ಕೊನೆಗೂ ಸಿರಿಯನ್ನು ಬಾಯ್ತುಂಬ ಅತ್ತಿಗೆ ಎಂದು ಕರೆದ ಅಭಿ: ಸೌದೆ ಕದಿಯುವಾಗ ಸಿಕ್ಕಿ ಬೀಳ್ತಾನಾ?
ತುಳಸಿಯ ಸೊಸೆ, ಸಮರ್ಥ್ ಪತ್ನಿ ಸಿರಿಯನ್ನು ಕೊನೆಗೂ ಅತ್ತಿಗೆ ಎಂದು ಕರೆದಿದ್ದಾನೆ ಅಭಿ. ಸೌದೆ ಕದಿಯುವಾಗ ಸಿಕ್ಕಿಬೀಳ್ತಾನಾ?
ಹೋಳಿ ಹಬ್ಬದ ಸಂದರ್ಭದಲ್ಲಿ ಬೇರೆಯವರ ಮನೆಯಿಂದ ಸೌದೆ ಕದ್ದು ತರುವ ಕುತೂಹಲದ ಸಂಪ್ರದಾಯ ಕೆಲವು ಕಡೆಗಳಲ್ಲಿ ಇದೆ. ಮನೆಯವರಿಗೆ ಗೊತ್ತಾಗದಂತೆ ಸೌದೆಯನ್ನು ಕದ್ದು ತರಬೇಕು. ಮನೆಯವರ ಕೈಗೆ ಸಿಕ್ಕಿಬೀಳಬಾರದು. ಸೌದೆ ತರುವ ಈ ಕುತೂಹಲದ ಸಂಪ್ರದಾಯವನ್ನು ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ತೋರಿಸಲಾಗಿದೆ. ಸದಾ ಸಿಡುಕನಂತೆ ಇರುವ ಅಭಿ ಮತ್ತು ಅವಿಗೆ ಅವರ ಚಿಕ್ಕಪ್ಪ ಸೌದೆ ತರುವ ಬಗ್ಗೆ ವಿವರಿಸಿದ್ದಾರೆ. ಸೌದೆ ಎಲ್ಲಿಂದ ತರುವುದು ಎಂದು ಕೇಳಿದಾಗ ತುಳಸಿ ತನ್ನ ಮಾವ ಅಂದರೆ ದತ್ತನ ಮನೆಯಲ್ಲಿ ಸೌದೆ ಇದೆ ಎಂದಿದ್ದಾಳೆ. ಆದರೆ ದತ್ತನ ಕಣ್ಣು ತಪ್ಪಿಸಿ ಸೌದೆ ತರುವುದು ಬಲು ಕಷ್ಟವೇ ಎನ್ನುವುದು ಅವಿ-ಅಭಿ ಇಬ್ಬರಿಗೂ ಗೊತ್ತು. ಆದರೂ ಧೈರ್ಯ ಮಾಡಿ ಹೋಗಿದ್ದಾರೆ.
ದತ್ತನ ಮನೆಯನ್ನು ಇಬ್ಬರೂ ಏರುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿಯೇ ತುಳಸಿಯ ಸೊಸೆ ಸಿರಿ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ತಾತನಿಗೆ ವಿಷ್ಯ ಹೇಳದಂತೆ ಅವಿ-ಅಭಿ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. ಆಗ ಸಿರಿ ಹಾಗಿದ್ರೆ ಒಂದು ಕಂಡೀಷನ್. ನನಗೆ ಅತ್ತಿಗೆ ಎಂದು ಕರಿ ಎಂದು ಅಭಿಗೆ ಹೇಳಿದ್ದಾಳೆ. ಅಭಿ ಮೊದಲಿಗೆ ಒಪ್ಪಿಕೊಳ್ಳದಿದ್ದರೂ ಕೊನೆಗೆ ತಾತ ದತ್ತನ ಕೈಯಲ್ಲಿ ಸಿಕ್ಕಿ ಬೀಳುವ ಭಯದಲ್ಲಿ ಅತ್ತಿಗೆ ಎಂದು ಕರೆದಿದ್ದಾನೆ. ಸಿರಿಗೆ ತುಂಬಾ ಖುಷಿಯಾಗಿದೆ. ಆದರೆ ಅಷ್ಟರಲ್ಲಿಯೇ ತಾತನ ಎಂಟ್ರಿ ಆಗಿಬಿಟ್ಟಿದೆ. ಈಗ ತಾತ ಸೌದೆ ತೆಗೆದುಕೊಂಡು ಹೋಗಲು ಕೊಡ್ತಾನಾ? ಅವಿ-ಅಭಿಯ ಮೇಲಿನ ಪ್ರೀತಿಗೆ ಹಾಗೆ ಮಾಡ್ತಾನಾ, ಅಥವಾ ಇಬ್ಬರಿಗೂ ಬುದ್ಧಿ ಕಲಿಸ್ತಾನಾ ಎನ್ನುವುದು ಈಗಿರುವ ಕುತೂಹಲ.
