'ರವೋಯಿ ಚಂದಮ್ಮ' ಧಾರಾವಾಹಿ ಮೂಲಕ ತೆಲುಗು ಕಿರುತೆರೆ ಲೋಕಕ್ಕೆ ಕಾಲಿಟ್ಟ ತಾರಕ್.
'ರಾಜ ರಾಣಿ' ಧಾರಾವಾಹಿ ನಟ ತಾರಕ್ ಪೊನ್ನಪ್ಪ ಇದೀಗ ತೆಲುಗು ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. 'ರವೋಯಿ ಚಂದಮ್ಮ'ದಲ್ಲಿ ತಾರಕ್ ಜೊತೆಗೆ ವಿನಯ್ ಗೌಡ ಮತ್ತು ಪ್ರೀತಿ ಶ್ರೀನಿವಾಸ್ ಅಭಿನಯಿಸುತ್ತಿದ್ದಾರೆ.
'ಧಾರಾವಾಹಿಯಲ್ಲಿ ವೀರಸ್ವಾಮಿ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿರುವೆ. ನಾನು ಒಂದು ಹುಡುಗಿಯನ್ನು ಇಷ್ಟ ಪಡುವೆ, ಆದರೆ ನನ್ನ ರಗಡ್ ಗುಣದಿಂದ ಆಕೆ ನನ್ನನು ಇಷ್ಟ ಪಡುವುದಿಲ್ಲ ಆದರೆ ನಾನು ಆಕೆಯೊಂದಿಗೆ ಮದುವೆ ಮಾಡಿಕೊಳ್ಳುವೆ. ನನ್ನಿಂದ ಮುಕ್ತಿ ಪಡೆಯಲು ಆಕೆ ಊರು ಬಿಟ್ಟು ಹೈದರಾಬಾದ್‌ಗೆ ಹೋಗುತ್ತಾಳೆ. ನಾನೂ ಹೈದಾರಾಬಾದ್‌ಗೆ ಹೋಗುವೆ. ಅಲ್ಲಿ ಸಿಗುವ ಟ್ವಿಸ್ಟ್ ನಿಜವಾದ ಕಥೆ,' ಎಂದು ತಾರಕ್ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಪ್ಯಾಮಿಲಿ ಜೊತೆ ನಟ ವಿನಯ್ ಗೌಡ ಜಾಲಿ ಟೈಂ!
'ಆರಂಭದಲ್ಲಿ ತೆಲುಗು ಮಾತನಾಡಲು ಕಷ್ಟ ಪಡುತ್ತಿದ್ದೆ. ಆದರೆ 15 ದಿನಗಳ ಚಿತ್ರೀಕರಣ ಗಮನಿಸಿದರೆ, ಈಗ ಮಾತನಾಡುವ ಶೈಲಿ ಬದಲಾಗಿದೆ,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ತಾರಕ್ ಮಾತನಾಡಿದ್ದಾರೆ. 'ಯುವರತ್ನ' ಚಿತ್ರದಲ್ಲಿ ಅಭಿನಯಿಸಿರುವ ತಾರಕ್ ಮುಂದಿನ ಚಿತ್ರ 'ಅಮೃತಾ ಅಪಾರ್ಟ್ಮೆಂಟ್' ರಿಲೀಸ್‌ಗೆ ಸಿದ್ಧವಾಗಿದೆ. ಲಾಕ್‌ಡೌನ್ ಸಡಿಲಿಕೆ ನಂತರ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ತಿಳಿಸುತ್ತಾರಂತೆ.
