ಗಳಿಗೆ ಈ ಪುಟ್ಟಪರದೆಯೇ ಭರವಸೆಯ ಬೆಳಕು. ಹೀಗೆ ಪ್ರೇಕ್ಷಕರ ಮನೆ ಮನದಲ್ಲೂ ಮಿಂಚುತ್ತಿರುವ ಕಿರುತೆರೆಯ ತಾರೆಗಳ ಪುಟ್ಟಪರಿಚಯವನ್ನು ಅವರ ಮಾತುಗಳಲ್ಲೇ ಕೇಳಿ.
ರಕ್ಷಾಬಂಧನ ನನ್ನ ಮೊದಲ ಧಾರಾವಾಹಿ. ಇಲ್ಲಿ ನಾಯಕನ ತಂಗಿ ಪಾತ್ರ ಮಾಡುವ ಮೂಲಕ ಕಿರುತೆರೆಗೆ ಪ್ರವೇಶ ಮಾಡಿದೆ. ಈಗ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಮ್ನೋರು’ ಧಾರಾವಾಹಿಯ ನಾಯಕಿ. ರಮೇಶ್ ಇಂದಿರಾ ನಿರ್ದೇಶಕರು. ಮೊದಲ ಹೆಜ್ಜೆಯಲ್ಲಿ ಪೋಷಕ ಪಾತ್ರ ಮಾಡಿದ ನಂತರ ನಾಯಕಿ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟ. ಕಾಲೇಜು ಓದುವಾಗಲೇ ನಾನು ಕಿರುತೆರೆಗೆ ಬರಬೇಕೆಂದು ಕನಸು ಕಾಣುತ್ತಿದೆ. ಹಾಗೆ ‘ರಕ್ಷಾಬಂಧನ’ ಧಾರಾವಾಹಿಗೆ ಆಡಿಷನ್ ಕೊಟ್ಟೆ. ಕೂಡಲೇ ಆಯ್ಕೆ ಮಾಡಿಕೊಂಡರು.
ಶಾರೂಕ್ ಖಾನ್ ಮಕ್ಕಳಿಗೆ ಟೀಚರ್ ಆಗಿದ್ರಂತೆ ಕನ್ನಡ ಕಿರುತೆರೆಯ ಈ ನಟಿ!
ಮೊದಲ ಧಾರಾವಾಹಿಯಲ್ಲಿ ನನ್ನ ನಟನೆ ನೋಡಿದ ಮೇಲೆ ರಮೇಶ್ ಇಂದಿರಾ ಅವರು ‘ಅಮ್ನೋರು’ ಧಾರಾವಾಹಿಗೆ ಲೀಡ್ ಪಾತ್ರಕ್ಕೆ ಅವಕಾಶ ಕೊಟ್ಟರು. ಹಾಗೆ ನಾನು ಎರಡನೇ ಧಾರಾವಾಹಿಗೇ ನಾಯಕಿಯಾಗಿ ಆಗಿದ್ದೇನೆ ಎಂದರೆ ಅದಕ್ಕೆ ಕಾರಣ ಕಿರುತೆರೆಯಲ್ಲಿ ನನಗೆ ಸಿಕ್ಕ ಯಶಸ್ಸು ಎನ್ನಬಹುದು. ‘ಅಮ್ನೋರು’ ಧಾರಾವಾಹಿಯಲ್ಲಿ ನನ್ನದು ತುಂಬಾ ಪಾಸೀಟ್ ಪಾತ್ರ. ಕತೆ ಕೂಡ ತುಂಬಾ ಚೆನ್ನಾಗಿದೆ. ದೇವರನ್ನು ನಂಬುವ ಹುಡುಗಿ ನಾನು. ಹೀಗಾಗಿ ನಾನು ಎಲ್ಲೇ ಹೋದರು ಅಮ್ನೋರು ಅಂತಲೇ ಕರೆಯುತ್ತಾರೆ. ನನ್ನ ನಿಜವಾದ ಹೆಸರು ಬಹುತೇಕರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಕಿರುತೆರೆಯಲ್ಲಿ ಪ್ರಸಿದ್ದ ಆಗುವ ನಟ- ನಟಿಯರ ನಿಜ ಹೆಸರುಗಳಿಗಿಂತ ಅವರ ಪಾತ್ರಗಳಿಗೆ ನೀಡಿರುವ ಹೆಸರುಗಳಿಂದಲೇ ಗುರುತಿಸುತ್ತಾರೆ. ಹಾಗೆ ಗುರುತಿಸುವುದೇ ದೊಡ್ಡ ಯಶಸ್ಸು. ನಾನು ಅಮ್ನೋರು ಅಂತ ಕರೆಸಿಕೊಳ್ಳುತ್ತಿದ್ದೇನೆ ಎಂದರೆ ಅದಕ್ಕೆ ಧಾರಾವಾಹಿಯ ಯಶಸ್ಸು, ಇಲ್ಲಿ ನನ್ನ ಪಾತ್ರವನ್ನು ರೂಪಿಸಿದ ನಿರ್ದೇಶಕರು ಕಾರಣ.
ಅನು ಬದುಕೇ ಬದಲಿಸಿದ 'ಜೊತೆ ಜೊತೆಯಲಿ';ಹೇಗಿದ್ದ ಲೈಫ್ ಹೇಗಾಯ್ತು ನೋಡಿ!
ಧಾರಾವಾಹಿ ಕತೆ ಕೇಳಿದ ಮೇಲೆ ಇದರಲ್ಲಿ ನಟಿಸಬಹುದು ಅಂತ ಮೊದಲು ಹೇಳಿದ್ದು ನನ್ನ ಅಪ್ಪ- ಅಮ್ಮ. ಯಾಕೆಂದರೆ ಅವರೇ ನನ್ನ ಮೊದಲ ಪ್ರೇಕ್ಷಕರು. ಅವರು ಏನೇ ಹೇಳಿದರೂ ಸರಿಯಾಗಿರುತ್ತದೆ. ಹೀಗಾಗಿ ಅವರ ಅಭಿಪ್ರಾಯಗಳನ್ನೇ ನಾನು ಫಾಲೋ ಮಾಡುತ್ತಿದ್ದೇನೆ. ಇಲ್ಲಿವರೆಗೂ 50ಕ್ಕೂ ಹೆಚ್ಚು ಎಪಿಸೋಡ್‌ಗಳು ಪ್ರಸಾರ ಆಗಿವೆ. ಶ್ರುತಿ ನಾಯ್ಡು ಅವರ ಪೊ›ಡಕ್ಷನ್‌ನಲ್ಲಿ ನಿರ್ಮಾಣ ಆಗುತ್ತಿರುವ ಧಾರಾವಾಹಿ ಎಂದ ಮೇಲೆ ಯಾವುದೇ ರೀತಿಯ ಸಮಸ್ಯೆ ಇರಲ್ಲ. ಎಲ್ಲರನ್ನು ಅವರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮುಂದೆ ಸಿನಿಮಾಗಳಲ್ಲೂ ನಟಿಸುವ ಆಸೆ ಇದೆ. ನಾನು ನಿಜ ಜೀವನದಲ್ಲಿ ತುಂಬಾ ಮೌನಿ. ಆದರೆ, ಧಾರಾವಾಹಿಯಲ್ಲಿ ಮಾತ್ರ ಸಿಕ್ಕಾಪಟ್ಟೆಮಾತಾನಾಡುವ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ಅದು ದೊಡ್ಡ ಸವಾಲು.