Asianet Suvarna News Asianet Suvarna News

ತೆಲಗು ಬಿಗ್​ಬಾಸ್​ನಲ್ಲಿ ಕನ್ನಡದ ತಾರೆಯರು! ಕನ್ನಡ ಮಾತು ಕೇಳಿ ಪುಳಕಗೊಂಡ ಕರುನಾಡ ಜನ

ತೆಲುಗು ಬಿಗ್​ಬಾಸ್​ನಲ್ಲಿ ಇಬ್ಬರು ಕನ್ನಡದ ಸ್ಪರ್ಧಿಗಳಿದ್ದು, ಅವರು ಕನ್ನಡದಲ್ಲಿ ಮಾತನಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಇದು ಸಕತ್​ ವೈರಲ್​ ಆಗುತ್ತಿದೆ.
 

Two Kannada contestants in Telugu Bigg Boss who spoke in Kannada suc
Author
First Published Nov 15, 2023, 5:52 PM IST

ಈಗ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಗ್​ಬಾಸ್​ನ ಫೀವರ್​ ಜೋರಾಗಿಯೇ ನಡೆಯುತ್ತಿದೆ. ಇತ್ತ ಕನ್ನಡದ ಸೀಸನ್​ 10 ಬಿಗ್​ಬಾಸ್​ ಶುರುವಾಗಿದ್ದರೆ, ಅತ್ತ ತೆಲಗುವಿನ 7ನೇ ಸೀಸನ್​ ಶುರುವಾಗಿದೆ. ಇದರಲ್ಲಿ 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಮನೆ ಮಾತಾಗಿರುವ ನಟಿ ಶೋಭಾ ಶೆಟ್ಟಿ ಕೂಡ ಪ್ರವೇಶ ಮಾಡಿದ್ದಾರೆ.  ಆಗಸ್ಟ್ ತಿಂಗಳಿನಿಂದ ಬಿಗ್​ಬಾಸ್​ ಶುರುವಾಗಿದ್ದು, ನಟ ನಾಗಾರ್ಜುನ ಅಕ್ಕಿನೇನಿ ಅವರು ಎಂದಿನಂತೆ ಈ ಶೋನ ನಿರೂಪಣೆ ಮಾಡುತ್ತಿದ್ದಾರೆ.  . ಹಲವು ಸ್ಪರ್ಧಿಗಳಲ್ಲಿ ಶೋಭಾ ಕೂಡ ಇದ್ದಾರೆ. ಸದ್ಯ  ಶೋಭಾ ಶೆಟ್ಟಿ  ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಾರಣ ತೆಲುಗು ಬಿಗ್​ಬಾಸ್​ ಮನೆಯಲ್ಲಿದ್ದಾರೆ.  6 ವರ್ಷಗಳಿಗೂ ಅಧಿಕ ಕಾಲ ಕಲರ್ಸ್​ ಕನ್ನಡದಲ್ಲಿ 'ಅಗ್ನಿಸಾಕ್ಷಿ' ಪ್ರಸಾರವಾಗಿತ್ತು. ಇದರಲ್ಲಿ ಶೋಭಾ ಶೆಟ್ಟಿ  ತನು ಪಾತ್ರದಲ್ಲಿ ನಟಿಸಿದ್ದರು.   


ಇನ್ನೋರ್ವ ನಟಿ  ಪ್ರಿಯಾಂಕಾ ಜೈನ್. ಕಿರುತೆರೆಯಲ್ಲಿ ಫೇಮಸ್​ ಆಗಿರೋ ನಟಿ ಇವರು.  ಮೌನ ರಾಗಂ ಮತ್ತು ಜಾನಕಿ ಕಲಗನಾಲೆಡು ಧಾರಾವಾಹಿಗಳಿಂದ ಹೆಸರು ಪಡೆದಿರುವ ಅವರು ಬಿಗ್ ಬಾಸ್ ತೆಲುಗು 7 ಗೆ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಬಿಗ್‌ ಬಾಸ್ ಮನೆ  ಪ್ರವೇಶಿಸಿದ್ದು, ಇನ್ನೂ ಆಟವಾಡುತ್ತಿದ್ದಾರೆ.  ಅಂದಹಾಗೆ ಪ್ರಿಯಾಂಕಾ, ಗೋಲಿ ಸೋಡಾ ಮೂಲಕ ಪ್ರಿಯಾಂಕಾ ಎಂ ಜೈನ್ ಸ್ಯಾಂಡಲ್ ವುಡ್  ಪ್ರವೇಶಿಸಿದ್ದರು.   ತಮ್ಮ ತಾಯಿಯ ಕನಸನ್ನು ನನಸು ಮಾಡುವುದಕ್ಕಾಗಿ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದರು. ನನ್ನ ತಾಯಿಗೆ ಚಿತ್ರನಟಿಯಾಗಬೇಕೆಂಬ ಕನಸಿತ್ತು, ಆದರೆ ಆ ಕನಸು ನನಸಾಗಲಿಲ್ಲ. ಆದ್ದರಿಂದ ನಾನು ನಟಿಯಾಗಬೇಕೆಂಬುದು ನನ್ನ ತಾಯಿಯ ಆಸೆಯಾಗಿದೆ. ನನ್ನ ತಾಯಿಯ ಕನಸನ್ನು ಈಡೇರಿಸುವುದೇ ನನ್ನ ಕನಸು ಎಂದಿದ್ದರು. ಇವರ ತಾಯಿ ಕೂಡ ಬಿಗ್​ಬಾಸ್​ ಪ್ರವೇಶಿಸಿದ್ದರು.

