ಅಮ್ಮನೆಂದರೆ ಸುಮ್ಮನೆಯೆ? ನಿಜ ಜೀವನದಲ್ಲೂ ಹೀಗೆ ಅಲ್ವಾ ಅಂತಿದ್ದಾರೆ ನೆಟ್ಟಿಗರು...

ಭಾಗ್ಯ ಮತ್ತು ತನ್ವಿ ಪರೀಕ್ಷೆಯಲ್ಲಿ ಕಾಪಿ ಮಾಡಿಲ್ಲ ಎನ್ನುವ ಸತ್ಯ ಬಯಲಾಗಿದೆ. ಈಗೇನಿದ್ದರೂ ಭಾಗ್ಯಳಿಗೆ ಹೇಗಾದರೂ ಮಾಡಿ ಮಗಳನ್ನು ಪರೀಕ್ಷೆ ಬರೆಸಬೇಕು ಎನ್ನುವ ಹಟ. ಮುಂದೇನು?
 

truth revealed that no copying was done in Bhagyalakshmi and Tanvi in exams suc

ನಾನು ಪರೀಕ್ಷೆ ಬರೆಯದಿದ್ದರೂ ಪರವಾಗಿಲ್ಲ, ನನ್ನ ಮಗಳು ತನ್ವಿಗೆ ಅನ್ಯಾಯ ಆಗಬಾರದು, ಯಾವುದೇ ತಪ್ಪಿಲ್ಲದಿದ್ದರೂ ಪರೀಕ್ಷೆಯಿಂದ ಡಿಬಾರ್​ ಆಗಿರೋ ಮಗಳು ತನ್ವಿ ಪರೀಕ್ಷೆ ಬರೆಯಲೇ ಬೇಕು. ಅವಳಿಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ. ಅಗತ್ಯ ಬಿದ್ದರೆ, ಬೀದಿಯಲ್ಲಿಯೇ ಪ್ರತಿಭಟನೆ ಮಾಡುತ್ತೇನೆ, ಶಾಲೆಯ ಮುಂದೆ ಹೋರಾಟ ಮಾಡುತ್ತೇನೆ, ಉಪವಾಸ ಸತ್ಯಾಗ್ರಹನೂ ಮಾಡುತ್ತೇನೆ. ಅನ್ಯಾಯವಾಗಿ ನನ್ನ ಮಗಳ ಭವಿಷ್ಯ ಹಾಳಾಗಬಾರದು... ಎಂದು ಘೋಷಿಸಿದ್ದಾಳೆ ಭಾಗ್ಯ. 

ಹೌದು. ಈಗ ಭಾಗ್ಯ ಮತ್ತು ತನ್ವಿ ತಪ್ಪು ಮಾಡಿಲ್ಲ ಎನ್ನುವುದು ಜಗಜ್ಜಾಹೀರವಾಗಿವೆ. ಕಳ್ಳಿ ಕನ್ನಿಕಾ ಮಿಸ್ಸು ಕೊನೆಗೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.  ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ಹೋಗಿದ್ದ ಭಾಗ್ಯ ಮತ್ತು ಮಗಳು ತನ್ವಿ ಇಬ್ಬರ ಡೆಸ್ಕ್​, ಡಸ್ಟ್​ಬಿನ್​ ಮೇಲೆ ಗಣಿತದ ಫಾರ್ಮುಲಾ ಬರೆಯಲಾಗಿತ್ತು. ಇದನ್ನು ನೋಡಿದ ಟೀಚರ್​ ಇಬ್ಬರನ್ನೂ ಪರೀಕ್ಷೆಯಿಂದ ಡಿಬಾರ್​ ಮಾಡಿದ್ದಾರೆ. ತಾವು ಕಾಪಿ ಬರೆದಿಲ್ಲ, ತಾವು ಹೀಗೆಲ್ಲಾ ಮಾಡುವುದಿಲ್ಲ ಎಂದು ಹೇಳಿದರೂ ಕೇಳದೇ ಇಬ್ಬರನ್ನೂ ಡಿಬಾರ್​ ಮಾಡಲಾಗಿದೆ. ಈ ಬಾರಿ ಪರೀಕ್ಷೆಯನ್ನು ಚೆನ್ನಾಗಿ ಬರೆಯಬೇಕು ಎಂದುಕೊಂಡ ತನ್ವಿ ಇದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಇನ್ನು ಭಾಗ್ಯಳ ಮಾತಂತೂ ಹೇಳುವುದೇ ಬೇಡ... ಅವಳು ಚೆನ್ನಾಗಿ ತಯಾರಿ ನಡೆಸಿದ್ದಾಳೆ. ಆದರೆ ಕಾಪಿ ಬರೆದು ಇಟ್ಟಿದ್ದರಿಂದ ಇಬ್ಬರನ್ನೂ ಡಿಬಾರ್​ ಮಾಡಲಾಗಿದ್ದು, ಪರೀಕ್ಷೆ ಬರೆಯುವುದರಿಂದ ತಡೆ ಹಿಡಿಯಲಾಗಿದೆ. 

