ಯಾವ ಮಾತಿಗೂ ತಾಂಡವ್​ ಜಗ್ಗದಿದ್ದಾಗ ಅಮ್ಮ ಕುಸುಮಾ ಕೆಲವೊಂದು ದಾಖಲೆಪತ್ರಗಳನ್ನು ತಂದು ತಾಂಡವ್​ನನ್ನು ಬೆಚ್ಚಿ ಬೀಳಿಸಿದ್ದಾಳೆ. ಏನದು?  

ಕುಸುಮಾ ಈಗ ದೃಢ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಯಾವುದೇ ಕಾರಣಕ್ಕೂ ಭಾಗ್ಯಳನ್ನು ಹೊರಗೆ ಹಾಕುವ ಪಣ ತೊಟ್ಟ ಮಗ ತಾಂಡವ್​ಗೆ ಬುದ್ಧಿ ಕಲಿಸಲು ಮನೆಯ ಕಾಗದ ಪತ್ರವನ್ನು ತಂದಿದ್ದಾಳೆ. ಪತಿಯ ಅನುಮತಿ ಪಡೆದುಕೊಂಡಿರುವ ಕುಸುಮಾ, ತಾಂಡವ್​ಗೆ ಬುದ್ಧಿ ಕಲಿಸಲು, ತಮ್ಮ ಸೊಸೆ ಭಾಗ್ಯಳನ್ನು ಉಳಿಸಿಕೊಳ್ಳಲು ಇದಲ್ಲದೇ ಬೇರೆ ಮಾರ್ಗವಿಲ್ಲ ಎಂದಿದ್ದಾಳೆ. ಕುಸುಮಾ ಹೇಳಿದ ಮೇಲೆ ಆಕೆ ಎಲ್ಲ ರೀತಿಯ ಯೋಚನೆ ಮಾಡಿಯೇ ಇರುತ್ತಾಳೆ ಎಂದಿರುವ ಪತಿ ಕೂಡ ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾನೆ. ಪ್ರೀತಿಗೆ ಬಗ್ಗದವ, ಕಾನೂನಿಗೆ ಬಗ್ಗಲೇಬೇಕಲ್ಲ ಎಂದಿದ್ದಾಳೆ ಕುಸುಮಾ. ಈ ಮಾತಿನ ಅರ್ಥವೇನು? ಏನದು ಕಾಗದ ಪತ್ರ ಎನ್ನುವುದು ಈಗಿರುವ ಕುತೂಹಲ.

ಅಷ್ಟಕ್ಕೂ ಭಾಗ್ಯಲಕ್ಷ್ಮಿ ಬದಲಾಗಿದ್ದಾಳೆ. ಅಳುಮುಂಜಿಯಲ್ಲ ಈಕೆ. ತನಗೆ ಮತ್ತು ಮಗಳಿಗೆ ಪರೀಕ್ಷೆ ಬರೆಯಲು ಕೊಡದ ಕನ್ನಿಕಾ ಮಿಸ್​ ವಿರುದ್ಧವೇ ತಿರುಗಿ ಬಿದ್ದು ಪರೀಕ್ಷೆ ಬರೆದಿದ್ದಾಳೆ. ಕನ್ನಿಕಾ ಮಿಸ್​ ಎದುರು ಕಾಳಿ ಅವತಾರ ತಾಳಿದ್ದನ್ನು ನೋಡಿದ್ದ ಭಾಗ್ಯಲಕ್ಷ್ಮಿ ಅಭಿಮಾನಿಗಳು, ಇದೇ ರೂಪವನ್ನು ಗಂಡ ತಾಂಡವ್​ ಎದುರಿಗೂ ತೋರಿಸಮ್ಮಾ ಎನ್ನುತ್ತಿದ್ದರು. ಇದೀಗ ಆ ಟೈಮೂ ಬಂದುಬಿಟ್ಟಿದೆ. ಭಾಗ್ಯಲಕ್ಷ್ಮಿ ಕೊನೆಗೂ ಗಂಡ ತಾಂಡವ್​ ಎದುರು ನಿಂತು ಮಾತನಾಡುವಷ್ಟು ಗಟ್ಟಿಗಿತ್ತಿಯಾಗಿದ್ದಾಳೆ. ಗಂಡನೇ ಸರ್ವಸ್ವ, ಆತ ಏನು ಮಾಡಿದರೂ ತಾಳ್ಮೆಯಿಂದ ಇರಬೇಕು, ಪತಿಯೇ ಪರದೈವ ಎಂದೆಲ್ಲಾ ಎಂದುಕೊಂಡು ಇಲ್ಲಿಯವರೆಗೆ ಸಹನಾಮೂರ್ತಿಯಂತಿದ್ದ ಭಾಗ್ಯ ಪತಿಗೇ ದುರುಗುಟ್ಟು ನೋಡಿ ನೋಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾಳೆ. ಮನೆ ನನ್ನದು, ಮನೆಬಿಟ್ಟು ಹೋಗು, ಡಿವೋರ್ಸ್​ ಕೊಡುವೆ ಎಂದೆಲ್ಲಾ ಹೇಳಿ ಪೌರುಷ ಮೆರೆಯುತ್ತಿದ್ದ ತಾಂಡವ್​, ಪತ್ನಿಯ ಈ ರೂಪಕ್ಕೆ ಸುಸ್ತು ಹೊಡೆದಿದ್ದಾನೆ.

ರಶ್ಮಿಕಾ @28: ಹುಟ್ಟುಹಬ್ಬಕ್ಕೆ ಬಂದಳು ಗರ್ಲ್​ಫ್ರೆಂಡ್​​, ಶ್ರೀವಲ್ಲಿ! ಅಬುದಾಬಿಯಲ್ಲಿ ಭರ್ಜರಿ ಸೆಲೆಬ್ರೇಷನ್​

ಭಾಗ್ಯಲಕ್ಷ್ಮಿ ಸೀರಿಯಲ್​ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಇಷ್ಟು ದಿನ ನಿನ್ನ ಅಳುಮುಂಜಿ ಮುಖ ನೋಡಿ ಸಾಕಾಗಿತ್ತು, ನಿನ್ನಂಥ ಹೆಣ್ಣಿದ್ದರೆ ಎಲ್ಲವೂ ಸಾಧ್ಯ. ನೀನು ನಿನ್ನಂಥ ಮನಸ್ಥಿತಿ ಇರುವ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿ, ಪತಿ ದೌರ್ಜನ್ಯ ಎಸಗಿದಾಗ, ಸಹಿಸಿಕೊಳ್ಳದೇ ಎದುರು ಮಾತನಾಡುವ ಶಕ್ತಿ ಪ್ರತಿ ಹೆಣ್ಣಿಗೂ ಬರಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದೇ ವೇಳೆ ಇದು ಸಾಧ್ಯವಾಗುವುದು ಕುಸುಮಾನಂಥ ಅತ್ತೆಯಿದ್ದರೆ ಮಾತ್ರ ಎಂದೂ ಸೇರಿಸುತ್ತಿದ್ದಾರೆ.

ಹೀಗೆ ಹೇಳುತ್ತಲೇ ಗಂಡ ಎಸೆದ ಬ್ಯಾಗ್​ ಒಳಗೆ ತಂದಿರುವ ಭಾಗ್ಯಳನ್ನು ನೋಡಿ ಅತ್ತೆ ಕುಸುಮಾಗೆ ಖುಷಿಯೋ ಖುಷಿ. ನಾನು ಮನೆ ಬಿಟ್ಟು ಹೋಗುವುದಿಲ್ಲ. ಇಲ್ಲಿಯೇ ಇರುತ್ತೇನೆ ಎಂದಾಗ, ಕುಸುಮಾ ನಾವೂ ನಿನ್ನನ್ನು ಹೋಗಲು ಬಿಡುವುದಿಲ್ಲಮ್ಮಾ ಎಂದಿದ್ದಾಳೆ. ತಾಂಡವ್​ ಭಾಗ್ಯಂಗೆ ಬಯ್ಯಲು ಮುಂದಾದಾಗ ಕಾಳಿ ರೂಪ ತಾಳಿರೋ ಭಾಗ್ಯ ದೊಡ್ಡ ಕಣ್ಣು ಬಿಡುತ್ತಾ ಪತಿಯ ಸಮೀಪ ಬಂದಾಗ, ಪತ್ನಿಯ ಹೊಸ ರೂಪಕ್ಕೆ ತಾಂಡವ್​ ಬೆಚ್ಚಿ ಬಿದ್ದಿದ್ದಾನೆ. ಆದರೆ ಭಾಗ್ಯಳನ್ನು ಈ ಸಲ ಮನೆಯಲ್ಲಿ ಇರಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾನೆ. ಅಮ್ಮ ಕುಸುಮಾ ಅವನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಅದಕ್ಕೂಜಗ್ಗದಿದ್ದ ಕಾರಣ, ಇದೀಗ ಕಾಗದಪತ್ರ ತಂದಿದ್ದಾಳೆ. ಏನಿದೆ ಅದರಲ್ಲಿ? ಅಷ್ಟಕ್ಕೂ ಈ ಸೀರಿಯಲ್​ ಹಿಂದಿನ ಅನುಪಮಾ ಸೀರಿಯಲ್​ ರೀತಿಯಲ್ಲಿಯೇ ಇದ್ದು, ಸ್ವಲ್ಪ ಸ್ವಂತಿಕೆ ಉಪಯೋಗಿಸಿ ಎಂದು ಕೆಲವರು ಹೇಳುತ್ತಿದ್ದಾರೆ.

ವಿಷ್ಣು, ರಾಮನ ಅಂಶವೇ ಪ್ರಧಾನಿ ನರೇಂದ್ರ ಮೋದಿ: ನಟಿ ಕಂಗನಾ ಹೇಳಿಕೆ ಭಾರಿ ವೈರಲ್​