Asianet Suvarna News Asianet Suvarna News

BBK9; ಕಿಚ್ಚನ ಸ್ಪೆಷಲ್ ಟ್ರೀಟ್‌ಗೆ ಬಿಗ್ ಬಾಸ್ ಸ್ಪರ್ಧಿಗಳು ಫಿದಾ

ಬಿಗ್ ಬಾಸ್ ಸೀಸನ್ 9 ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ವಿಶೇಷವಾದ ಟ್ರೀಟ್ ನೀಡಿದ್ದಾರೆ. ಕಿಚ್ಚನ ಸ್ಪೆಷಲ್ ಟ್ರೀಟ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

sudeep special treat to bigg boss kannada season 9 contestants sgk
Author
First Published Nov 19, 2022, 5:11 PM IST

ಬಿಗ್ ಬಾಸ್ ಸೀಸನ್ 9, 8ನೇ ವಾರ ಕೂಡ ಯಶಸ್ವಿಯಾಗಿ ಮುಗಿಯುತ್ತಾ ಬಂದಿದೆ. ಈ ವಾರವೂ ಸ್ಪರ್ಧಿಗಳ ನಡುವೆ ಕಿತ್ತಾಟ, ಜಗಳ, ಕೂಗಾಟ ಜೋರಾಗಿತ್ತು.  ಬಿಗ್ ಬಾಸ್ ಮನೆಯಲ್ಲಿ 7ನೇ ವಾರದ ಎಲಿಮಿನೇಷನ್ ಇರಲಿಲ್ಲ. ಹಾಗಾಗಿ 7ನೇ ವಾರ ಯಾರು ಕೂಡ ಮನೆಯಿಂದ ಹೊರಹೋಗಿಲ್ಲ. ಇದರಿಂದ 8ನೇ ವಾರ ಡಬಲ್ ಎಲಿಮಿನೇಷನ್ ಆಗುತ್ತಾ ಎಂದು ಕಾತರದಿಂದ ಕಾಯುತ್ತಿದ್ದಾರೆ ಪ್ರೇಕ್ಷಕರು. ಸ್ಪರ್ಧಿಗಳು ಸಖತ್ ಆಕ್ಟೀವ್ ಆಗಿ ಟಾಸ್ಕ್‌ಗಳನ್ನು ಮುಗಿಸಿ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಗೆ ಕಾಯುತ್ತಿದ್ದಾರೆ. ವಾರಾಂತ್ಯಕ್ಕೆ ಸುದೀಪ್ ಸ್ಪರ್ಧಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ, ಕಿವಿ ಮಾತು ಹೇಳುತ್ತಾರೆ. ಆದರೆ ಈ ವಾರ ಕಿಚ್ಚನ ಕಡೆಯಿಂದ ಸ್ಪರ್ಧಿಗಳಿಗೆ ವಿಶೇಷವಾದ ಟ್ರೀಟ್ ಸಿಕ್ಕಿದೆ. ಸುದೀಪ್ ಟ್ರೀಟ್‌ಗೆ ಸ್ಪರ್ಧಿಗಳು ಫುಲ್ ಫಿದಾ ಆಗಿದ್ದಾರೆ. 

ಅಂದಹಾಗೆ ಸುದೀಪ್ ಅದ್ಭುತವಾಗಿ ಅಡುಗೆ ಮಾಡುತ್ತಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಬಿಗ್ ಬಾಸ್ ಸೀಸನ್ ಒಂದರಲ್ಲಿ ಕಿಚ್ಚನ ಅಡುಗೆ ಸಂಚಿಕೆ ಕೂಡ ಪ್ರಸಾರವಾಗಿತ್ತು. ಅಲ್ಲದೇ ಪ್ರತಿ ಬಿಗ್ ಬಾಸ್ ಸೀಸನ್‌ನಲ್ಲೂ ಸುದೀಪ್ ಸ್ಪರ್ಧಿಗಳಿಗೆ ತಮ್ಮ ಕೈ ರುಚಿ ಮಾಡಿ ಬಡಿಸಿದ್ದಾರೆ. ಈ ಸೀಸನ್‌ನ ಸ್ಪರ್ಧಿಗಳು ಸಹ ಕಿಚ್ಚನ ಕೈ ರುಚಿ ಮಿಸ್ ಮಾಡಿಕೊಂಡಿಲ್ಲ. ಹೌದು, ಈ ವಾರಾಂತ್ಯಕ್ಕೆ ಸುದೀಪ್ ಬಗೆ ಬಗೆಯ ತಿನಿಸುಗಳನ್ನು ಮಾಡಿ ಬಿಗ್ ಮನೆಗೆ ಕಳುಹಿಸಿದ್ದಾರೆ. ಸುದೀಪ್ ಮಾಡಿದ ರುಚಿಕಟ್ಟಾದ ಆಹಾರ ತಿಂದು  ಸ್ಪರ್ಧಿಗಳು ಫುಲ್ ಖುಷ್ ಆಗಿದ್ದಾರೆ. ಸದ್ಯ ಪ್ರೋಮೋ ರಿಲೀಸ್ ಆಗಿದ್ದು ಇಂದಿನ (ನವೆಂಬರ್ 19) ಸಂಚಿಕೆಯಲ್ಲಿ ಕಿಚ್ಚನ ಕೈ ರುಚಿ ಸವಿದ ಬಿಗ್ ಬಾಸ್ ಸ್ಪರ್ಧಿಗಳ ಪ್ರತಿಕ್ರಿಯೆ ಗೊತ್ತಾಗಲಿದೆ. ಕಿಚ್ಚನ ಪ್ರೀತಿಯ ಅಡುಗೆಗೆ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ. ಸುದೀಪ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ ನೆಟ್ಟಿಗರು.

