Asianet Suvarna News Asianet Suvarna News

ಭಾಗ್ಯಳ ರಿಸಲ್ಟ್​ ನೋಡಿ ತಾಂಡವ್ ಶಾಕ್​- ಖುಷಿಯಲ್ಲಿ ಮೊದಲ ದಿನವೇ ಕೆಲಸಕ್ಕೆ ಅತ್ತೆ-ಸೊಸೆ ಲೇಟ್​​

ಎಸ್​ಎಸ್ಎಲ್​ಸಿ ಪರೀಕ್ಷೆಯಲ್ಲಿ ಭಾಗ್ಯಳ ರಿಸಲ್ಟ್​ ನೋಡಿ ತಾಂಡವ್​ ಶಾಕ್​ ಆಗಿದ್ದಾನೆ. ರಿಸಲ್ಟ್​ ಖುಷಿಯಲ್ಲಿ ಅತ್ತೆ-ಸೊಸೆ ಕೆಲಸಕ್ಕೆ ಲೇಟಾಗಿ ಹೋಗುತ್ತಿದ್ದು ಮುಂದೇನಾಗುತ್ತದೆ?
 

Tandav is shocked to see Bhagyas result in SSLC exam in Bhagyalakshmi serial suc
Author
First Published May 19, 2024, 5:18 PM IST

ಭಾಗ್ಯಳ ಎಸ್​ಎಸ್​​ಎಲ್​ಸಿ ರಿಸಲ್ಟ್​ ಬಂದಿದೆ. ಇವಳು ಫೇಸ್​ ಆಗ್ತಾಳೆ ಎಂದುಕೊಂಡಿದ್ದ ತಾಂಡವ್​ಗೆ ಶಾಕ್​ ಆಗಿದೆ. ರಿಸಲ್ಟ್​ ನೋಡಲು ಶಾಲೆಗೆ ಹೊರಟಿದ್ದ ಭಾಗ್ಯಳನ್ನು ಅಣಕಿಸುವ ತಾಂಡವ್​, ಆನ್​ಲೈನ್​ನಲ್ಲಿಯೇ ರಿಸಲ್ಟ್​ ನೋಡಬಹುದು ಎಂದು ಹೇಳಿ, ಭಾಗ್ಯಳ ಹಾಲ್​ ಟಿಕೆಟ್​ ನಂಬರ್​ ಪಡೆಯುತ್ತಾನೆ. ಅದಕ್ಕೂ ಮೊದಲು ಆತ ನಿನ್ನ ರಿಸಲ್ಟ್​ ನನಗೆ ಗೊತ್ತಿದೆ. ಎಲ್ಲ ವಿಷಯಗಳಲ್ಲಿಯೂ ಫೇಲ್​ ಆಗಿರ್ತಿಯಾ ಎಂದು ಕೊಂಕು ಮಾತನಾಡುತ್ತಾನೆ. ಆದರೆ ರಿಸಲ್ಟ್​ ನೋಡಿ ಅವನಿಗೆ ಶಾಕ್​ ಆಗುತ್ತದೆ, ಎಲ್ಲ ವಿಷಯಗಳಲ್ಲಿಯೂ ಭಾಗ್ಯ ಉತ್ತಮ ಅಂಕ ಪಡೆದುಕೊಂಡಿರುತ್ತಾಳೆ. ತಾಂಡವ್​ ಬಿಟ್ಟು ಎಲ್ಲರಿಗೂ ಖುಷಿಯೋ ಖುಷಿ.

ಅದೇ ಇನ್ನೊಂದೆಡೆ, ಭಾಗ್ಯ ಈ ಖುಷಿಯಲ್ಲಿ ಸ್ವೀಟ್​ ತಂದು ಎಲ್ಲರಿಗೂ ಹಂಚುತ್ತಾಳೆ.  ತಾಂಡವ್​  ಮುಖ ಮಾತ್ರ ಇಂಗು ತಿಂದ ಮಂಗನಂತಾಗಿರುತ್ತದೆ. ಅದು ಅತ್ತೆ- ಸೊಸೆ ಇಬ್ಬರಿಗೂ ಮೊದಲ ದಿನದ ಕೆಲಸವಾಗಿರುತ್ತದೆ. ಆದರೆ ರಿಸಲ್ಟ್​ ಖುಷಿಯಲ್ಲಿ ಇಬ್ಬರೂ ಮೊದಲ ದಿನವೇ ಲೇಟ್​ ಆಗಿ ಹೋಗುತ್ತಾರೆ. ಕುಸುಮಾ ಹೇಳಿ ಕೇಳಿ ಜಬರ್ದಸ್ತ್​ ಹೆಂಗಸು. ಹೋಟೆಲ್​ ಓನರ್​ ಅನ್ನೇ ದಬಾಯಿಸಿ ಲೇಟ್​ ಆಗಿರುವುದಕ್ಕೆ ಸಮಜಾಯಿಷಿ ನೀಡಿ ಸೈ ಎನಿಸಿಕೊಳ್ಳುತ್ತಾಳೆ. ಆದರೆ ಭಾಗ್ಯ ಹಾಗಲ್ಲವಲ್ಲ. ಅವಳು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾಳೋ ನೋಡಬೇಕಿದೆ. 

