Asianet Suvarna News Asianet Suvarna News

'ಹೂ ಮಳೆ': ಧಾರಾವಾಹಿ ಅಂತ್ಯ: ಸುಜಾತ ಅಕ್ಷಯ್ ಪ್ರತಿಕ್ರಿಯೆ

ಕಾರ್ಪೊರೇಟರ್ ಕಾವೇರಿ ಹಾವಳಿ ಅಂತ್ಯವಾಗುತ್ತಿದೆ. ಇದ್ದಕ್ಕಿದ್ದಂತೆ ಧಾರಾವಾಹಿ ಮುಕ್ತಾಯವಾಗುತ್ತಿದೆ ಎಂದು ಬೇಸರದಲ್ಲಿದ್ದಾರೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹೂ ಮಳೆ ಧಾರಾವಾಹಿಯ ಕಲಾವಿದರು. 

Sujatha Akshaya reaction to ending Colors Kannada Hoo male daily soap  vcs
Author
Bangalore, First Published Sep 25, 2021, 3:52 PM IST

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೂ ಮಳೆ ಧಾರಾವಾಹಿ (Serial) ಮುಕ್ತಾಯವಾಗುತ್ತಿದೆ. ಧಾರಾವಾಹಿಯ ಪ್ರತಿಯೊಬ್ಬ ಕಲಾವಿದನೂ ಕೂಡ ವೀಕ್ಷಕರ (viewers) ಮೇಲೆ ದೊಡ್ಡ ಪರಿಣಾಮ ಬೀರಿದ್ದಾರೆ. ಲಹರಿ, ಯದುವೀರ್, ಇಶಾ ಹಾಗೂ ಕಾರ್ಪೊರೇಟರ್ ಕಾವೇರಿ ಎಂದರೂ ಮರೆಯಲಾಗದ ಮುಖ್ಯ ಪಾತ್ರಧಾರಿಗಳು. ಧಾರಾವಾಹಿ ಆರಂಭವಾಗಿ ಒಂದು ವರ್ಷ ಆಗುಷ್ಟರಲ್ಲಿಯೇ, ಅಂತ್ಯವಾಗುತ್ತಿರುವುದಕ್ಕೆ ಕಾವೇರಿ ಪಾತ್ರಧಾರಿ ಸುಜಾತಾ ಅಕ್ಷಯ್ ಖಾಸಗಿ ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 

'ಹೂ ಮಳೆ' ಅರೋಹಿ ನೈನಾ ಸಖತ್ ಮಾಡ್ರನ್; ಎಲ್ಲೋದ್ರಿ ಲಹರಿ ಅತ್ತಿಗೆ?

'ವಾಹಿನಿ ಕಡೆಯಿಂದ ಹೂ ಮಳೆ ಸೀರಿಯಲ್ ಮುಗಿಯುತ್ತಿದೆ ಎಂದು ನಮಗೆ ಸುದ್ದಿ ಬಂದಾಗಿನಿಂದ ಎಲ್ಲಾ ನಟರು ಹಾಗೂ ಸಿಬ್ಬಂದಿ ವರ್ಗಕ್ಕೆ ಬೇಸರವಾಗಿದೆ. ಕೊರೋನಾ ಎರಡನೇ ಲಾಕ್‌ಡೌನ್‌ (Corona Lockdown) ಸಮಯದಲ್ಲಿ ಕರ್ನಾಟಕ (Karnataka)ದಲ್ಲಿ ಯಾವುದೇ ಚಿತ್ರೀಕರಣ ನಡೆಯದಿದ್ದಾಗ, ನಾವೆಲ್ಲರೂ ಹೈದರಾಬಾದ್‌ (Hyderabad)ನಲ್ಲಿ ಚಿತ್ರೀಕರಣ ಮಾಡಿದ್ವಿ. ಆಗ ನಾವೆಲ್ಲಾ ಒಟ್ಟಿಗೆ ಇದ್ವಿ. ಆ ನೆನಪುಗಳು ಇನ್ನೂ ಹಸಿರಾಗಿಯೇ ಇವೆ. ಹೈದರಾಬಾದ್‌ನಲ್ಲಿ ಚಿತ್ರೀಕರಣ ಇಡೀ ತಂಡವನ್ನು ಒಟ್ಟುಗೂಡಿಸಿತ್ತು. ನಮ್ಮ ತಂಡದಲ್ಲಿ ಬಲವಾದ ಬಾಂಧವ್ಯ (Bonding) ಬೆಳದಿದೆ. ಆದರೆ ಎಲ್ಲರೂ ಹೇಳುವಂತೆ ಪ್ರತಿಯೊಂದಕ್ಕೂ ಕೊನೆ ಎಂಬುದಿದೆ. ಒಂದರ ಕೊನೆಯೇ, ಇನ್ನೊಂದರ ಆರಂಭ. ಹೊಸ ಪ್ರಾಜೆಕ್ಟ್‌ಗಳಿಗಾಗಿ ನಾನು ಎದುರು ನೋಡುತ್ತಿದ್ದೇನೆ,' ಎಂದು ಸುಜಾತ ಹೇಳಿದ್ದಾರೆ. 

