Asianet Suvarna News Asianet Suvarna News

ಸರ ಕೊಟ್ಟ ಸುಳಿವು: ಪೂರ್ಣಿಯ ಅಸಲಿ ಅಪ್ಪ- ಅಮ್ಮನ ಸತ್ಯ ತುಳಸಿಗೆ ಗೊತ್ತಾಯ್ತು!

ಶ್ರೀರಸ್ತು ಶುಭಮಸ್ತು ಸೀರಿಯಲ್​ ಕುತೂಹಲ ಘಟ್ಟ ತಲುಪಿದ್ದು, ಪೂರ್ಣಿಯ ಅಸಲಿ ಅಪ್ಪ-ಅಮ್ಮ ಯಾರು ಎಂದು ತುಳಸಿಗೆ ತಿಳಿದಿದೆ. ಈಗ ಮುಂದೇನು? 
 

Tulasi knows about Poornis real parents in Shreerastu Shubhamastu suc
Author
First Published Aug 9, 2024, 12:50 PM IST | Last Updated Aug 9, 2024, 12:50 PM IST

ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಇಬ್ಬರು ಸೊಸೆಯಂದಿರದ್ದು ಎರಡು ರೀತಿಯ ಸ್ವಭಾವ. ಒಬ್ಬಳು ತುಂಬಾ ಒಳ್ಳೆಯವಳು, ಇನ್ನೊಬ್ಬಳು ಅಗತ್ಯಕ್ಕಿಂತ ಹೆಚ್ಚು ಕೆಟ್ಟವಳು. ಪೂರ್ಣಿ ಮತ್ತು ದೀಪಿಕಾ ಎಂಬ ಈ ಇಬ್ಬರು ಸೊಸೆಯಂದಿರ ವಿಭಿನ್ನ ಸ್ವಭಾವ ನಿಜ ಜೀವನದಲ್ಲಿರುವ ಕೆಲವು ಹೆಣ್ಣುಮಕ್ಕಳ ನಿಜ ಸ್ವಭಾವ ಎಂದೂ ಆಗಾಗ್ಗೆ ನೆಟ್ಟಿಗರು ಹೇಳುವುದುಂಟು. ಆದರೆ ಇಲ್ಲಿ ದೀಪಿಕಾಗೆ ಪೂರ್ಣಿ ಕಂಡರೆ ಇನ್ನಿಲ್ಲದ ಕೋಪ. ಅದಕ್ಕೆ ಕಾರಣ ಪೂರ್ಣಿ ಅನಾಥೆ ಎನ್ನುವುದು ಅಷ್ಟೇ. ಅಷ್ಟು ಬಿಟ್ಟರೆ ಮತ್ತೇನೂ ಇಲ್ಲ. ಅಷ್ಟಕ್ಕೂ  ಸೀರಿಯಲ್​ನಲ್ಲಿ ಪೂರ್ಣಿ ಅನಾಥೆ ಎಂದೇ ಇಲ್ಲಿಯವರೆಗೆ ತೋರಿಸುತ್ತಾ ಬರಲಾಗಿದೆ. ಅವಳು ತನ್ನನ್ನು ತಾನು ಅನಾಥೆ ಎಂದುಕೊಂಡಿದ್ದಾಳೆ. ಅನಾಥಾಶ್ರಾಮದಲ್ಲಿಯೇ ಬೆಳೆದಿರುವ ಪೂರ್ಣಿಗೆ ತನ್ನ ಹುಟ್ಟಿನ ಬಗ್ಗೆಯೂ ಗೊತ್ತಿಲ್ಲ. ಅದರ ಬಗ್ಗೆ ಆಕೆ ಹೆಚ್ಚಿಗೆ ತಲೆಕೆಡಿಸಿಕೊಂಡೂ ಇಲ್ಲ. ಮಾಧವನ ಮನೆಯಲ್ಲಿ ಎಲ್ಲರೂ ಆಕೆಯನ್ನು ಅನಾಥೆ ಎಂದುಕೊಂಡಿದ್ದಾರೆ. ಮಾಧವನ ಮಗ ಅವಿಯ ಮಡದಿಯಾಗಿ ಬಂದಿದ್ದಾಳೆ. ಅವಿ ಕೂಡ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ, ತುಂಬಾ  ಪ್ರೀತಿ ಮಾಡುತ್ತಿದ್ದಾನೆ. ಇನ್ನು ತುಳಸಿಗೋ ಆ ಮನೆಯಲ್ಲಿ ಮಾಧವ್​ನನ್ನು ಬಿಟ್ಟರೆ ತುಂಬಾ ಪ್ರೀತಿ, ಅಕ್ಕರೆಯಿಂದ ನೋಡಿಕೊಳ್ಳುವವಳು ಇದೇ ಪೂರ್ಣಿ. ಈಕೆಗೂ ತುಳಸಿಯೇ ಅಮ್ಮ. ಆದರೆ ಈಕೆ ಅನಾಥಾಶ್ರಮದಿಂದ ಬಂದವಳು ಎನ್ನುವ ಕಾರಣಕ್ಕೆ ದೀಪಿಕಾ ಆಗ್ಗಾಗ್ಗೆ ಚುಚ್ಚುವುದು ಉಂಟು.

