'ಅನುಪಮ ಚೆಲುವು' ಹಾಡಿಗೆ ಸುಧಾರಾಣಿ ರೀಲ್ಸ್: ನಮ್ಮದೇ ಕಣ್ ಬೀಳತ್ತೆ ಮ್ಯಾಮ್ ಅಂತಿದ್ದಾರೆ ಫ್ಯಾನ್ಸ್!
ನಟಿ ಸುಧಾರಾಣಿಯವರು ಅನುಪಮ ಚೆಲುವು ಹಾಡಿಗೆ ರೀಲ್ಸ್ ಮಾಡಿದ್ದು, ಅಭಿಮಾನಿಗಳಿಂದ ಶ್ಲಾಘನೆಗಳ ಸುರಿಮಳೆ ಬರುತ್ತಿದೆ.
ಸ್ಯಾಂಡಲ್ವುಡ್ನ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಕಣ್ಮಣಿಯಾದವರು ಸುಧಾರಾಣಿ. 1970ರಲ್ಲಿ ಹುಟ್ಟಿರೋ ನಟಿಗೆ ಈಗ 53 ವರ್ಷ ವಯಸ್ಸು. ಸದ್ಯ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು, ಶುಭಮಸ್ತು ಧಾರಾವಾಹಿಯಲ್ಲಿ ಬಿಜಿಯಾಗಿರುವ ಸುಧಾರಾಣಿ, ಇಲ್ಲಿಯ ಅಭಿನಯಕ್ಕಾಗಿ ಅಪಾರ ಮೆಚ್ಚುಗೆ ಗಳಿಸುತ್ತಿದ್ದಾರೆ. ಚಿಕ್ಕಂದಿನಿಂದಲೇ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ನಟಿ, 'ಕಿಲಾಡಿ ಕಿಟ್ಟು', 'ರಂಗನಾಯಕಿ' ಮುಂತಾದ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದವರು. ಹದಿಮೂರರನೇ ವಯಸ್ಸಿನಲ್ಲೇ ಸುಧಾರಾಣಿ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ರು. ರಾಜ್ ನಿರ್ಮಾಣ ಸಂಸ್ಥೆಯ ಮೂಲಕವಾಗಿ ಶಿವರಾಜಕುಮಾರ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ 'ಆನಂದ್' ಚಿತ್ರಕ್ಕೆ ಸುಧಾರಾಣಿ ನಾಯಕಿಯಾದರು.
ಸಾಮಾಜಿಕ ಜಾಲತಾಣದಲ್ಲಿಯೂ ಆ್ಯಕ್ಟೀವ್ ಆಗಿರುವ ನಟಿ, 1981ರಲ್ಲಿ ಬಿಡುಗಡೆಯಾದ ಅನುಪಮಾ ಸಿನಿಮಾದ ಹಾಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ಅನಂತ್ನಾಗ್ ಮತ್ತು ಮಾಧವಿ ಅಭಿನಯದ ಈ ಚಿತ್ರದಲ್ಲಿ ಸುಧಾರಾಣಿಯವರೂ ನಟಿಸಿದ್ದಾರೆ. ಅದರಲ್ಲಿನ ಅನುಪಮ ಚೆಲುವು ಮಿನುಗೀ ಬೆರಗಾದೇ ತೇಲಿ ಬಂದಾ.. ನಿನ್ನ ಅಂದಾ.. ಹಾಡಿಗೆ ಸೀರೆಯುಟ್ಟು ರೀಲ್ಸ್ ಮಾಡಿದ್ದಾರೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಈ ಹಾಡು ತಮ್ಮ ಫೆವರೆಟ್ ಎಂದಿರುವ ನಟಿ ಸುಧಾರಾಣಿ ಅಂದದ ಸೀರೆಯುಟ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ. ಸೀರೆಯಲ್ಲಿಯೇ ವಿವಿಧ ಭಂಗಿಗಳಲ್ಲಿ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ.
