Asianet Suvarna News Asianet Suvarna News

ತಂದೆಗೆ ಕ್ಯಾನ್ಸರ್; ಆತ್ಮಹತ್ಯೆಗೆ ಶರಣಾದ ಕಿರುತೆರೆ ನಟಿ

ತಂದೆಗೆ ತೀವ್ರ ಅನಾರೋಗ್ಯ; ಡಿಪ್ರೆಶನ್‌ಗೆ ಹೋದ ಕಿರುತೆರೆ ನಟಿ | ಅತಿಯಾದ ಡಿಪ್ರೆಶನ್‌ನಿಂದ ಆತ್ಮಹತ್ಯೆಗೆ ಶರಣು | 

TV Actress Sejal Sharma allegedly commits Suicide in Mumbai
Author
Bengaluru, First Published Jan 25, 2020, 12:18 PM IST
  • Facebook
  • Twitter
  • Whatsapp

ಮುಂಬೈ (ಜ. 25): ' ದಿಲ್ ತೋ ಹ್ಯಾಪಿ ಹೈ ಜಿ' ಸೀರಿಯಲ್ ಖ್ಯಾತಿಯ ಸೇಜಲ್ ಶರ್ಮಾ ಅವರ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಇದಮಿತ್ಥಂ ಎನ್ನುವ ಕಾರಣ ತಿಳಿದು ಬಂದಿಲ್ಲ.  ತಂದೆಯ ಆರೋಗ್ಯ ತೀರಾ ಹದಗೆಟ್ಟಿರುವುದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬಹುದೆಂದು ವರದಿಯಾಗಿದೆ. 

ರಜನಿಕಾಂತ್ ಚಿತ್ರವನ್ನೇ ತಿರಸ್ಕರಿಸಿದ ಕನ್ನಡ ನಟಿ!ಕಾರಣವಾದ್ರೂ ಏನು?

'ತಂದೆಯ ಅನಾರೋಗ್ಯದಿಂದ ಸೇಜಲ್ ತುಂಬಾ ಒತ್ತಡದಲ್ಲಿದ್ದಳು. ನಾನು ಅವಳಿಗೆ ಮೆಸೇಜ್ ಮಾಡಿದ್ದೆ. ಮೆಡಿಕಲ್ ಎಮರ್ಜೆನ್ಸಿಯಿಂದಾಗಿ ಉದಯಪುರಕ್ಕೆ ಹೋಗುತ್ತಿದ್ದೇನೆ ಎಂದಿದ್ದಳು.  ಯಾಕೆ ಎಂದು ಕೇಳಿದ್ದಕ್ಕೆ ತಂದೆಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದಿದ್ದಳು. ಇದೀಗ ಆಕೆಯೇ ಆತ್ಮಹತ್ಯೆಗೆ ಶರಣಾಗಿರುವುದು ಶಾಕ್ ಆಗಿದೆ' ಎಂದು ದಿಲ್ ತೋ ಹ್ಯಾಪಿ ಹೇ ಜಿ ಸಹನಟ ಅರು ಕೆ ವರ್ಮಾ ಹೇಳಿದ್ದಾರೆ. 

ಸಚಿನ್ ತೆಂಡೂಲ್ಕರ್‌ ಜೊತೆ ಸಿಹಿ ಕಹಿ ಚಂದ್ರು ಪುತ್ರಿ; ವೈರಲ್‌ ಫೋಟೋ ಹಿಂದಿನ ಕಥೆ!

ವೈಯಕ್ತಿ ಕಾರಣಗಳಿಂದ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. 

ಸೇಜಲ್ ಶರ್ಮಾ ರಾಜಸ್ಥಾನದ ಉದಯಪುರದವರು. ಕೆಲವರ್ಷಗಳ ಹಿಂದೆ ಸಿನಿಮಾ ಕರಿಯರ್‌ಗಾಗಿ ಮುಂಬೈಗೆ ಬಂದಿದ್ದರು. ಸದ್ಯ 'ದಿಲ್ ತೋ ಹ್ಯಾಪಿ ಹೈ ಜಿ' ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. 

 

Follow Us:
Download App:
  • android
  • ios