ಡಬ್‌ ಸ್ಮಾಶ್‌ನಲ್ಲಿ ಸ್ಟಾರ್ ನಟನ ಧ್ವನಿಗೆ ಅಭಿನಯಿಸಿ, ಹೆಜ್ಜೆ ಹಾಕುತ್ತಾ ಜನರನ್ನು ಮನೋರಂಜಿಸುತ್ತಿದ್ದ ತುಳಸಿ ಪ್ರಸಾದ್‌, ಹಸ್ತಮೈಥುನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ನಂತರ ಕಣ್ಮರೆಯಾಗಿದ್ದರು. ಯಾರಿಗೂ ಕಾಣಿಸಿಕೊಳ್ಳದಂತೆ ಮಾಯಾವಾಗಿದ್ದ ತುಳಸಿ ಈಗ ಒಳ್ಳೆ ಕೆಲಸದ ಮೂಲಕ ಮತ್ತೊಮ್ಮೆ ಟಿಕ್‌ಟಾಕ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ.

'ಕೊರೋನಾ ವೈರಸ್ ಹರಡಬಾರದೆಂದರೆ ಇಂಡಿಯಾ, ಚೀನಾ ಇಟಲಿ ತರ ಕೊರೋನಾ ವೈರಸ್ ಫುಲ್‌ ಸ್ಪ್ರೇಡ್‌ ಆಗಿ ಜನ ಸಾಯ ಬಾರದು ಅಂದ್ರೆ, ಪ್ಲೀಸ್‌ ಫ್ರೆಂಡ್ಸ್ ದಯವಿಟ್ಟು ನೀವು ನಿಮ್ಮ ಮನೆಯಲ್ಲಿ ಇರಿ. ಸ್ಟೇ ಆ್ಯಟ್‌ ಹೋಂ. ಥ್ಯಾಂಕ್ಸ್...' ಎಂದು ಟಿಕ್‌ಟಾಕ್‌ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶೈಲಿ ವಿಚಿತ್ರವಾಗಿದ್ದು, ಸಂದೇಶ ಮಾತ್ರ ಚೆನ್ನಾಗಿರುವುದು ಸುಳ್ಳಲ್ಲ. 

ಸೋಶಿಯಲ್ ಮೀಡಿಯಾದಲ್ಲಿ ತುಳಸಿ ಪ್ರಸಾದನ ಹಸ್ತಮೈಥುನದ ವಿಕೃತಿ

ಕೆಲವು ವರ್ಷಗಳ ಹಿಂದೆ ತುಳಸಿ ಪ್ರಸಾದ್‌ ತಿಳಿಯದೆಯೋ, ತಿಳಿದೋ ಹಸ್ತಮೈಥುನ ಮಾಡುತ್ತಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ಯಾವುದೋ ಹುಡುಗಿಗೆ ಕಳುಹಿಸಲು ಹೋಗಿ, ತಿಳಿಯದೇ ಫೇಸ್‌ಬುಕ್ ವಾಲ್‌ನಲ್ಲಿ ಶೇರ್ ಮಾಡಿಕೊಂಡಿರುವುದಾಗಿ ಸ್ವತಃ ತುಳಸಿ ಸಮಜಾಯಿಷಿ ನೀಡಿದ್ದರು. 

ಎಲ್ಲರೂ ಲಾಕ್‌ಡೌನ್ ಆದೇಶ ಪಾಲಿಸಿ, ಮನೆಯಲ್ಲಿಯೇ ಇರುವುದು ಅನಿವಾರ್ಯವಾಗಿದೆ. ಯಾರೊಬ್ಬರೂ ಇಗ್ನೋರ್ ಮಾಡಿದರೂ ತಮ್ಮ ಬುಡಕ್ಕೆ ಸಮಸ್ಯೆ ಬಂದು ಮುತ್ತಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಆದ್ದರಿಂದ ಈ ಸಂದರ್ಭವನ್ನು ಹೇಗಾದರೂ ಮಾಡಿ ತಮ್ಮನ್ನು ತಾವು ಮನೆಯಲ್ಲಿ ಕಟ್ಟಿ ಹಾಕಿಕೊಳ್ಳಲೇ ಬೇಕು. 

"