ಪ್ಲೀಸ್​ ಸುದೀಪ್​ ಸರ್..​ ಪ್ರತಾಪ್​ ಆಸೆ ನೆರವೇರಿಸಿ ಅಂತ ಕಣ್ಣೀರು ಹಾಕ್ತಿದ್ದಾರೆ ಫ್ಯಾನ್ಸ್​! ಅಷ್ಟಕ್ಕೂ ಆಗಿದ್ದೇನು?

ಇದೀಗ, ಬಿಗ್​ಬಾಸ್​ ಮನೆಯೊಳಗೆ ಇರುವ ಸದಸ್ಯರನ್ನು ಮಾತನಾಡಲು ಕುಟುಂಬಸ್ಥರಿಗೆ ಅವಕಾಶ ಕಲ್ಪಿಸಲಾಗಿದೆ. ಆಗ ಶೋಭಾ ಅವರ ತಂದೆ ಮಗಳ ಜೊತೆ ಮಾತನಾಡಿದಾಗ, ಶೋಭಾ ಅವರು, ಪ್ರಿಯಾಂಕಾ ಜೊತೆ ಮಾತನಾಡಿ, ಅವರು ಕೂಡ ಕನ್ನಡದವರು ಎಂದರು. ಆಗ ಪ್ರಿಯಾಂಕಾ, ನಿಮ್ಮನ್ನು ನೋಡಿದರೆ ನನ್ನ ಅಪ್ಪನ ನೆನಪಾಗುತ್ತದೆ ಎಂದರು. ಶೋಭಾ ತಂದೆ ಎಲ್ಲರಿಗೂ ಶುಭಾಶಯ ಹೇಳಿದ್ದು, ಇದು ಕನ್ನಡಿಗರ ಪೇಜ್​ಗಳಲ್ಲಿ ವೈರಲ್​ ಆಗುತ್ತಿದೆ. ತೆಲುಗು ಬಿಗ್​ಬಾಸ್​ನಲ್ಲಿಯೂ ಕನ್ನಡದ ಕಂಪು ಹರಿಯುತ್ತಿರುವುದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. 

ಈ ಹಿಂದೆ,  ಶೋಭಾ ಶೆಟ್ಟಿ, ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಅವರ ಜೊತೆ ಕನ್ನಡದಲ್ಲಿ ಮಾತನಾಡಿದ್ದರು.   ನಟಿ ಶ್ರೀಲೀಲಾ ಅವರನ್ನು ಬಿಗ್​ಬಾಸ್​ ವೇದಿಕೆಯ ಮೇಲೆ ಅತಿಥಿಯಾಗಿ ಕರೆತರಲಾಗಿತ್ತು. ಆ ಸಮಯದಲ್ಲಿ ಬಿಗ್​ಬಾಸ್​ ಮನೆಯ ಒಳಗಿನಿಂದ ಇವರಿಬ್ಬರೂ ಕನ್ನಡದಲ್ಲಿ ಮಾತನಾಡಿದದರು. ಹೀಗಿದ್ದೀರಾ ಎಂದೆಲ್ಲಾ ಇಬ್ಬರೂ ಕನ್ನಡದಲ್ಲಿಯೇ ಕುಶಲೋಪ ವಿಚಾರಿಸಿಕೊಂಡಿದ್ದರು. ಕನ್ನಡದವರೊಬ್ಬರು ಬಿಗ್​ಬಾಸ್​  ಮನೆಯೊಳಕ್ಕೆ ಆಂಧ್ರದಲ್ಲಿ ಇರುವುದನ್ನು ಕಂಡು ಖುಷಿಯಿಂದ ಇರುವ ನಟಿ ಶ್ರೀಲೀಲಾ ಕರ್ನಾಟಕ ಮೀಟ್ಸ್​ ಕರ್ನಾಟಕ ಎಂದು ಖುಷಿಯಿಂದ ಹೇಳಿಕೊಂಡಿದ್ದರು. 

ಏನ್​ ನಾಟ್ಕ ಗುರೂ... ಸುದೀಪ್​ಗಿಂತ್ಲೂ ಬೆಸ್ಟ್​ ಆ್ಯಕ್ಟ್​ ಮಾಡ್ತಿರಾ ಬಿಡಿ... ವರ್ತೂರ್​ ಸಂತೋಷ್​ ಸಕತ್​ ಟ್ರೋಲ್​!

Follow Us:
Download App:
  • android
  • ios