ಪ್ರಿಯಾ- ಅಶೋಕ್​ ಫಸ್ಟ್​ನೈಟ್​ ಶೂಟಿಂಗ್​ ಹೇಗಿತ್ತು? ವಿಡಿಯೋ ಮೂಲಕ ಫುಲ್​ ಡಿಟೇಲ್ಸ್​ ನೀಡಿದ ನಟಿ

 

ಅಷ್ಟಕ್ಕೂ ಅತ್ತೆ- ಸೊಸೆ ಇಬ್ಬರೂ ಅಕ್ಕ ಪಕ್ಕದ ಹೋಟೆಲ್​ನಲ್ಲಿಯೇ ಕೆಲಸಕ್ಕೆ ಸೇರಿರುತ್ತಾರೆ. ಆದರೆ ಅದು ಗೊತ್ತಿರುವುದಿಲ್ಲ. ಮನೆಯಲ್ಲಿ ಸುಳ್ಳು ಹೇಳಿ ಹೊರಟಿರುತ್ತಾರೆ. ಕೆಲಸಕ್ಕೆ ಹೊರಡುವ ಮುನ್ನ ಭಾಗ್ಯ ಇಬ್ಬರ ಆಶೀರ್ವಾದ ಪಡೆಯುತ್ತಾಳೆ.  ಆದರೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳುತ್ತಾಳೆ. ಇಬ್ಬರೂ ಬೆಳಿಗ್ಗೆ ಹೋಗಿ ಸಂಜೆ ಮನೆಗೆ ಬರುವುದನ್ನು ನೋಡುವ ತಾಂಡವ್​ ಮತ್ತು ಮನೆಯವರ ಎದುರು ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ ಈ ಅತ್ತೆ- ಸೊಸೆ ಎನ್ನುವುದು ಮುಂದಿರುವ ಕುತೂಹಲ.

ಸದ್ಯ ಅಂತೂ ಭಾಗ್ಯ ಪರೀಕ್ಷೆ ಪಾಸಾಗಿರುವ ಖುಷಿಯಲ್ಲಿ ಭಾಗ್ಯಲಕ್ಷ್ಮಿ ಫ್ಯಾನ್ಸ್​ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಅದೇ ಇನ್ನೊಂದೆಡೆ ತನ್ವಿ ಕ್ಲಾಸ್​ಗೆ ಫಸ್ಟ್​ ಬಂದಿರುತ್ತಾಳೆ. ಇವರ ರಿಸಲ್ಟ್​ ಬಗ್ಗೆ ಭಾಗ್ಯ ಶ್ರೇಷ್ಠಾ ಮನೆಯಲ್ಲಿರುವ ಪೂಜಾಳಿಗೆ ಕರೆ ಮಾಡಿ ಹೇಳುತ್ತಾಳೆ. ತನ್ನ ಭಾವನ ಸ್ಥಿತಿ ಹೇಗಾಗಿರಬಹುದು ಎಂದು ಅರಿತುಕೊಂಡ ಪೂಜಾ ಅವನಿಗೆ ವಿಡಿಯೋ ಕಾಲ್​  ಮಾಡುತ್ತಾಳೆ. ಇಷ್ಟವಿಲ್ಲದಿದ್ದರೂ ಆತ ಫೋನ್​ ರಿಸೀವ್​ ಮಾಡಿದಾಗ ಪೂಜಾ ಟಾಂಟ್​ ಕೊಡುತ್ತಾಳೆ. ಇದರಿಂದ ತಾಂಡವ್​ ಕರೆ ಕಟ್​ ಮಾಡುತ್ತಾನೆ. ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ. 

ವಿರಾಟ್-ಅನುಷ್ಕಾ ತಮ್​​ ಫೋನ್​ನಲ್ಲಿ ಪರಸ್ಪರ ಹೆಸ್ರನ್ನು ಹೀಗೆ ಸೇವ್​ ಮಾಡಿಕೊಂಡಿದ್ದಾರಂತೆ!

Latest Videos
Follow Us:
Download App:
  • android
  • ios