ಗಂಡನ ಮತ್ತೊಂದು ಮದ್ವೆಗೆ ಭಾಗ್ಯಳದ್ದೇ ಡೆಕೊರೇಷನ್​! ಇದೇನಿದು ಭಾಗ್ಯಲಕ್ಷ್ಮಿ ಸೀರಿಯಲ್​ ಹೊಸ ಟ್ವಿಸ್ಟ್​?

ತಾಂಡವ್​ ಮತ್ತು ಶ್ರೇಷ್ಠಾ ತಮ್ಮ ಮದುವೆಯ ಬಗ್ಗೆ ಪ್ಲ್ಯಾನ್​ ಮಾಡಲು ಭಾಗ್ಯ ಕೆಲಸ ಮಾಡುವ ಹೋಟೆಲ್​ಗೆ ಹೋಗಿದ್ದಾರೆ. ಅವರನ್ನು ಅಟೆಂಡ್​ ಮಾಡುವ ಜವಾಬ್ದಾರಿ ಭಾಗ್ಯಳ ಮೇಲಿದೆ. ಮುಂದೆ?
 

Tandav and Shrestha go to the hotel to plan their wedding where Bhagyalakshmi works suc

ಭಾಗ್ಯಳನ್ನು ಯಾವುದೋ ಭಗಾಯಾ ಎಂಬಾಕೆ ಎಂದು ತಿಳಿದು ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಕೊಟ್ಟಿದ್ದಾರೆ.   ಆದರೆ ಇಂಗ್ಲಿಷ್​ ಬರದೇ ಪರದಾಡುತ್ತಿದ್ದಾಳೆ ಭಾಗ್ಯ.   ಹಲವಾರು ಅಡೆತಡೆಗಳನ್ನು ಮೀರಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಬರೆದವಳು ಭಾಗ್ಯ. ಫಸ್ಟ್​ ಕ್ಲಾಸ್​ನಲ್ಲಿಯೇ ಪಾಸಾಗಿದ್ದಾಳೆ.  ಆದರೆ ಇದೀಗ ಹೋಟೆಲ್​ನಲ್ಲಿ ಇಂಗ್ಲಿಷ್​ ಬರದೇ ಪರದಾಡುತ್ತಿದ್ದಾಳೆ. ಬೇರೊಬ್ಬರ ಬದಲು ತನಗೆ ಈ ಕೆಲಸ ಸಿಕ್ಕಿದೆ ಎಂದೂ ಅವಳಿಗೆ ಗೊತ್ತಿಲ್ಲ. ಆದರೆ ವಿವಿಧ ಕೋರ್ಸ್​ಗಳಲ್ಲಿ ಟಾಪರ್​ ಆಗಿರುವ ಭಗಾಯಾ ಎಂಬಾಕೆಯೆಂದೇ ಈಕೆಗೆ ಕೆಲಸ ಸಿಕ್ಕಿದೆ. ಈ ರೀತಿ ಕೆಲಸ ಸಿಕ್ಕಿರುವ ಕುರಿತು ಇದಾಗಲೇ ಸೀರಿಯಲ್​ ಅನ್ನು ನೆಟ್ಟಿಗರು ಸಾಕಷ್ಟು ಟ್ರೋಲ್​ ಮಾಡುತ್ತಿದ್ದರೂ ಧಾರಾವಾಹಿಯನ್ನು ಧಾರಾವಾಹಿಯಾಗಿಯಷ್ಟೇ ನೋಡಿದರೆ ಈ ಸೀರಿಯಲ್​ನಲ್ಲಿ ಈ ಅದ್ಭುತ ನಡೆದಿದೆ ಅಷ್ಟೇ.

ಆದರೆ ಭಾಗ್ಯಳ ಸ್ಥಿತಿ ಮಾತ್ರ ಯಾರಿಗೂ ಬೇಡವಾಗಿದೆ. ವೇಟ್ರೆಸ್​ ಕೆಲಸವನ್ನು ಭಾಗ್ಯಳಿಗೆ ನೀಡಲಾಗಿದೆ. ಬರುವ ಗ್ರಾಹಕರು ಇಂಗ್ಲಿಷ್​ನಲ್ಲಿ ಮಾತನಾಡುತ್ತಿದ್ದಾರೆ. ಅವರು ಆರ್ಡರ್​ ಮಾಡುವ ತಿನಿಸು ಯಾವುದು ಎಂದು ಭಾಗ್ಯಳಿಗೆ ತಿಳಿಯುವುದಿಲ್ಲ. ಇದರಿಂದ ಪರದಾಡುತ್ತಿದ್ದಾಳೆ ಭಾಗ್ಯ. ನನಗೆ ಆರ್ಡರ್‌ ತೆಗೆದುಕೊಳ್ಳುವುದಕ್ಕಿಂತ ಅಡುಗೆ ಮಾಡುವುದು ಚೆನ್ನಾಗಿ ಬರುತ್ತದೆ. ಅದನ್ನೇ ಮಾಡುತ್ತೇನೆ ಎಂದು ಶೆಫ್​ಗೆ ಹೇಳುತ್ತಾಳೆ. ಅವನು ಈಕೆಯನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಳ್ಳುತ್ತಾನೆ. ಒಟ್ಟಿನಲ್ಲಿ ಕೆಲಸವಂತೂ ಭಾಗ್ಯಳಿಗೆ ಬೇಕೇ ಬೇಕು. ಏಕೆಂದರೆ, ಗಂಡ- ಹೆಂಡತಿ ನಡುವೆ ಬಿರುಕು ಮೂಡಿದೆ. ಮನೆ ಎರಡು ಭಾಗವಾಗಿದೆ. ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಅಚಾನಕ್​ ಆಗಿ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಆದರೆ ಅಲ್ಲಿ ಪರದಾಡುತ್ತಿದ್ದಾಳೆ. 

