'ಮುಕ್ತ ಮುಕ್ತ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಖ್ಯಾತರಾದ ನಟ ಆನಂದ್‌ ಮೂತ್ರನಾಳದ ಸೋಂಕಿನಿಂದ ಕೊನೆಯುಸಿರೆಳೆದರು. 

ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಇನ್ನಿಲ್ಲ

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆನಂದ್‌ ಅವರು ಬೆಂಗಳೂರಿನ ಚಾಮರಾಜಪೇಟೆಯು ರಂಗದೊರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ವಿಫಲವಾದ ಕಾರಣ ಭಾನುವಾರ ಕೊನೆಯುಸಿರೆಳೆದರು. ಆನಂದ್‌ ಅವರ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಚಾಮರಾಜಪೇಟೆ ಚಿತಾಗಾರದಲ್ಲಿ ನೆರವೇರಿಸಿದರು.

ಆನಂದ್‌ ಅವರ ಪುತ್ರ ವಿವೇಕ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ರಮಾದೇವಿ ಕೆಎಂಫ್‌ ಉದ್ಯೋಗಿಯಾಗಿದ್ದರು.