ಆದರೆ ಈ ಹಿಂದೆ ಆಸ್ತಿಯ ಸಲುವಾಗಿ ದೀಪಿಕಾಳ ಅಪ್ಪ ಪೂರ್ಣಿಯನ್ನೇ  ತಮ್ಮ ಮಗಳು ಎಂದು ಪ್ಲ್ಯಾನ್​  ಮಾಡಿ ಕರೆದುಕೊಂಡು ಬಂದಿದ್ದ. ಇದಕ್ಕೆ ದೀಪಿಕಾ ಕೈಜೋಡಿಸಿದ್ದಳು. ಪೂರ್ಣಿ ಕೂಡ ತನ್ನ ಹೆತ್ತ ಅಪ್ಪ-ಅಮ್ಮ ಸಿಕ್ಕ ಖುಷಿಗೆ ನಲಿದಾಡಿದ್ದಳು. ಆದರೆ ಕೊನೆಗೆ ಅಸಲಿಯತ್ತು ಗೊತ್ತಾಗಿತ್ತು. ಆದರೆ ಇದೀಗ ಮತ್ತೆ ಟ್ವಿಸ್ಟ್​ ಬಂದಿದೆ. ಅದೇನೆಂದರೆ, ನಿಜಕ್ಕೂ ಪೂರ್ಣಿಗೆ ದೀಪಿಕಾನೇ ಸಹೋದರಿ. ಅಂದರೆ ದೀಪಿಕಾ ಅಪ್ಪ-ಅಮ್ಮನೇ ಪೂರ್ಣಿಯ ಅಪ್ಪ-ಅಮ್ಮ ಎನ್ನುವುದು. ತುಳಸಿಗೆ ಈ ವಿಷಯ ಈಗ ತಿಳಿದಿದೆ. ಪೂರ್ಣಿಯನ್ನು ಅನಾಥಾಶ್ರಮದಲ್ಲಿ ಇಟ್ಟ ಸಂದರ್ಭದಲ್ಲಿ ಅವಳ ಅಮ್ಮ ಕುತ್ತಿಗೆಗೆ ಒಂದು ಸರ ಹಾಕಿದ್ದಳು. ತುಳಸಿ ದೀಪಿಕಾಳ ತವರು ಮನೆಗೆ ಹೋದಾಗ ಅಲ್ಲಿ ಪೂರ್ಣಿಯ ಬಾಲ್ಯದ ಫೋಟೋ ನೋಡುತ್ತಾಳೆ. ಅದರಲ್ಲಿ ಸರ ನೋಡುತ್ತಾಳೆ. ಆಗ ಅವಳಿಗೆ ಮಾತುಕತೆಯಲ್ಲಿ ಪೂರ್ಣಿಯೇ ಇವರ ಮಗಳು ಎಂದು ಗೊತ್ತಾಗುತ್ತದೆ. ಆದರೆ ಹಿಂದೆ ಇದೇ ವಿಷಯದಲ್ಲಿ ಮೋಸ ಹೋಗಿ ನೋವನ್ನುಂಡಿದ್ದಾಳೆ ಪೂರ್ಣಿ. ಮತ್ತೆ ತುಳಸಿ ವಿಷಯ ಹೇಳ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ. 

 ಸಿಹಿ ಜೊತೆ ಭಾರ್ಗವಿ ಚಿಕ್ಕಿ ಭರ್ಜರಿ ಸ್ಟೆಪ್​: ಬೋರ್ಡಿಂಗ್​ ಸ್ಕೂಲ್​ಗೆ ಕಳಿಸೋ ಖುಷಿನಾ ಕೇಳ್ತಿದ್ದಾರೆ ಫ್ಯಾನ್ಸ್​