ಅತಿ ಒಳ್ಳೆಯತನ ಒಳ್ಳೆಯದಲ್ಲ... ಕೇಡು ಬಯಸೋರಿಗೇ ಜಯ ಸಿಗೋ ಕಾಲವಿದು- ತುಳಸಿಗೆ ಬುದ್ಧಿಮಾತು
ಅಷ್ಟಕ್ಕೂ ತುಳಸಿಯನ್ನು ಕೆಳಗೆ ಮಾಡಲು ಶಾರ್ವರಿ ಮತ್ತು ದೀಪಿಕಾ ಹೊಂಚು ಹಾಕುತ್ತಲೇ ಇದ್ದಾರೆ. ಅಭಿಯ ಹುಟ್ಟುಹಬ್ಬದ ಸಂದರ್ಭದಲ್ಲಿಯೂ ತುಳಸಿಗೆ ಇನ್ಸಲ್ಟ್ ಮಾಡುವುದನ್ನು ಬಿಟ್ಟಿಲ್ಲ. ಆ ಮನೆಯ ಯಜಮಾನಿಕೆ ಪಟ್ಟದಿಂದ ಕೆಳಕ್ಕೆ ಇಳಿಯುವಂತೆ ಶಾರ್ವರಿ ತುಳಸಿಗೆ ಪರೋಕ್ಷವಾಗಿ ಹೇಳಿದ್ದಾಳೆ. ಹೋಳಿ ಮುಗಿದ ಮೇಲೆ ಇದಕ್ಕೆ ಉತ್ತರ ಕೊಡುವುದಾಗಿ ತುಳಸಿ ನಗುಮೊಗದಿಂದ ಹೇಳಿ ಹೋಗಿದ್ದಾಳೆ. ಹಾಗಿದ್ದರೆ ಅವಳ ಮುಂದಿನ ನಡೆ ಏನು ಎಂಬುದು ಮತ್ತೊಂದು ಕುತೂಹಲ.
ಅಷ್ಟಕ್ಕೂ ನೆಟ್ಟಿಗರು ಇದೊಂದು ಸೀರಿಯಲ್ ಎನ್ನುವುದನ್ನು ಮರೆತು, ತುಳಸಿಗೆ ಅತಿ ಒಳ್ಳೆಯತನ ಮಾಡಬೇಡಿ ಎಂದು ಬುದ್ಧಿಮಾತು ಹೇಳುತ್ತಲೇ ಬಂದಿದ್ದಾರೆ. ಅತಿ ಒಳ್ಳೆಯವಳಾಗಿರುವ ತುಳಸಿಗೆ ಬುದ್ಧಿಮಾತು ಹೇಳುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಮನೆಯಲ್ಲಿ ಮಾಧವ್ ಅಮ್ಮನ ಪೂಜೆ ಮಾಡಬೇಕು ಎಂದುಕೊಂಡಿದ್ದರು. ಅವರು ಧರಿಸುತ್ತಿದ್ದ ಬಂಗಾರದ ಸರ ಪೂಜೆಗೆ ಇಡಬೇಕೆಂದು ಆಗಿತ್ತು. ಆದರೆ ಅದನ್ನು ದೀಪಿಕಾ ಕದ್ದಿದ್ದಳು. ಹೀಗೆ ಕದ್ದಿರೋ ಸರವನ್ನು ಆಕೆ ಶಾರ್ವರಿ ಕಪಾಟಿನಲ್ಲಿ ಇರಿಸಿದ್ದಳು. ಸರ ಕದಿಯುವ ಪ್ಲ್ಯಾನ್ ಶಾರ್ವರಿ ಮತ್ತು ದೀಪಿಕಾ ಇಬ್ಬರದ್ದೂ ಆಗಿತ್ತು. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಇಡೀ ಮನೆಯ ಕೀಲಿ ತುಳಸಿಯ ಕೈಯಲ್ಲಿ ಇದೆ. ತುಳಸಿ ಮನೆಯ ಯಜಮಾನಿಯನ್ನಾಗಿ ಮಾಡಿರುವುದನ್ನು ಈ ಅತ್ತೆ-ಸೊಸೆ ಸಹಿಸುತ್ತಿಲ್ಲ. ಇದೇ ಕಾರಣಕ್ಕೆ ತುಳಸಿಯ ಮೇಲೆ ಕಿಡಿ ಕಾರುತ್ತಿದ್ದಾರೆ. ಆಕೆ ಮನೆಯ ಜವಾಬ್ದಾರಿ ಹೊರುವಷ್ಟು ಶಕ್ಯಳಲ್ಲ ಎನ್ನುವುದನ್ನು ಸಾಬೀತು ಮಾಡಲು ಪ್ಲ್ಯಾನ್ ಹೆಣೆಯುತ್ತಲೇ ಇದ್ದಾರೆ. ಆದರೆ ಪ್ರತಿಬಾರಿಯೂ ಶಾರ್ವರಿ ಮತ್ತು ದೀಪಿಕಾರನ್ನು ತುಳಳಿ ಬಚಾವ್ ಮಾಡುವಂತೆ ಸರ ಕದ್ದಾಗಲೂ ಬಚಾವು ಮಾಡಿದ್ದಾಳೆ.
ಇಲ್ಲಿ ನಿಂತರೆ ಗೌತಮ್, ಅಲ್ಲಿ ನಿಂತರೆ ಭೂಮಿಕಾ... ಡುಮ್ಮ ಸರ್ ಡಬಲ್ ಆ್ಯಕ್ಟಿಂಗ್ಗೆ ಮನಸೋತ ವೀಕ್ಷಕರು