ಕೊನೆಗೂ ಸಿರಿಯನ್ನು ಬಾಯ್ತುಂಬ ಅತ್ತಿಗೆ ಎಂದು ಕರೆದ ಅಭಿ: ಸೌದೆ ಕದಿಯುವಾಗ ಸಿಕ್ಕಿ ಬೀಳ್ತಾನಾ?

ಇವೆಲ್ಲಾ ಕನ್ನಿಕಾ ಮಿಸ್​ ಕುತಂತ್ರ ಎಂದು ತಿಳಿದಿದ್ದರೂ ಆಕೆಯಿಂದ ತಪ್ಪನ್ನು ಒಪ್ಪಿಸುವುದು ಕಷ್ಟವೇ ಆಗಿತ್ತು. ಆದರೆ ಭಾಗ್ಯ, ಪೂಜಾಳ ಸಹಾಯ ಪಡೆದು ತ್ರಿವಿಕ್ರಮನಂತೆ ಹೋರಾಡಿದ್ದಾಳೆ. ಕನ್ನಿಕಾ ಮಿಸ್​ ಪಾರ್ಟಿಯೊಂದರಲ್ಲಿ ನೆಕ್​ಲೆಸ್​ ಕದಿಯುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಕನ್ನಿಕಾಗೆ ಬ್ಲ್ಯಾಕ್​ಮೇಲ್​ ಮಾಡಿದ್ದಳು. ಒಂದು ವೇಳೆ ಕಾಪಿ ಮಾಡಿರುವ ಸತ್ಯ ಒಪ್ಪಿಕೊಳ್ಳದೇ ಹೋದರೆ, ಈ ಕಳ್ಳತನದ ವಿಡಿಯೋ ಅನ್ನು ಸೋಷಿಯಲ್​  ಮೀಡಿಯಾದಲ್ಲಿ ಅಪ್​ಲೋಡ್​  ಮಾಡುವುದಾಗಿ ಹೇಳಿದದಳು. ಪೂಜಾ. ತನಗೆ ಸೋಷಿಯಲ್​  ಮೀಡಿಯಾದಲ್ಲಿ ತುಂಬಾ ಫಾಲೋವರ್ಸ್​ ಇದ್ದು, ಕ್ಷಣ ಮಾತ್ರದಲ್ಲಿ ವಿಡಿಯೋ ವೈರಲ್​ ಆಗುತ್ತದೆ. ನಿಮ್ಮ ತಂದೆ ಕಟ್ಟಿ ಬೆಳೆಸಿದ ಶಾಲೆಗೆ ಮುಂದಿನ ವರ್ಷದಿಂದ ಮಕ್ಕಳೇ ಬರುವುದಿಲ್ಲ. ನೀನು ಕಳ್ಳಿ ಎನ್ನುವುದು ತಿಳಿಯುತ್ತದೆ ಎಂದೆಲ್ಲಾ ಹೇಳಿದಾಗ ಸತ್ಯ ಒಪ್ಪಿಕೊಳ್ಳಲು ಕನ್ನಿಕಾ ರೆಡಿಯಾಗಿ ಕೊನೆಗೂ ತಪ್ಪು ಒಪ್ಪಿಕೊಂಡಿದ್ದಾಳೆ.

