ಅನಸೂಯಾ ಭಾರದ್ವಾಜ್ ಸಲಿಂಗಕಾಮಿ?; ಪ್ರಶ್ನೆ ಮಾಡಿದವನಿಗೆ ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡ ನಿರೂಪಕಿ

ಅಸಹ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಅನಸೂಯ ಭಾರದ್ವಾಜ್‌ಗೆ ಪ್ರಶ್ನೆ ಮಾಡಿದ ನೆಟ್ಟಿಗ. ತಾಳ್ಮೆಯಿಂದ ಉತ್ತರ ಕೊಟ್ಟರೂ ಸ್ಲಿಪ್ಪರ್ ಶಾಟ್‌ ಎಂದು ಅಭಿಮಾನಿಗಳು.. 

Telugu anchor Anasuya Bharadwaj reply to netizen about lesbian encounter vcs

ತೆಲುಗು ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ನಟಿ ಅನಸೂಯಾ ಭಾರದ್ವಾಜ್ ಸಾಮಾಜಿಕ ಜಾಲತಾಣದಲ್ಲಿ 1.2 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ. ಹೀಗಾಗಿ ಪದೇ ಪದೇ ಟ್ರೋಲ್ ಆಗುವುದು, ನೆಟ್ಟಿಗರ ಜೊತೆ ಜಗಳ ಮಾಡಿಕೊಳ್ಳುವುದು ತುಂಬಾನೇ ಕಾಮನ್ ಆಗಿ ಬಿಟ್ಟಿದೆ. ತುಂಬಾ ದಿನಗಳಾಯ್ತು ನಾವು ಮಾತನಾಡಿ ಚರ್ಚೆ ಮಾಡೋಣಾ? ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು. ಫ್ಯಾಮಿಲಿ ಸಿನಿಮಾಗಳ ಬಗ್ಗೆ ಉತ್ತರಿಸಿದ ನಟಿ ಸಲಿಂಗಕಾಮಿ ಎಂದು ಟಾರ್ಗೆಟ್‌ ಮಾಡಿದವನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಹೌದು! ನೆಟ್ಟಿಗನೊಬ್ಬ 'ನೀನು ಲಿಬರಲ್ ಮತ್ತು ಮೆಚ್ಯೂರ್‌ ಮಹಿಳೆ ಆಗಿದ್ದರೆ ಇದಕ್ಕೆ ಉತ್ತರ ಕೊಡಬೇಕು. ನೀನು ಲೆಸ್ಬಿಯನ್ ಎನ್ಕೌಂಟರ್ ಮಾಡಿರುವೆ' ಎಂದು ಪ್ರಶ್ನೆ ಮಾಡುತ್ತಾರೆ. ಒಮ್ಮೆ ಇದನ್ನು ಓದಿದ್ದರೆ ಪ್ರಶ್ನೆ ರೀತಿ ಇರಲಿಲ್ಲ ಸ್ಟೇಟ್ಮೆಂಟ್‌ ರೀತಿ ಇದೆ ಎನ್ನಬಹುದು. ಅಲ್ಲಿಗೆ ಸುಮ್ಮನಾಗದ ಅನಸೂಯ 'ನನಗೆ ಸಲಿಂಗಕಾಮಿ ಸ್ನೇಹಿತರು ಮತ್ತು ಕುಟುಂಬಸ್ಥರು ಇದ್ದಾರೆ ಆದರೆ ಜೀವನದಲ್ಲಿ ನಾನು ಎಂದೂ ಈ ರೀತಿ ಪರ್ಸನಲ್‌ ಎನ್ಕೌಂಟರ್‌ಗೆ ಗುರಿಯಾಗಿರಲಿಲ್ಲ ಆದರೆ ಆಲ್‌ಲೈನ್‌ನಲ್ಲಿ ಬೇಕೆಂದು ಪ್ರಶ್ನೆ ಮಾಡುವ ಜನರಿಗೆ ನಾನು ಯಸ್ ಎಂದು ಉತ್ತರ ಕೊಡುವೆ' ಎಂದು ಅನಸೂಯ ಬರೆದುಕೊಂಡಿದ್ದಾರೆ. ನಗು ನಗುತ್ತಲೇ ಉತ್ತರ ಕೊಟ್ಟಿರುವ ಅನಸೂಯ ಪರ ಅಭಿಮಾನಿಗಳು ನಿಂತಿದ್ದಾರೆ.

