ಸ್ಟಾರ್‌ ಸುವರ್ಣ ವಾಹಿನಿಯ ‘ಸುವರ್ಣ ಸೂಪರ್‌ ಸ್ಟಾರ್‌’ ಕಾರ್ಯಕ್ರಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಸಂಚಿಕೆಗಳು ಪ್ರಸಾರವಾಗಲಿವೆ. ಕಿರುತೆರೆ ಮತ್ತು ಹಿರಿತೆರೆಯ ನಟಿಯರು ಕಾರ್ಯಕ್ರಮದ ಮೆರಗು ಹೆಚ್ಚಿಸಲಿದ್ದಾರೆ.

ಈಗಾಗಲೇ ವೈಷ್ಣವಿ, ದಿಶಾ ಮದನ್‌, ಶ್ವೇತಾ ಪ್ರಸಾದ್‌, ಸ್ವಪ್ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ. ನಟಿಯರಾದ ರೇಖಾ, ಸಂಗೀತಾ, ವನಿತಾ ವಾಸು ಗುರುವಾರ ಮತ್ತು ಶುಕ್ರವಾರದ ಸಂಚಿಕೆಗಳಲ್ಲಿ ಮಿಂಚಲಿದ್ದಾರೆ.

ನಾಗರಹೊಳೆಯಲ್ಲಿ ಕ್ಯಾಮೆರಾ ಹಿಡಿದು ಸುತ್ತಿದ ದರ್ಶನ್..!

ಶನಿವಾರ ರಿಯಾಲಿಟಿ ಶೋ ಹಾಡುಗಾರ್ತಿಯರಾದ ಅಂಕಿತಾ, ಸುಪ್ರಿಯಾ ಜೋಷಿ ಮತ್ತು ಅನ್ವಿತಾ ಭಾಗವಹಿಸಲಿದ್ದಾರೆ. ನೇಹಾ ಗೌಡ, ಇಷಿತಾ ವರ್ಷ ಮತ್ತು ಅಪೂರ್ವ ಇಂದಿನ (ಬುಧವಾರ) ಸಂಚಿಕೆಯ ಅತಿಥಿಗಳು.

ನಟಿ ಮಯೂರಿಗೆ ತಾರೆಯರಿಂದ ಸೀಮಂತ

ಗರ್ಭಿಣಿಯಾಗಿರುವ ನಟಿ ಮಯೂರಿಗೆ ಸುವರ್ಣ ಸೂಪರ್‌ ಸ್ಟಾರ್‌ ವೇದಿಕೆಯಲ್ಲಿ ಸೀಮಂತ ಮಾಡಲಾಯಿತು. ರೇಖಾ, ವನಿತಾ ವಾಸು ಮತ್ತು ಸಂಗೀತಾ ಹಾಗೂ ಶಾಲಿನಿ ಮಯೂರಿಗೆ ಸೀಮಂತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂಚಿಕೆಗಳು ಜ.14 ಮತ್ತು 15ರಂದು ಸಂಜೆ 5 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

 
 
 
 
 
 
 
 
 
 
 
 
 
 
 

A post shared by Star Suvarna (@starsuvarna)