ಈ ಮೊದಲೇ ನೆಟ್ಟಿಗರು ಈಕೆ ವಿಲನ್​ ದೀಪಿಕಾಳ ಅಕ್ಕನೇ ಇದ್ದಿರಬಹುದು. ಆಕೆಯ ಅಪ್ಪನಿಗೆ ಪೂರ್ಣಿ ಅಕ್ರಮವಾಗಿ ಹುಟ್ಟಿರುವ ಮಗು ಇದ್ದಿರಬಹುದು, ಇಲ್ಲವೇ ಮದುವೆಗೂ ಮುನ್ನ ದೀಪಿಕಾ ಅಮ್ಮನಿಗೆ ಇದು ಹುಟ್ಟಿದ್ದಿರಬಹುದು. ಖಂಡಿತವಾಗಿಯೂ ಪೂರ್ಣಿ ಇದೇ ಶ್ರೀಮಂತರ ಮನೆಯ ಮಗಳು ಎನ್ನುತ್ತಿದ್ದರು. ಇನ್ನು ಕೆಲವರು, ಪೂರ್ಣಿ, ದೀಪಿಕಾ ಅಪ್ಪನಿಗೆ ಹುಟ್ಟಿದ ಮಗು, ಆ ಮೇಲೆ ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ದೀಪಿಕಾಳನ್ನು ಅನಾಥಾಶ್ರಮದಿಂದ ತಂದಿರಬಹುದು ಎಂದೂ ಹೇಳಿದ್ದರು.  ಆದರೆ ಕೊನೆಗೆ ನಾಟಕೀಯ ತಿರುವಿನಲ್ಲಿ ಇದು ಸತ್ಯ ಎಂದು ತಿಳಿದಿತ್ತು. ಆದರೆ ದೀಪಿಕಾ ಅಪ್ಪ ಸತ್ಯವನ್ನು ಅರಿಯದೇ  ಮೋಸದಾಟ ಮಾಡಿದ್ದ. ಮುಂದೇನು ಎನ್ನುವುದು ಈಗಿರುವ ಪ್ರಶ್ನೆ. 

ಇನ್ನು ಸದ್ಯದ ಸೀರಿಯಲ್ ವಿಷಯಕ್ಕೆ ಬರುವುದಾದರೆ, ಇದೀಗ ತುಳಸಿ ಎಲ್ಲರಿಗೂ ಹತ್ತಿರವಾಗಿದ್ದಾಳೆ. ಹಿಂದೆ ಮದುವೆಯಾದ ಸಂದರ್ಭದಲ್ಲಿ ಮದುವೆಯನ್ನು ತಾವ್ಯಾರೂ  ನೋಡಿಲ್ಲ ಎನ್ನುವ ಕಾರಣ ನೀಡಿ ಮತ್ತೊಮ್ಮೆ ಮದುವೆ ಮಾಡಿಸಿದ್ದಾರೆ.  ಅತ್ತ ಸಮರ್ಥ್​ ತಮ್ಮ ಅಮ್ಮನಿಗೆ ಧಾರೆ ಸೀರೆ ತಂದಿದ್ದರೆ, ಇತ್ತ ಅವಿ ಕೂಡ ಅಮ್ಮನಿಗೆ ಧಾರೆ ಸೀರೆ ತಂದಿದ್ದ. ಇಬ್ಬರ ಸೀರೆಯನ್ನು ಹೇಗೆ ಉಡುವುದು ಎಂದು ತಿಳಿಯದೇ ಪೇಚಿಗೆ ಸಿಲುಕಿದ್ದಳು ತುಳಸಿ. ಇದೀಗ ಇಬ್ಬರಿಗೂ ನ್ಯಾಯ ಒದಗಿಸಿದ್ದಾಳೆ ತುಳಸಿ, ಇಬ್ಬರೂ ಕೊಟ್ಟ ಸೀರೆಯಲ್ಲಿ ವಿಭಿನ್ನ ರೀತಿಯಲ್ಲಿ ಉಟ್ಟು ಬಂದಿದ್ದಾಳೆ. ಅತ್ತ ಮಾಧವ್​ನನ್ನು ಮದುಮಗನನ್ನಾಗಿ ಮಾಡಲಾಗಿದೆ. ಒಟ್ಟಿನಲ್ಲಿ ಸೀರಿಯಲ್​ನಲ್ಲಿ ಈಗ ಮಾಧವ್​ ಮತ್ತು ತುಳಸಿಯ ಮರುಮದುವೆ ವಿಜೃಂಭಣೆಯಿಂದ ನಡೆದಿದ್ದು, ತುಳಸಿಯನ್ನು ಮತ್ತೊಮ್ಮೆ ಮನೆ ತುಂಬಿಸಿಕೊಳ್ಳಲಾಗಿದೆ ಕೂಡ. 
 

ತರುಣ್​-ಸೋನಲ್​ ಮದುವೆಗೆ ಕ್ಷಣಗಣನೆ... ನಟಿಯ ಭರ್ಜರಿ ಬ್ಯಾಚುಲರ್​ ಪಾರ್ಟಿ ಹೇಗಿತ್ತು ನೋಡಿ...!

Latest Videos
Follow Us:
Download App:
  • android
  • ios