Kantara; ರಿಷಬ್ ಶೆಟ್ಟಿ ಸಿನಿಮಾ ನೋಡಿ ತೆಲುಗು ನಿರೂಪಕಿ ಅನಸೂಯ ಹೇಳಿದ್ದೇನು?

ಅನಸೂಯ ಭಾರದ್ವಾಜ್ ಎಂಬಿಎ ಪದವಿಧರೆ ಆಗಿದ್ದು 2003ರಲ್ಲಿ ನಾಗ ಚಿತ್ರದ ಮೂಲಕ  ಕಲರ್‌ಫುಲ್‌ ಜರ್ನಿ ಆರಂಭಿಸಿದರು.2013ರಲ್ಲಿ ಜಬರ್ದಸ್ತ್ ಎನ್ನುವ ಕಾರ್ಯಕ್ರಮದಿಂದ ನಿರೂಪಕಿಯಾಗಿ ಗುರುತಿಸಿಕೊಂಡರು. 2018ರಲ್ಲಿ ರಾಮ್ ಚರಣ್‌ ಅಭಿನಯಿಸಿರುವ ರಂಗಸ್ಥಲಂ ಚಿತ್ರದಲ್ಲಿ ಅನಸೂಯ ಅಭಿನಯಿಸಿ ಫಿಲ್ಮ್ ಫೇರ್‌ ಬೆಸ್ಟ್‌ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡರು. ಅನಸೂಯ ಒಟ್ಟಿ 24 ಟಿವಿ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ ಎನ್ನಲಾಗಿದೆ. ಎಂಬಿಎ ಪದವಿ ಪಡೆದಿರುವ ಕಾರಣ ಅನಸೂಯ ಕೆಲವು ವರ್ಷಗಳ ಕಾಲ ಐಟಿ ಕಂಪನಿಯಲ್ಲಿ ಎಚ್‌ಆರ್‌ ಆಗಿಯೂ ಕೆಲಸ ಮಾಡಿದ್ದಾರೆ. ಸೈಮಾ ಬೆಸ್ಟ್‌ ಸಪೊರ್ಟಿಂಗ್‌ ನಟಿ ಅವಾರ್ಡ್‌ಗಳನ್ನು ಪಡೆದಿರುವ ಅನಸೂಯ ಸುಶಾಂಕ್ ಭಾರದ್ವಾಜ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು, ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ ಎನ್ನಲಾಗಿದೆ. 

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ ಭಾಗ 1 ಚಿತ್ರದಲ್ಲಿ ಅನಸೂಯಯ ಅಭಿನಯಿಸಿದ್ದಾರೆ. ದಾಕ್ಷಾಯಿಣಿ ಲುಕ್‌ನಲ್ಲಿ ಅನಸೂಯ ಪರ್ಫೆಕ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಭಾಗ 2ರಲ್ಲೂ ದಾಕ್ಷಾಯಿಣಿಯನ್ನು ತೋರಿಸಬೇಕು ಎನ್ನುವ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. 

Anasuya Bharadwaj: ಆಂಟಿ ಎಂದವನಿಗೆ ಸರಿಯಾಗಿ ಜಾಡಿಸಿದ ನಿರೂಪಕಿ!

ಸದ್ಯ ವಿನೂ ವೆಂಕಟೇಶ್ ನಿರ್ದೇಶನ ಮಾಡಿರುವ WOLF ಸಿನಿಮಾ ಚಿತ್ರೀಕರಣ ಕೇವಲ 60 ದಿನಗಳಲ್ಲಿ ಮುಗಿಸಿದ್ದಾರೆ. ಈ ಚಿತ್ರದಲ್ಲಿ ಅನಸೂಯ ಭಾರದ್ವಾಜ್‌ ನಾಯಕಿ ಆಗಿದ್ದು ಮಾರ್ಚ್‌ 22ರಂದು ಸಿನಿಮಾ ರಿಲೀಸ್ ಅಗಲಿದೆ. ಚಿತ್ರದ ಫಸ್ಟ್‌ ಲುಕ್‌ನಲ್ಲಿ ರಿಲೀಸ್ ಮಾಡಲಾಗಿದೆ. ಇದೊಂದು ಸೈಂಟಿಫಿಕ್‌ ಹಾರರ್ ಸಿನಿಮಾ ಎನ್ನಬಹುದು. 
 

Latest Videos
Follow Us:
Download App:
  • android
  • ios