ಬಿಗ್ ಬಾಸ್‌ನಲ್ಲಿ ಸಮಂತಾ; ರಮ್ಯಾಗಿಂದ ಬೆಟರ್ ಎಂದ ನೆಟ್ಟಿಗರು?
ತೆಲುಗು ವಾಹಿನಿಯ ಖ್ಯಾತ ರಿಯಾಲಿಟಿ ಶೋನಲ್ಲಿ ಸಮಂತಾ ನಿರೂಪಣೆ. ಆದರೆ ನಟಿ ರಮ್ಯಾಕೃಷ್ಣ ಕಾಲು ಎಳೆದಿದ್ದು ಸರೀನಾ?

ಕೊರೋನಾ ಭಯದ ನಡುವೆ ಶುರುವಾದ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 4'. ನಟ ನಾಗಾರ್ಜುನ ನಿರೂಪಣೆ ಮಾಡುತ್ತಿದ್ದ ರಿಯಾಲಿಟಿ ಶೋನಲ್ಲಿ ಸಮಂತಾಳನ್ನು ನೋಡಿ ವೀಕ್ಷಕರು ಮೆಚ್ಚಿ ಕೊಂಡಿದ್ದಾರೆ. ಕೊಂಚ ಚೇಂಜ್ ನಮಗೂ ಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಸಮಂತಾ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಸ್ಪರ್ಧಿಯಾಗಿಯೇ ಅಥವಾ ನಿರೂಪಕಿಯಾಗಿಯೇ ಎಂದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಅದರಲ್ಲೂ ಸಮಂತಾ ಇಂದಿನ ಹೋಸ್ಟ್ ಎಂದು ಮನೆಯಲ್ಲಿದ್ದ ಸ್ಪರ್ಧಿಗಳು ತಿಳಿದು ಶಾಕ್ ಆಗಿದ್ದಾರೆ. ಹಾಗೂ ಆಕೆಯ ಬ್ಯುಟಿಗೆ ಫಿದಾ ಆಗಿದ್ದಾರೆ.
ಸಮಂತಾ ಸೀರೆ:
ಸಮಂತಾಳನ್ನು ಪಿಂಕ್ ಬಣ್ಣದ ಬನಾರಸಿ ರೇಶ್ಮೆ ಸೀರೆಯಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮಾವ ನಾಗಾರ್ಜುನ 'ವೈಲ್ಡ್ ಡಾಗ್' ಸಿನಿಮಾ ಚಿತ್ರೀಕರಣಕ್ಕೆಂದು ಹಿಮಾಲಯಕ್ಕೆ ಹೋಗಿದ್ದಾರೆ. ಹಾಗಾಗಿ ಸಮಂತಾ ದಸರಾ ವಾರದ ಎಪಿಸೋಡ್ ನಿರೂಪಣೆ ಮಾಡಿದ್ದಾರೆ. ಆದರೆ, ಮುಂದಿನ ವಾರವೂ ಸಮಂತಾ ಅವರೇ ಬರಲಿದ್ದಾರೋ ಎಂಬುವುದು ಮಾತ್ರ ಇನ್ನೂ ಸಸ್ಪೆನ್ಸ್‌ನಲ್ಲಿದೆ.
ರಮ್ಯಾಕೃಷ್ಣ ಜೊತೆ ಪೋಲ್:
ಖಾಸಗಿ ಮಾಧ್ಯವೊಂದು ನಡೆಸಿದ ಪೋಲ್‌ನಲ್ಲಿ ನೆಟ್ಟಿಗರು ಸಮಂತಾ ಪರ ಬ್ಯಾಟಿಂಗ್ ಮಾಡಿದ್ದಾರೆ. ಕೆಲವು ವಾರಗಳ ಹಿಂದೆ ನಟಿ ರಮ್ಯಾಕೃಷ್ಣ ಕೂಡ ಬಿಗ್ ಬಾಸ್ ವೀಕೆಂಡ್ ಶೋ ನಿರೂಪಣೆ ಮಾಡಿದ್ದರು. ಈ ಕಾರಣಕ್ಕೆ ನಿಮಗೆ ಸಮಂತಾ ನಿರೂಪಣೆ ಇಷ್ಟವಾಯ್ತಾ. ರಮ್ಯಾ ಬೆಟರ್ ಆರ್ ಸಮಂತಾ ಎಂದು ಕೇಳಿರುವುದಕ್ಕೆ ಶೇ. 79 ಸಮಂತಾ ಪರ ನಿಂತಿದ್ದಾರೆ. ಆದರೆ ಇನ್ನೂ ಕೆಲವರು ಇಬ್ಬರು ಬೇರೆ ವ್ಯಕ್ತಿತ್ವದವರು ಹೋಲಿಸಬೇಡಿ ಎಂದೂ ಹೇಳಿದ್ದಾರೆ.