ಸಿಹಿ ಜೊತೆ ಭಾರ್ಗವಿ ಚಿಕ್ಕಿ ಭರ್ಜರಿ ಸ್ಟೆಪ್​: ಬೋರ್ಡಿಂಗ್​ ಸ್ಕೂಲ್​ಗೆ ಕಳಿಸೋ ಖುಷಿನಾ ಕೇಳ್ತಿದ್ದಾರೆ ಫ್ಯಾನ್ಸ್​

ಸೀತಾರಾಮ ಟೀಮ್​ ಭಾರ್ಗವಿ, ಸಿಹಿ, ಅಂಜಲಿ ಪುಷ್ಪಾ-2 ಹಾಡಿಗೆ ರೀಲ್ಸ್​ ಮಾಡಿದ್ದಾರೆ. ನೆಟ್ಟಿಗರು  ಏನೆಲ್ಲಾ ಹೇಳ್ತಿದ್ದಾರೆ ನೋಡಿ... 
 

Seetharama team Bhargavi Sihi Anjali have made reels for Pushpa 2 song soseki suc

ಸೀತಾ ರಾಮ ಕಲ್ಯಾಣ ನಿರ್ವಿಘ್ನವಾಗಿ ನೆರವೇರಿದ್ದು, ಸೀತಾ ಮತ್ತು ರಾಮ ಇಬ್ಬರೂ ಮದುವೆಯನ್ನು ಎಂಜಾಯ್​ ಮಾಡುತ್ತಿದ್ದಾರೆ. ಸದ್ಯ ಸಿಹಿಯನ್ನು ಬೋರ್ಡಿಂಗ್​ ಸ್ಕೂಲ್​ಗೆ ಕಳುಹಿಸಲು ಭಾರ್ಗವಿ ಚಿಕ್ಕಿ, ಗಂಡ  ಮಾಡಿರುವ ಪ್ಲ್ಯಾನ್​ ಸಕ್ಸಸ್​ ಆಗುವ ರೀತಿಯಲ್ಲಿ ಕಾಣಿಸುತ್ತಿದೆ. ಇದೇ ಸಮಯದಲ್ಲಿ ಸೀತಾರಾಮ ಟೀಂ ಪಾತ್ರಧಾರಿಗಳು ಸೋಷಿಯಲ್ ಮೀಡಿಯಾದಲ್ಲಿಯೂ  ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಸೀರಿಯಲ್​ ನಟ-ನಟಿಯರು ಹಲವಾರು ವಿಡಿಯೋ ಶೇರ್​ ಮಾಡುತ್ತಾರೆ.   ಬಿಜಿ ಷೆಡ್ಯೂಲ್​ ನಡುವೆ ಒಂದಿಷ್ಟು ರಿಲ್ಯಾಕ್ಸ್​  ಮೂಡಿಗೆ ಬರುತ್ತದೆ ಟೀಮ್​.  ಅದೇ ರೀತಿ ಈಗ ಭಾರ್ಗವಿ ಚಿಕ್ಕಿ, ಸಿಹಿ, ಅಂಜಲಿ ಸೇರಿ ಪುಷ್ಪಾ-2 ಚಿತ್ರದ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಸಿಹಿಯನ್ನು ಬೋರ್ಡಿಂಗ್​ ಸ್ಕೂಲ್​ಗೆ ಕಳಿಸುವಲ್ಲಿ ಯಶಸ್ವಿಯಾಗಿರೋದಕ್ಕೆ ಈ ಡ್ಯಾನ್ಸಾ ಎಂದು ಭಾರ್ಗವಿ ಚಿಕ್ಕಿಯ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.

ಅಂದಹಾಗೆ ಇಲ್ಲಿ ರೀಲ್ಸ್​ ಮಾಡಿರುವ ಭಾರ್ಗವಿ ಹೆಸರು ಪೂಜಾ ಲೋಕೇಶ್​. ನಟ ಲೋಕೇಶ್​ ಹಾಗೂ ಗಿರಿಜಾ ಲೋಕೇಶ್​ ಅವರ ಪುತ್ರಿ ಪೂಜಾ ಲೋಕೇಶ್ ಅವರ ಪುತ್ರಿ. ಸೀತಾ ರಾಮ’ ಧಾರಾವಾಹಿಯಲ್ಲಿ ಪೂಜಾ ಲೋಕೇಶ್ ಅವರು ಎರಡು ಶೇಡ್​ನ ಪಾತ್ರ ಮಾಡುತ್ತಿದ್ದಾರೆ. ಒಮ್ಮೆ ಕೆಟ್ಟವರಾಗಿ ಕಾಣಿಸುವ ಅವರು ಮತ್ತೊಮ್ಮೆ ಒಳ್ಳೆಯವರಂತೆ ನಟಿಸುತ್ತಾರೆ. ನೆಗೆಟಿವ್ ಪಾತ್ರಗಳಿಗೆ ಯಾವುದೇ ಸೀಮಾ ರೇಖೆ ಇಲ್ಲ. ಹೇಗೆ ಬೇಕಿದ್ದರೂ ಅದನ್ನು ಮಾಡಬಹುದು. ಕನ್ನಡದಲ್ಲಿ ನಾನು ಈ ರೀತಿ ಪಾತ್ರ ಮಾಡುತ್ತಿರುವುದು ಇದೇ ಮೊದಲು ಎಂದಿರುವ ಪೂಜಾ ಅವರು ಎರಡು ಶೇಡ್‌ನಲ್ಲಿ ಪಾತ್ರ ಮಾಡಲು  ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲೂ ಏರುಪೇರು ಆಗದಂತೆ ನೋಡಿಕೊಳ್ಳಬೇಕಿತ್ತು ಎಂದಿರುವ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದು, ಇತ್ತೀಚಿಗೆ ಅವರು ಜೀ ಕುಟುಂಬ  ಅವಾರ್ಡ್ಸ್​ನಲ್ಲಿ  ಬೆಸ್ಟ್​ ವಿಲನ್​ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಒಳಗಡೆ ಷರ್ಟ್​ ಇದ್ಯಾ ನಮ್ಗೆ ಕಾಣಿಸ್ಲೇ ಇಲ್ಲ! ಸೀತಾರಾಮ ಸೀತಾಳ ಹೀಗೆ ಕಾಲೆಳೆಯೋದಾ ಟ್ರೋಲಿಗರು?

