ಗಂಡನಿಗಾಗಿ ಮೂಗು ಚುಚ್ಚಿಸಿಕೊಂಡ ನಟಿ ರಶ್ಮಿ ಪ್ರಭಾಕರ್; ವಾವ್ ಎಂದ ಫ್ಯಾನ್ಸ್

ಕನ್ನಡ ಕಿರುತೆರೆಯ ಖ್ಯಾತ ನಟಿ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ರಶ್ಮಿ ಪ್ರಭಾಕರ್ ಮೂಗು ಚುಚ್ಚಿಸಿಕೊಂಡಿದ್ದಾರೆ. 

Tv Actress Rashmi Prabhakar gets her nose pierced to fulfill her husband's wish sgk

ಕನ್ನಡ ಕಿರುತೆರೆಯ ಖ್ಯಾತ ನಟಿ, ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ರಶ್ಮಿ ಪ್ರಭಾಕರ್ ಮದುವೆ ಬಳಿಕ ಕನ್ನಡದ ಯಾವುದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಸೂಪರ್ ಕ್ವೀನ್ಸ್ ರಿಯಾಲಿಟಿ ಶೋ ಮೂಲಕ ಮತ್ತೆ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ಟೀವ್ ಆಗಿರುವ ರಶ್ಮಿ ಸದಾ ಪೋಸ್ಟ್ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ರಶ್ಮಿ ಹಂಚಿಕೊಂಡಿರುವ ವಿಡಿಯೋ ಅಭಿಮಾನಿಗಳ ಹೃದಯ ಗೆದ್ದಿದೆ. 

ನಟಿ ರಶ್ಮಿ ಮೂಗು ಚುಚ್ಚಿಸಿಕೊಂಡಿದ್ದಾರೆ. ಮೂಗುತಿ ಹಾಕಿಸಿಕೊಳ್ಳುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ರಶ್ಮಿ ಮೂಗು ಚುಚ್ಚಿಸಿಕೊಳ್ಳಬೇಕು ಎನ್ನುವುದು ಅವರ ಪತಿಯ ಆಸೆಯಂತೆ. ಹಾಗಾಗಿ ಪತಿಯ ಆಸೆಯಂತೆ ನಟಿ ರಶ್ಮಿ ಮೂಗು ಚುಚ್ಚಿಸಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿ ಕೊನೆಗೂ ಪತಿಗೆ ಎಂದು ಬರೆದುಕೊಂಡಿದ್ದಾರೆ. ಮೂಗು ಚುಚ್ಚಿಸಿಕೊಂಡ ಬಳಿಕ ಕಣ್ಣೀರಾಕುತ್ತಿದ್ದ ರಶ್ಮಿಯನ್ನು ಪತಿ ನಿಖಿಲ್ ಭಾರ್ಗವ್ ತಬ್ಬಿಕೊಂಡು ಸಮಾಧಾನ ಮಾಡಿದರು. ಈ ವಿಡಿಯೋ ಈಗ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 ಮೂಗು ಚುಚ್ಚಿಕೊಳ್ಳಬೇಕೆಂಬ ತನ್ನ ಗಂಡನ ಆಸೆಯನ್ನು ಈಡೇರಿಸಿದ ರಶ್ಮಿ ತುಂಬಾ ಖುಷಿಯಾಗಿದ್ದಾರೆ.  ತನ್ನ ಪತಿಯು ತಾನು ಮೂಗು ಚುಚ್ಚಿಸಿಕೊಳ್ಳಬೇಕು ಎಂದು ಬಹಳ ಸಮಯದಿಂದ ನೋಡಲು ಬಯಸಿದ್ದರು. ಚುಚ್ಚಿದ ಬಳಿಕ ರಶ್ಮಿ ನೋವಿನಿಂದ ಬಳಲುತ್ತಿದ್ದರು. ಸಂತೋಷದ ಕಣ್ಣೀರು  ಹಾಕುತ್ತಾ ನಗುತ್ತಿದ್ದರು.

ಅವತ್ತು ನಾನು ಈ ಸ್ಟೇಜಲ್ಲಿದ್ದೆ, ಅಮ್ಮ ಐಸಿಯುನಲ್ಲಿದ್ರು: ರಶ್ಮಿ ಪ್ರಭಾಕರ್‌ ಕಣ್ಣೀರು

ರಶ್ಮಿಕಾ ವಿಡಿಯೋಗೆ ಸ್ನೇಹಿತರು ಮತ್ತು ಅಭಿಮಾನಿಗಳು ಕಾಮೆಂಟ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಅನೇಕರು ಕಾಮೆಂಟ್ ಮಾಡಿ ತುಂಬಾ ಸುಂದರವಾಗಿ ಕಾಣಿಸುತ್ತೀರಿ ಎಂದು ಹೇಳಿದ್ದಾರೆ. ಮತ್ತೋರ್ವರು ಕಾಮೆಂಟ್ ಈ ನೋವನ್ನು ಹೇಗೆ ತಡೆಯುತ್ತೀರಿ ಎಂದು ಕೇಳಿದ್ದಾರೆ. ನಟಿ ಗೀತಾ ಭಾರತಿ ಕಾಮೆಂಟ್ ಮಾಡಿ ಅಭಿನಂದನೆಗಳು ಸುಂದರಿ ಎಂದು ಹೇಳಿದ್ದಾರೆ. ಅಭಿಮಾನಿಗಳು ವಾವ್ ಎಂದು ಹೇಳುತ್ತಿದ್ದಾರೆ.

ಆ ಒಂದು ತಪ್ಪಿನಿಂದ ಕಣ್ಣು ಕಳೆದುಕೊಂಡೆ; ರಶ್ಮಿ ಪ್ರಭಾಕರ್ ಜೀವನದ ಕಹಿ ಘಟನೆ

ನಟಿ ರಶ್ಮಿ ದೀರ್ಘ ಕಾಲದ ಗೆಳೆಯ ನಿಖಿಲ್ ಭಾರ್ಗವ್ ಜೊತೆ ಕಳೆದ ವರ್ಷ ಹಸೆಮಣೆ ಏರಿದರು ಬೆಂಗಳೂರಿನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಕಿರುತೆರೆ ಗಣ್ಯರು ಮತ್ತು ಕುಟುಂಬದವರು ಭಾಗಿಯಾಗಿದ್ದರು. ಸಂತೋಷದ ಸಂಸಾರಿಕ ಜೀವನ ನಡೆಸುತ್ತಿರುವ ರಶ್ಮಿ ಮತ್ತೆ ಧಾರಾವಾಹಿ ಮೂಲಕ ಅಭಿಮಾನಿಗಳ ಮುಂದೆ ಬರಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ ಈಗ ರಶ್ಮಿಕಾ ಸೂಪರ್ ಕ್ವೀನ್ ಶೋನಲ್ಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. 

Latest Videos
Follow Us:
Download App:
  • android
  • ios