ನೋಡಿ ಫ್ರೆಂಡ್ಸ್​... ರಾತ್ರಿ ನಿದ್ದೆ ಮಾಡಲೂ ಬಿಡಲಿಲ್ಲ... ಸೀತಾರಾಮ ಸಿಹಿಯಿಂದ ಹೀಗೊಂದು ಕಂಪ್ಲೇಂಟ್​...

ಆದರೆ ಇದೀಗ ಕೆಲಸ ಮಾಡುವುದಿದ್ದರೆ ತಾನು ಇಂಗ್ಲಿಷ್​ ಕಲಿಯಲೇ ಬೇಕು ಎನ್ನುವುದು ಭಾಗ್ಯಳಿಗೆ ಅರ್ಥವಾಗಿದೆ. ಆದ್ದರಿಂದ ಹೋಟೆಲ್​ಗೆ ಸ್ವಾಗತ ಎನ್ನುವಷ್ಟು ಇಂಗ್ಲಿಷ್​ ಕಲಿಯಲು ಶುರು ಮಾಡಿಕೊಂಡಿರುವಾಗಲೇ ಮತ್ತೊಂದು ಬರಸಿಡಿಲು ಬಡಿದಿದೆ. ಅದೇನೆಂದರೆ, ಇದೀಗ ಗಂಡ ತಾಂಡವ್​ ಮತ್ತು ಆತನ ಲವರ್​ ಶ್ರೇಷ್ಠಾಳ ಮದುವೆಗೆ ಡೆಕೋರೇಷನ್​ ಪ್ಲ್ಯಾನ್​ ಮಾಡುವ ಕೆಲಸ ಭಾಗ್ಯಳಿಗೇ ಬಂದಿದೆ!

ಹೌದು. ಇದೀಗ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಟ್ವಿಸ್ಟ್​ ಬಂದಿದೆ. ಭಾಗ್ಯಾಳದ್ದು ಎಂದು ಭಗಾಯ ಸಿವಿ ನೋಡುವ ಸೂಪರ್‌ವೈಸರ್‌, ಭಾಗ್ಯಾಳನ್ನು ಕರೆದು ನಿಮ್ಮ ಸಿವಿ ನೋಡಿದೆ, ನೀವು ವೆಡ್ಡಿಂಗ್‌ ಡೆಕೊರೇಷನ್‌ನಲ್ಲಿ ಸ್ಪೆಷಲ್‌ ಕೋರ್ಸ್‌ ಮಾಡಿದ್ದೀರ ಎಂದು ನೋಡಿದೆ. ಆದ್ದರಿಂದ ಇಂದು ನೀವು ಅದೇ ಕೆಲಸ ಮಾಡಿ, ಮದುವೆ ಬಗ್ಗೆ ವಿಚಾರಿಸಲು ಒಬ್ಬರು ಕ್ಲೈಂಟ್‌ ಇಲ್ಲಿಗೆ ಬರುತ್ತಿದ್ದಾರೆ. ಅವರ ಜೊತೆ ನೀವೇ ಮಾತನಾಡಿ ಎನ್ನುತ್ತಾನೆ. ಇದನ್ನು ಕೇಳಿ ಭಾಗ್ಯಳಿಗೆ ತಲೆತಿರುಗಿದಂತೆ ಆಗುತ್ತದೆ. ಇಲ್ಲೇನು ಆಗುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಮಳ್ಳಿಯಂತೆ ತಲೆಯಲ್ಲಾಡಿಸುತ್ತಾಳೆ. ಆದರೆ ಮದುವೆಯ ಬಗ್ಗೆ ಈ ಹೋಟೆಲ್​ಗೆ ಮಾತನಾಡಲು ಬರುತ್ತಿರುವವರು ತನ್ನ ಗಂಡ ಮತ್ತು ಶ್ರೇಷ್ಠಾ ಎನ್ನುವುದನ್ನು ಭಾಗ್ಯ ಕನಸಿನಲ್ಲಿಯೂ ಊಹಿಸಿರುವುದಿಲ್ಲ. ಆದರೆ ಅದು ಆಗಿಯೇ ಹೋಗಿದೆ. ಶ್ರೇಷ್ಠಾ ಮತ್ತು ತಾಂಡವ್​ ಮದುವೆ ಪ್ಲ್ಯಾನ್​ಗಾಗಿ ಈ ಹೋಟೆಲ್​ಗೆ ಬಂದಿದ್ದಾರೆ. ಅವರನ್ನು ಭಾಗ್ಯ ನೋಡುತ್ತಾಳೆಯೇ? ಭಾಗ್ಯಳನ್ನು ನೋಡುವ ಇವರಿಬ್ಬರ ಸ್ಥಿತಿ ಏನಾಗಬಹುದು? ನೂರೆಂಟು ಪ್ರಶ್ನೆಗಳು ಇದೀಗ ವೀಕ್ಷಕರ ಮುಂದಿದೆ. 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರೋ ನಟಿ ರಾಖಿ ಸಾವಂತ್​ಗೆ ಜೀವ ಬೆದರಿಕೆ: ವಕೀಲರಿಂದ ಶಾಕಿಂಗ್​ ಹೇಳಿಕೆ

Latest Videos
Follow Us:
Download App:
  • android
  • ios