BBK9; ಗೊಂಬೆಗಾಗಿ ಬಿಗ್ ಮನೆಯಲ್ಲಿ ತಾರಕಕ್ಕೇರಿದ ಜಗಳ: ಸ್ಪರ್ಧಿಗಳ ಕಿತ್ತಾಟದ ವಿಡಿಯೋ ವೈರಲ್

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳು 

ಬಿಗ್‌ಬಾಸ್ 9 ಸೆಪ್ಟೆಂಬರ್ 24ರಿಂದ ಆರಂಭವಾಗಿದೆ. ಈ ಬಾರಿಯ ಬಿಗ್ ಬಾಸ್‌ನಲ್ಲಿ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧರಾವಾಹಿ ಖ್ಯಾತಿಯ ನಟಿ ಮಯೂರಿ, ದೀಪಿಕಾ ದಾಸ್, ನವಾಜ್,  ದಿವ್ಯಾ ಉರುಡುಗ, ದರ್ಶ್ ಚಂದ್ರಪ್ಪ, ಪ್ರಶಾಂತ್ ಸಂಬರಗಿ, ಅಮೂಲ್ಯ ಗೌಡ, ಸನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ವಿನೋದ್ ಗೊಬ್ರಗಾಲ (ಕಾಮಿಡಿ ಕಿಲಾಡಿಗಳು), ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನೇಹಾ ಗೌಡ,  ನಾನು ಅಂದ್ರೆ ನಂಬರ್, ನಂಬರ್ ಅಂದ್ರೆ ನಾನು ಎನ್ನುವ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಐಶ್ವರ್ಯಾ(ಬೈಕ್ ರೈಡರ್), ರೂಪೇಶ್ ರಾಜಣ್ಣ, ಮಂಗಳ ಗೌರಿಯ ಕಾವ್ಯಶ್ರೀ, ನಿರೂಪಕಿ ಅನುಪಮಾ ಗೌಡ ಸ್ಪರ್ಧಿಗಳಾಗಿ ಭಾಗಿಯಾಗಿದ್ದರು.

ಮನೆಯಿಂದ ಹೊರಹೋಗಿರುವ ಸ್ಪರ್ಧಿಗಳು

ಬಿಗ್ ಬಾಸ್ ಸೀಸನ್ 9ರ ಮೊದಲ ವಾರ ಐಶ್ವರ್ಯಾ ಪಿಸೆ ಮನೆಯಿಂದ ಹೊರಹೋಗಿದ್ದರು. 2ನೇ ವಾರ ನವಾಜ್ ಎಲಿಮಿನೇಟ್ ಆಗಿದ್ದಾರೆ. 3ನೇ ವಾರ ದರ್ಶ್ ಚಂದ್ರಪ್ಪ ಮನೆಯಿಂದ ಹೊರ ಹೋಗಿದ್ದಾರೆ. 4ನೇ ವಾರ ಮಯೂರಿ ಹಾಗೂ 5ನೇ ವಾರ ನೇಹಾ ಗೌಡ, 6ನೇ ವಾರ ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 12 ಮಂದಿ ಇದ್ದಾರೆ. 7ನೇ ವಾರ ಎಲಿಮಿನೇಷನ್ ಇರದ ಕಾರಣ ಯಾರ ಮನೆಯಿಂದ ಹೊರಹೋಗಿಲ್ಲ. ಈ ವಾರ ಯಾರು ಹೋಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 


 

Follow Us:
Download App:
  • android
  • ios