Sujatha Akshaya reaction to ending Colors Kannada Hoo male daily soap  vcs

MLA ಆಗಬೇಕು ಎಂಬ ದುರಾಸೆಗೆ ಮಗಳ ಪ್ರೀತಿಯನ್ನೇ ಬಲಿಕೊಡುವ ದುಷ್ಟ ತಾಯಿ ಕಾಪೊರೇಟರ್ ಕಾವೇರಿ ಬಗ್ಗೆ ನೆಟ್ಟಿಗರು ಆಗಾಗ ಪ್ರತಿಕ್ರಿಯೆ ನೀಡುತ್ತಿದ್ದರು. 

ಹೊಸ ಲುಕ್‌ನಲ್ಲಿ ಕನ್ನಡ ಧಾರಾವಾಹಿ 'ಹೂ ಮಳೆ' ಶ್ರೀರಾಮ್..!

ಸಣ್ಣ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮುಕುಂದ್ ಎಂಬ ಹುಡುಗನನ್ನು ಲಹರಿ ಪ್ರೀತಿಸುತ್ತಾಳೆ. ಆದರೆ ತಾಯಿ ಎಂಎಲ್‌ಎ ಆಗಬೇಕು ಎನ್ನುವ ಆಸೆಗೆ ವಿಧುರ ಯದುವೀರ್‌ಗೆ ಮಗಳನ್ನು ಮದುವೆ ಮಾಡುವ ಪ್ಲಾನ್ ಮಾಡುತ್ತಾಳೆ. ಮುಕುಂದ್‌ಗೆ IAS ಓದಬೇಕೆಂಬ ಆಸೆ ತುಂಬಾ ಇರುತ್ತದೆ. ಈ ಕಾರಣಕ್ಕೆ ಯದುವೀರ್ ಸ್ನೇಹ (Friendhsip)ದಿಂದ ಓದಿಗೆ ಸಹಾಯ ಪಡೆದುಕೊಳ್ಳುತ್ತಾನೆ. ಆದರೆ ಯದುವೀರ್‌ ತನ್ನ ಗರ್ಲ್‌ಫ್ರೆಂಡ್‌ (Girl Friend) ಮದುವೆ ಆಗುತ್ತಿದ್ದಾರೆ, ಎಂಬ ವಿಚಾರ ತಿಳಿದು ಶಾಕ್ ಆಗುತ್ತಾನೆ. ಒಂದು ದಿನ ಕಾಪೊರೇಟರ್‌ ಕಾವೇರಿ ಮನೆಗೆ ಹೋಗಿ ಮಗಳು ಕೇಳುವ ಶಾಸ್ತ್ರ ಮಾಡುತ್ತಾನೆ. ಲಹರಿ ರೂಮಿನಿಂದ ಹೊರ ಬರುವಷ್ಟರಲ್ಲಿಯೇ ಮುಕುಂದ್ ಪ್ರಾಣ ತೆಗೆದಿರುತ್ತಾರೆ. ಈ ನಡುವೆ ಲಹರಿ ಗರ್ಭಿಣಿ ಎನ್ನುವ ವಿಚಾರವನ್ನೂ ಯಾರಿಗೂ ಹೇಳಿರಲಿಲ್ಲ. ಮುಕುಂದ್ ಸತ್ತ ನಂತರ ಅತ್ತಿಗೆ ಶೋಭಾಗೆ ತಿಳಿಸುತ್ತಾಳೆ. ಮಗಳು ಹೀಗೆಲ್ಲಾ ಮಾಡಿಕೊಂಡಿದ್ದಾಳೆ, ಎಂದು ತಿಳಿದ ತಕ್ಷಣ abortioin ಮಾಡಿಸುವ ಪ್ರಯತ್ನವನ್ನೂ ಮಾಡುತ್ತಾಳೆ. ಲಹರಿ ಯಾವುದಕ್ಕೂ ಒಪ್ಪಿಕೊಳ್ಳುವುದಿಲ್ಲ. ಯದುವೀರ್‌ಗೆ ಈಗಾಗಲೇ ಮಗನಿದ್ದಾನೆ, ಇವಳಿಗೂ ಮಗು ಇದ್ದರೆ ಎನೂ ಆಗುವುದಿಲ್ಲ ಎನ್ನುವ ದೈರ್ಯದ ಮೇಲೆ ಮದುವೆ ಮಾಡುತ್ತಾಳೆ. ಮದವೆಯಾದ ಮೊದಲ ರಾತ್ರಿಯೇ ಲಹರಿ ಎಲ್ಲಾ ಸತ್ಯವನ್ನೂ ಪತಿಗೆ ತಿಳಿಸುತ್ತಾಳೆ. ಆರಂಭದಲ್ಲಿ ಕೋಪಗೊಂಡ ಯದುವೀರ್, ನಂತರದ ದಿನಗಳಲ್ಲಿ ಲಹರಿ ಪರವಾಗಿ ನಿಲ್ಲುತ್ತಾನೆ. ಮಗು ತಮ್ಮದೇ ಎಂದೇ ರಿವೀಲ್ ಮಾಡುತ್ತಾನೆ. ಆದರೆ ಯಾವುದೋ ಹಳೆ ಫೈಲ್‌ನಿಂದ ಇದು ಯದುವೀರ್ ಮಗು ಅಲ್ಲ ಎನ್ನುವ ವಿಚಾರ ಯದುವೀರ್ ಸಹೋದರಿಗೆ ತಿಳಿಯುತ್ತದೆ. ಲಹರಿಯನ್ನು ಕೊಲೆ (Kill) ಮಾಡುವ ಪ್ರಯತ್ನ ಕೂಡ ಮಾಡಿಸುತ್ತಾಳೆ. ಆದರೆ ಯದುವೀರ್ ಸಂಪೂರ್ಣ ವಿಚಾರದ ಬಗ್ಗೆ ಚರ್ಚೆ ನಡೆಸಿದ ಬಳಿತ ಸುಮ್ಮನಾಗುತ್ತಾರೆ. ಕಾವೇರಿ ಬದಲು ಮಗನಿಗೆ ಎಂಎಲ್‌ಎ ಟಿಕೆಟ್‌ (MLA Ticket) ಸಿಗುತ್ತದೆ, ತುಂಬು ಗರ್ಭಿಣಿ ಲಹರಿ ಅಮ್ಮನ ಮನೆಯಲ್ಲಿ ಆರೈಕೆ ಮಾಡಿಸಿ ಕೊಳ್ಳುತ್ತಿದ್ದಾಳೆ. ಕಥೆ ಇಲ್ಲಿಗೆ ಬಂದು ನಿಂತಿದೆ.. ಯಾವ ರೀತಿ ಅಂತ್ಯ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

 

Follow Us:
Download App:
  • android
  • ios