ಇಲ್ಲಿ ರಾಜರಿಗೆ ಊರವರೆಲ್ಲ ಹೆಂಡ್ತಿಯರು! ಕಾಡಿನಲ್ಲಿ ಅಲೆದಾಡ್ತಿವೆ ಅವ್ರ ಆತ್ಮ...ಡಾ.ಬ್ರೋ ಬಿಚ್ಚಿಟ್ಟ ರಹಸ್ಯ
ಈ ವಯಸ್ಸಿನಲ್ಲಿಯೂ ಇವರ ಅಂದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಲವರು ಹಾರ್ಟ್ ಇಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿಸಿದರೆ, ನೀವು ಸದಾ ನಮ್ಮ ಫೆವರೆಟ್ ಎಂದು ಹಲವರು ಹೇಳುತ್ತಿದ್ದಾರೆ. ಇಷ್ಟು ಸುಂದರವಾಗಿರುವ ನಿಮಗೆ ನಮ್ಮದೇ ದೃಷ್ಟಿಯಾಗತ್ತೆ ಮೇಡಂ ಅನ್ನುತ್ತಿದ್ದಾರೆ ಫ್ಯಾನ್ಸ್. ಇನ್ನು ಹಲವರು ಶ್ರೀರಸ್ತು ಶುಭಮಸ್ತು ಸೀರಿಯಲ್ನ ಪಾತ್ರದ ಕುರಿತು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ವಿಧವೆ ಅತ್ತೆಯೊಬ್ಬಳಿಗೆ ಸೊಸೆಯೇ ಮುಂದೆ ನಿಂತು ಮದುವೆ ಮಾಡಿಸಿದ ಬಳಿಕ ಗಂಡನ ಮನೆಯಲ್ಲಿ ಅನುಭವಿಸುವ ನೋವುಗಳ ಬಗೆಗಿನ ಈ ಧಾರಾವಾಹಿಯಲ್ಲಿ ಸುಧಾರಾಣಿಯ ಅದ್ಭುತ ಅಭಿನಯಕ್ಕೆ ಫ್ಯಾನ್ಸ್ ಮನಸೋತಿದ್ದು, ನಿಮಗೆ ನೀವೇ ಸಾಟಿ ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸುಧಾರಾಣಿಯವರ ಸಿನಿ ಪಯಣದ ಕುರಿತು ಹೇಳುವುದಾದರೆ, ಮನ ಮೆಚ್ಚಿದ ಹುಡುಗಿ, ಆಸೆಗೊಬ್ಬ ಮೀಸೆಗೊಬ್ಬ, ಸಿರಿಗಂಧ, ಪಂಚಮವೇದ, ಮನೆದೇವ್ರು, ಅರಗಿಣಿ, ಸ್ವಾತಿ, ಅವನೇ ನನ್ನ ಗಂಡ, ಮೈಸೂರು ಮಲ್ಲಿಗೆ, ಮಿಡಿದ ಶೃತಿ, ಮಹಾಕ್ಷತ್ರಿಯ, ಅನುರಾಗ ಸಂಗಮ, ದೇವತಾ ಮನುಷ್ಯ, ಜೀವನ ಚೈತ್ರ, ಮನ ಮೆಚ್ಚಿದ ಹುಡುಗಿ, ಸಮರ, ಅಸೆಗೊಬ್ಬ ಮೀಸೆಗೊಬ್ಬ ಮುಂತಾದ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಪಂಚಮವೇದ ಚಿತ್ರದ ನಟನೆಗಾಗಿ 1988ರಲ್ಲಿ ಕರ್ನಾಟಕ ರಾಜ್ಯ ಶ್ರೇಷ್ಠ ನಟಿ ಪ್ರಶಸ್ತಿ, ಮೈಸೂರು ಮಲ್ಲಿಗೆ ಚಿತ್ರದ ಪಾತ್ರಕ್ಕೆ ರಾಜ್ಯ ಹಾಗೂ ಫಿಲಂಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಲವರ್ ಇದ್ರೆ ಹೇಳಿಬಿಡು, ಮದ್ವೆ ಮಾಡಿಸ್ತೇನೆ ಅಂದೆ ಡ್ರೋನ್ಗೆ: ಪ್ರತಾಪನ ಹಾಡಿ ಹೊಗಳಿದ ಸ್ನೇಕ್ ಶ್ಯಾಮ್