ಪ್ರಸ್ತುತದ ಸಂಕಟ ಹಾಗೂ ಹತಾಶೆಯ ವಾತಾವರಣದಲ್ಲಿ ನಾಳೆಗಳ ಬಗ್ಗೆ ಭರವಸೆ ಹುಟ್ಟಿಸಿ ದೈನಂದಿನ ನಮ್ಮ ಬದುಕನ್ನು ನೆಮ್ಮದಿಯಲ್ಲಿ ಕಳೆಯುವಂತೆ ಮಾಡಬಲ್ಲ ಕನ್ನಡ ನೆಲದ ಸ್ವಂತ ಕತೆಯನ್ನು ಕನ್ನಡಿಗರ ಮನೆಗಳಿಗೆ ತಲುಪಿಸುವ ಉದ್ದೇಶ ಸ್ಟಾರ್‌ ಸುವರ್ಣ ವಾಹಿನಿಯದ್ದು.

ಹದಿನಾರನೇ ಶತಮಾನದ ಮಹಾ ಶರಣ ಎಡೆಯೂರು ಶ್ರೀ ಸಿದ್ದಲಿಂಗೇಶ್ವರರ ಬದುಕು ಹಾಗೂ ಅಧ್ಯಾತ್ಮ ಸಾರುವ ಹೊಸ ಧಾರಾವಾಹಿ ಡಿ.21ರಿಂದ ರಾತ್ರಿ 8ಗಂಟೆಗೆ ಪ್ರಸಾರವಾಗಲಿದೆ. ಸಿದ್ಧಲಿಂಗೇಶ್ವರರ ಹುಟ್ಟು, ಬಾಲ್ಯ, ಪವಾಡ, ಸಾಧನೆ ಹಾಗೂ ವಚನಗಳಿಂದ ಪ್ರಾರಂಭವಾಗಿ, ಎಡೆಯೂರಿನಲ್ಲಿ ಶ್ರೀ ಸಿದ್ಧಲಿಂಗೇಶ್ವರರು ಸಜೀವ ಸಮಾಧಿಯಾಗುವವರೆಗಿನ ಸಂಪೂರ್ಣ ಚಿತ್ರಣವನ್ನು ನೋಡುಗರ ಮುಂದೆ ಈ ಧಾರಾವಾಹಿ ಅನಾವರಣಗೊಳಿಸಲಿದೆ.

'ಯಡಿಯೂರು ಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ಬಿಗ್ ಬಾಸ್ ಹರೀಶ್ ರಾಜ್! 

ಹದಿನಾರನೇ ಶತಮಾನವನ್ನು ಬಿಂಬಿಸುವ ಅದ್ದೂರಿ ಸೆಟ್‌ ಹಾಕಲಾಗಿದ್ದು ಇಲ್ಲಿ ಸಿದ್ಧಲಿಂಗೇಶ್ವರರ ಬಾಲ್ಯದ ದಿನಗಳನ್ನು ಚಿತ್ರೀಕರಿಸಲಾಗುತ್ತಿದೆ. ಈಗಾಗಲೇ ಅಮೋಘ ಸೆಟ್‌ ಮತ್ತು ಗ್ರಾಫಿಕ್ಸ್‌ನಿಂದ ಧಾರಾವಾಹಿಯ ಪ್ರೋಮೋಗಳು ಜನಪ್ರಿಯವಾಗಿವೆ.

ಅರವಿಂದ್‌ ಹಾಗೂ ಶ್ರೀನಿವಾಸ್‌ ನಂದಿ ಮೂವೀಸ್‌ ಬ್ಯಾನರ್‌ನಲ್ಲಿ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದು ಕಿರುತೆರೆಯ ಅನುಭವಿ ನಿರ್ದೇಶಕ ನವೀನ್‌ ಕೃಷ್ಣ ಅವರ ನಿರ್ದೇಶನದಲ್ಲಿ ಧಾರಾವಾಹಿ ಮೂಡಿಬರಲಿದೆ.

'ಲಕ್ಷ್ಮಿ ಬಾರಮ್ಮ' ಚಿನ್ನು ಈಗ 'ಮನಸೆಲ್ಲಾ ನೀನೇ' ಅಂತಿದ್ದಾರೆ; ಯಾರಿಗೆ ಗೊತ್ತಾ? 

ಸ್ಟಾರ್‌ ಸುವರ್ಣ ವಾಹಿನಿಯು ಕರ್ನಾಟಕದ ಮೂಲೆ ಮೂಲೆಯಲ್ಲೂ ವಿಶೇಷವಾದ ಸಿದ್ಧಿರಥದ ಮೂಲಕ ಎಡೆಯೂರು ಸಿದ್ಧಲಿಂಗೇಶ್ವರ ಮಹಿಮೆ ಸಾರಲು ಮುಂದಾಗಿದೆ. ಗಾಲಿ ಮೇಲಿನ ದೇಗುಲದ ಮೂಲಕ ಭಕ್ತರ ಮನೆ ತಲುಪಲಿದೆ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರರ ದಿವ್ಯ ಪ್ರಭೆ.

ಡಿಸೆಂಬರ್‌ 21ರಿಂದ ಸೋಮವಾರದಿಂದ ಶನಿವಾರದವರೆಗೆ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಧಾರಾವಾಹಿ ರಾತ್ರಿ 8 ಗಂಟೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.