ಸಿಹಿಯ ಹೆಸರು ರೀತು ಸಿಂಗ್​.  ರೀತು ಸಿಂಗ್​ ನೇಪಾಳ ಮೂಲದವಳು. ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್​ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ. 

ಅಂಜಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನುಷಾ. ಇವರ ಕುರಿತು  ಹೇಳುವುದಾದರೆ, ಇವರು ಸೀರಿಯಲ್​ಗೂ ಬರುವುದಕ್ಕೆ ಮುನ್ನ ಕಂಪೆನಿಯೊಂದರಲ್ಲಿ ಉದ್ಯೋಗಿ ಆಗಿದ್ದರು.  ಆರಂಭದಲ್ಲಿ ಗೀತಾ ಸೀರಿಯಲ್​ನಲ್ಲಿ ಕಾಣಿಸಿಕೊಂಡಿದ್ದರು.  ಇದೀಗ ಸೀತಾರಾಮ ಧಾರಾವಾಹಿಯಲ್ಲಿ ಅಂಜಲಿ ಪಾತ್ರದಲ್ಲಿ ಜೀವ ತುಂಬುತ್ತಿದ್ದಾರೆ. ಈ ಪಾತ್ರದ ಕುರಿತು ಹೇಳಿರುವ ನಟಿ, ಅಂಜಲಿ ಪಾತ್ರ ತುಂಬ ಟ್ರೆಡಿಷನಲ್ ಆಗಿದೆ. ನಾನು ರಿಯಲ್ ಲೈಫ್‌ನಲ್ಲಿ ಅಷ್ಟು ಟ್ರೆಡಿಷನಲ್ ಅಲ್ಲ, ಮಾಡರ್ನ್ ಕೂಡ ಅಲ್ಲ. ಅಂಜಲಿ ಪಾತ್ರಕ್ಕೂ ನನಗೂ ಶೇಕಡಾ 50ರಷ್ಟು ಹೋಲಿಕೆ ಇದೆ. ಧಾರಾವಾಹಿಯಲ್ಲಿ ಈ ಪಾತ್ರ ಮಾಡಲು ಅಷ್ಟು ಕಷ್ಟ ಆಗಲಿಲ್ಲ ಎಂದಿದ್ದಾರೆ.  ಇವರಿಗೆ ಆರಂಭದಿಂದಲೂ ನಟನೆ ಇಷ್ಟವಾಗಿದ್ದರೂ, ಮನೆಯಲ್ಲಿ ಸಿನಿಮಾಕ್ಕೆ ಹೋಗುವುದು ಇಷ್ಟವಿರಲಿಲ್ಲ. ನಂತರ ಬೆಂಗಳೂರಿಗೆ ಉದ್ಯೋಗ ಅರಸಿ ಬಂದಾಗ ಆಡಿಷನ್​ ಕೊಡಲು ಶುರು ಮಾಡಿದರು. ಇಂದು ಜನಪ್ರಿಯತೆ ಸಿಕ್ಕಿದೆ. ಸುತ್ತಮುತ್ತಲಿನ ವಾತಾವರಣವಂತೂ ತುಂಬ ಬದಲಾವಣೆ ಆಗಿದೆ. ಈ ಹಿಂದೆ ನಮ್ಮ ಸಂಬಂಧಿಕರು ನಮ್ಮನ್ನು ಮಾತಾಡಿಸುತ್ತಿರಲಿಲ್ಲ. ನಾನು ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ ಮೇಲೆ ನಮ್ಮಿಂದ ದೂರ ಹೋದವರು ಮಾತನಾಡಲು ಶುರು ಮಾಡಿದ್ದಾರೆ, ಅಪ್ಪ -ಅಮ್ಮನಿಗೆ ಗೌರವ ಕೊಡಲು ಶುರು ಮಾಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ನಟಿ ಹೇಳಿದ್ದಾರೆ. 

ನಿಮ್​ ಕಡೆ ಸೊಳ್ಳೆಗೆ ಏನಂತ ಕರೀತಾರೆ? ಅಂಜಲಿ ಪ್ರಶ್ನೆ ಕೇಳಿದ್ರೆ ಸಿಹಿ ಹೀಗೆಲ್ಲಾ ಹೇಳೋದಾ?

 

 
 
 
 
 
 
 
 
 
 
 
 
 
 
 

A post shared by Pooja Lokesh (@shilpoo)

Latest Videos
Follow Us:
Download App:
  • android
  • ios