ತುಳು ರಂಗಭೂಮಿ, ತುಳು ಚಿತ್ರರಂಗದಲ್ಲಿ ಕಾಲ ಕಾಲಕ್ಕೆ ಏನಾದರೂ ಹೊಸತು ನಡೆಯುತ್ತಾ ಬಂದಿದೆ. ತುಳು ನಾಟಕ, ತುಳು ಸಿನಿಮಾ, ತುಳು ವೆಬ್ ಸೀರೀಸ್ ಸೋಷಿಯಲ್ ಮೀಡಿಯಾದಲ್ಲಿ ಬಹಳ ಟ್ರೆಂಡ್ ಆಗುತ್ತದೆ. 

ಅದಕ್ಕೆ ತಕ್ಕಂತೆ ಹೊ ಹೊಸ ವಿಚಾರಗಳನ್ನಿಟ್ಟುಕೊಂಡು ಹೊಸ ರೀತಿಯ ಕಾರ್ಯಕ್ರಮಗಳು ರೂಪುಗೊಳ್ಳುತ್ತಾ ಇರುತ್ತವೆ. ಪ್ರಸ್ತುತ ಹೊಸ ಥರದ ಕಂಟೆಂಟ್ ಗೆ ಮತ್ತೊಂದು ಕಿರುಚಿತ್ರ ಸೇರಿಕೊಂಡಿದೆ. ಅದರ ಹೆಸರು ಕಂಟಕ.

ಸಿನಿಮಾ, ಗಾಸಿಪ್, ಹಾಲಿವುಡ್, ಬಾಲಿವುಡ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪುಷ್ಪರಾಜ್ ಶೆಟ್ಟಿ ಮಜ್ಜರ್ ನಿರ್ದೇಶನದ ಈ ಕಿರುಚಿತ್ರ ಈಗಾಗಲೇ ಕೂಳೂರು ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಕುತೂಹಲಕರ ಕತೆ, ಸೊಗಸಾದ ಛಾಯಾಗ್ರಹಣ, ಮನಸ್ಸು ತಟ್ಟುವ ಸಂಗೀತ, ಅಚ್ಚುಕಟ್ಟಾದ ನಟನೆಯಿಂದ ನೋಡುಗರ ಮನ ಗೆಲ್ಲುತ್ತಿದೆ.

ಈ ಕಿರುಚಿತ್ರವನ್ನು ನಿರ್ಮಿಸಿರುವುದು ಉದ್ಯಮಿ ಮೋಹನ್ ಶೆಟ್ಟಿ ಮಜ್ಜರ್. ಕಾಸರಗೋಡಿನ ಮಜ್ಜರ್ ನ ಇವರು ಮುಂಬೈನಲ್ಲಿ ಉದ್ಯಮಿಯಾಗಿದ್ದಾರೆ. ತರುಣ ತಂಡಕ್ಕೆ ಪ್ರೋತ್ಸಾಹಿಸಲು ತಾನು ಬೆನ್ನೆಲುಬಾಗಿ ನಿಂತಿದ್ದಾಗಿ ಹೇಳಿಕೊಳ್ಳುತ್ತಾರೆ. ಕಿರುಚಿತ್ರ ಚೆನ್ನಾಗಿ ಬಂದಿರುವುದಕ್ಕೆ ಹರ್ಷ ವ್ಯಕ್ತ ಪಡಿಸುತ್ತಾರೆ.

ಕಂಟಕ ಕಿರುಚಿತ್ರದ ಕತೆ ಬರೆದವರು ಜಯರಾಜ್ ಶೆಟ್ಟಿ ಚಾರ್ಲ, ಇಂಪಾದ ಸಂಗೀತ ನೀಡಿದವರು ಗುರು ಬಾಯಾರ್, ಮನ ಮುಟ್ಟುವ ಸಾಹಿತ್ಯ ರಚಿಸಿದವರು ತುಳುನಾಡ ಕಲಾ ಕದಿಕೆ ರಾಜೇಶ್ ಮುಗುಳಿ, ಸೊಗಸಾಗಿ ಚಿತ್ರೀಕರಿಸಿದವರು ಬಾತು ಕುಲಾಲ್.

ಲಿಂಕು ಇಲ್ಲಿದೆ- https://youtu.be/H9ifyKFl0ZM