 

ಈಗ ಏನಿದ್ದರೂ ಪರೀಕ್ಷೆ ಬರೆಯಬೇಕು. ಇಲ್ಲದಿದ್ದರೆ ಒಂದು ವರ್ಷ ಹಾಳಾಗುತ್ತದೆ. ತನಗೆ ಪರೀಕ್ಷೆ ಬರೆಯಲು ಅವಕಾಶ ಸಿಗದೇ ಹೋದರೂ ಪರವಾಗಿಲ್ಲ, ಮಗಳಿಗೆ ಅನ್ಯಾಯ ಆಗಬಾರದು ಎಂದು ಪಣ ತೊಟ್ಟಿದ್ದಾಳೆ ಭಾಗ್ಯ. ಇದಕ್ಕಾಗಿ ಮೀಡಿಯಾದವರನ್ನೂ ಕರೆಸಿ ಪ್ರತಿಭಟನೆ ಮಾಡಿದ್ದಾಳೆ. ಇದರಿಂದ ಕೋಪಗೊಂಡಿರುವ ತಾಂಡವ್​, ಎಲ್ಲರ ಎದುರೇ ಪತ್ನಿಯ ಮಾನ ತೆಗೆದಿದ್ದಾನೆ. ಅವನಿಗೆ ಮಗಳ ಭವಿಷ್ಯಕ್ಕಿಂತಲೂ ಪತ್ನಿಯ ಕಿರುಚಾಟದಿಂದ ತನ್ನ ಮಾನ ಹೋಗುತ್ತದೆ ಎನ್ನುವ ಅಂಜಿಕೆ. ಆದರೆ ಭಾಗ್ಯ ಹಿಂದಿನ ಭಾಗ್ಯ ಅಲ್ಲ, ಬದಲಾಗಿದ್ದಾಳೆ. ಮಗಳಿಗಾಗಿ ಯಾವ ಮಟ್ಟಕ್ಕೂ ಹೋಗಲು ಸಿದ್ಧಳಾಗಿದ್ದಾಳೆ. ಇದನ್ನು ನೋಡಿದ ವೀಕ್ಷಕರು ನಿಜ ಜೀವನದಲ್ಲಿಯೂ ಅಮ್ಮ ಹೀಗೆ ಅಲ್ವಾ? ಒಂದು ಹಂತದಲ್ಲಿ ಅಪ್ಪನೂ ಕೈಚೆಲ್ಲಬಹುದು, ಆದರೆ ಮಕ್ಕಳ ವಿಷಯ ಬಂದಾಗ ಅಮ್ಮ ಸುಮ್ಮನೇ ಕೂಡ್ರುವವರಲ್ಲ, ಅಮ್ಮನೆಂದರೆ ಸುಮ್ಮನೆಯೇ ಎನ್ನುತ್ತಿದ್ದಾರೆ. ಈಗಪರೀಕ್ಷೆಗೆ ಅವಕಾಶ ಸಿಗುತ್ತಾ ನೋಡಬೇಕಿದೆ.  

ಇಲ್ಲಿ ನಿಂತರೆ ಗೌತಮ್​, ಅಲ್ಲಿ ನಿಂತರೆ ಭೂಮಿಕಾ... ಡುಮ್ಮ ಸರ್​ ಡಬಲ್​ ಆ್ಯಕ್ಟಿಂಗ್​ಗೆ ಮನಸೋತ ವೀಕ್ಷಕರು

Latest Videos
Follow Us:
Download App:
  • android
  • ios