ಅಶ್ಲೀಲ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿದ್ದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಅವರ 'ದಿ ರಣವೀರ್ ಶೋ' ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ತೆರವು ಮಾಡಿದೆ. ಶೋನಲ್ಲಿ ನೈತಿಕತೆ ಮತ್ತು ಸಭ್ಯತೆ ಕಾಯ್ದುಕೊಳ್ಳಲು ನ್ಯಾಯಾಲಯವು ಸಲಹೆ ನೀಡಿದೆ.
ನವದೆಹಲಿ: ಅಶ್ಲೀಲ ಹೇಳಿಕೆಯಿಂದಾಗಿ ವಿವಾದಕ್ಕೆ ಗುರಿಯಾಗಿದ್ದ ಖ್ಯಾತ ಯೂಟ್ಯೂಬರ್, ಆನ್‌ಲೈನ್ ಕಂಟೆಂಟ್ ಕ್ರಿಯೇಟರ್ ರಣವೀರ್ ಅಲಹಾಬಾದಿಯಾ ಅವರ ''ದಿ ರಣವೀರ್ ಶೋ''ನ ಪ್ರಸಾರಕ್ಕೆ ಹಾಕಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಸೋಮವಾರ ತೆರವು ಮಾಡಿದೆ.
ಇದೆ ವೇಳೆ ಯೂಟ್ಯೂಬ್‌ನಲ್ಲಿ ಪ್ರಸಾರವಾಗುವ ಈ ಶೋದಲ್ಲಿ ನೈತಿಕತೆ ಮತ್ತು ಸಭ್ಯತೆ ಕಾಯ್ದುಕೊಳ್ಳಬೇಕು ಹಾಗೂ ಎಲ್ಲಾ ವಯೋಮಾನವದವರೂ ಈ ಶೋ ವೀಕ್ಷಿಸುವಂತಿರಬೇಕು ಎಂದೂ ಸಲಹೆ ಸ್ವರೂಪದಲ್ಲಿ ಎಚ್ಚರಿಕೆಯನ್ನೂ ನೀಡಿದೆ.
ಪೋಡ್‌ಕಾಸ್ಟ್ ಮಾತ್ರವೇ ತನ್ನ ಆದಾಯದ ಮುಖ್ಯ ಮೂಲ. ಜೊತೆಗೆ, 280 ಕೆಲಸಗಾರರು ತನ್ನನ್ನು ನಂಬಿಕೊಂಡಿದ್ದಾರೆ ಎಂಬ ಅಲಹಾಬಾದಿಯ ಮನವಿಯನ್ನು ಮನ್ನಿಸಿ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾ. ಎನ್.ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ: ರಣವೀರ್ ಅಲಹಾಬಾದಿಯಾ ತಂದೆಯ ಮೇಲೂ ಒಂದು ಕರಾಳ ಪೊಲೀಸ್ ಕೇಸ್ ಇದೆ!
ಇದೇ ವೇಳೆ ಪೀಠವು ಅಲಹಾಬಾದಿಯ ಅವರಿಗೆ ಈ ಹಿಂದೆ ನೀಡಿದ್ದ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಮುಂದಿನ ಆದೇಶವರೆಗೆ ವಿಸ್ತರಿಸಿದೆ. ಜತೆಗೆ, ತಮ್ಮ ವಿರುದ್ಧದ ತನಿಖೆಗೆ ಸಹಕರಿಸುವಂತೆಯೂ ಸೂಚಿಸಿದೆ. ಯೂಟ್ಯೂಬ್ ರಿಯಾಲಿಟಿ ಶೋವೊಂದರಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಯಿಂದಾಗಿ ಅಲಹಾಬಾದಿಯ ಮತ್ತಿತರರ ವಿರುದ್ಧ ಮಹಾರಾಷ್ಟ್ರ, ಒಡಿಶಾ, ಅಸ್ಸಾಂನಲ್ಲಿ ಕೇಸ್ ದಾಖಲಾಗಿತ್ತು. ಅಲಹಾಬಾದಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದಲ್ಲಿ ಅಲಹಾಬಾದಿಯ ಅವರ ಯೂಟ್ಯೂಬ್ ಚಾನೆಲ್ ಪ್ರಸಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಿತ್ತು.
ಇದನ್ನೂ ಓದಿ: ಸನ್ನಿ ಲಿಯೋನ್ ಹೇಳಿಕೊಟ್ಟ ಪಾಠ ಯಾಕೆ ಕಲೀಲಿಲ್ಲ..? ರಣವೀರ್ ಅಲ್ಲಾಬಾದಿಯಾಗೆ ಸಕತ್ ಕ್ಲಾಸ್!
