Asianet Suvarna News Asianet Suvarna News

New Kannada Serial:'ರಾಧಾ ರಮಣ' ನಂತರ ಮತ್ತೆ ಒಂದಾದ ಸ್ಕಂದ , ಶ್ವೇತಾ!

ರಾಧಾ ರಮಣ ಆಯ್ತು. ಈಗ ಮತ್ತೆ ರೊಮ್ಯಾನ್ಸ್ ಮಾಡಲು ಬರ್ತಿದ್ದಾರೆ ರಾಧೆ ಶ್ಯಾಮ ಜೋಡಿ..... 

Star Suvarna Shwetha Skanda Ashok to play a special role in Radhe Shyama  vcs
Author
Bangalore, First Published Dec 3, 2021, 4:34 PM IST
  • Facebook
  • Twitter
  • Whatsapp

ಕನ್ನಡ ಕಿರುತೆರೆ ಜನಪ್ರಿಯ ಜೋಡಿಯಾಗಿ ಗುರುತಿಸಿಕೊಂಡಿರುವ ಸ್ಕಂದ ಅಶೋಕ್ (Skanda Ashok) ಮತ್ತು ಶ್ವೇತಾ ಪ್ರಸಾದ್ (Shwetha Prasad) ಮತ್ತೆ ಜೋಡಿಯಾಗಿ ಮತ್ತೊಂದು ಕನ್ನಡ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇಷ್ಟು ದಿನ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ (Social media) ಹೊಸ ಪ್ರಾಜೆಕ್ಟ್‌ ಬಗ್ಗೆ ಅಪ್ಡೇಟ್ ನೀಡುತ್ತಿದ್ದರು. ಆದರೆ ಯಾವುದು, ಏನು ಎಂಬುದಾಗಿ ರಿವೀಲ್ ಮಾಡಿರಲಿಲ್ಲ. ಈಗ ಅವರಿಬ್ಬರೇ  ಅನೌನ್ಸ್ ಮಾಡಿದ್ದಾರೆ. ಅಲ್ಲದೇ ಈ ಧಾರಾವಾಹಿ ಪ್ರೋಮೋ ಸಹ ಪ್ರಸಾರವಾಗುತ್ತಿದ್ದು, ವೀಕ್ಷಕರ ಕುತೂಹಲ ಹೆಚ್ಚಿಸಿದೆ. 

'ಜನರು ಅವರಿಬ್ಬರನ್ನು ತುಂಬಾನೇ ಇಷ್ಟ ಪಟ್ಟಿರುವ ಕಾರಣ ನಾನು ಮತ್ತೆ ಶ್ವೇತಾ ಮತ್ತು ಸ್ಕಂದ ಅವರನ್ನು ಆಯ್ಕೆ ಮಾಡಿಕೊಂಡಿರುವುದು. ರಾಧ ರಮಣ (Radha Ramana) ಧಾರಾವಹಿಯಲ್ಲಿ ಅವರಿಬ್ಬರಿಗೆ ಡೈರೆಕ್ಷನ್ ಮಾಡಿದ್ದೆ, ಅವರ ಜೋಡಿ ದೊಡ್ಡ ಪಾಪ್ಯುಲಾರಿಟಿ ಪಡೆದಿತ್ತು. ಹೊಸ ಧಾರಾವಾಹಿ ರಾಧೆ ಶ್ಯಾಮ ಪ್ಲ್ಯಾನ್ ಶುರು ಮಾಡಿದಾಗ ಅವರಿಬ್ಬರಿನ್ನೂ ಮತ್ತೆ ಒಂದಾಗಿ ತರಬೇಕು ಅನಿಸಿತ್ತು. ಇವರು ಒಟ್ಟಿಗೆ 6 ಎಪಿಸೋಡ್‌ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದು. ಆದರೆ ಮತ್ತೆ ದೊಡ್ಡ ಇಂಪ್ಯಾಕ್ಟ್‌ ಮಾಡಲಿದ್ದಾರೆ,' ಎಂದು ನಿರ್ದೇಶಕರಾದ ಶಿವ ಪೂಜೇನ ಅಗ್ರಹಾರ ಮಾತನಾಡಿದ್ದಾರೆ. 

ಮಳೆ ಶುರುವಾಯ್ತು, ಕಾಫಿ ತೋಟದ ಕೆಲಸದಲ್ಲಿ ಸ್ಕಂದ ಅಶೋಕ್ ಬ್ಯುಸಿ!

'ಇವರ ಜೊತೆ ಡೀಲ್ ಮಾಡಿಕೊಳ್ಳಲು ನನ್ನ ವೈಯಕ್ತಿಕ ಕಾರಣವೂ ಇದೆ. ನಾವು ಒಟ್ಟಿಗೇ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೀವಿ. ಹೀಗಾಗಿ ಸ್ಕಂದ ಮತ್ತು ಶ್ವೇತಾ ನನಗೆ ಫ್ಯಾಮಿಲಿಯೇ ಆಗಿದ್ದಾರೆ. ನನ್ನ ಮೊದಲ ವೆಂಚರ್‌ನಲ್ಲಿ ಅವರು ಇರಲೇ ಬೇಕು. ಅವರಿಬ್ಬರು ಈ ಪಾತ್ರಕ್ಕೆ ನ್ಯಾಯ ಒದಗಿಸಿಕೊಡಲಿದ್ದಾರೆ. ಶ್ವೇತಾ ಮತ್ತು ಸ್ಕಂದಾ ಅವರು ಬ್ಯಾಗ್ರೌಂಡ್ ಸ್ಟೋರಿ ಮತ್ತು ಮುಖ್ಯ ಸ್ಟೋರಿ ಒಟ್ಟಿಗೆ ಸಾಗಲಿದೆ. ಧಾರಾವಾಹಿ ಪ್ರಮುಖ ಪಾತ್ರಧಾರಿಗಳಿಗೆ ಅವರಿಬ್ಬರು ಒಂದು ಒಳ್ಳೆಯ ಸಂದೇಶ ಸಾರಲು ಬರ್ತಿದ್ದಾರೆ. ಒಳ್ಳೆಯ ಆಲೋಚನೆಗಳು ಮತ್ತು ಒಳ್ಳೆಯದನ್ನು ಯೋಚಿಸಿ, ಜೀವನವು ಅದ್ಭುತವಾಗಿರುತ್ತದೆ ಅಂತ,' ಎಂದು ಶಿವ ಅವರು ಹೇಳಿದ್ದಾರೆ. 

Star Suvarna Shwetha Skanda Ashok to play a special role in Radhe Shyama  vcs

ಸ್ಕಂದ ಜೊತೆ ಚಿತ್ರೀಕರಣ ಮಾಡುತ್ತಿರುವ ಫೋಟೋ ಹಂಚಿಕೊಂಡು 'ಏನಾಗುತ್ತಿದೆ ಎಂದು ಹೇಳಿ. ನಾನು ಮತ್ತು ರಮಣ. ಸ್ಕಂದ ಕನ್ನಡದ ಕಂದಾ,' ಎಂದು ಶ್ವೇತಾ ಬರೆದುಕೊಂಡಿದ್ದರು. ಅಭಿಮಾನಿಗಳು ಕಂಡು ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದರು. ಕೆಲವು ದಿನಗಳ ನಂತರ ಇಬ್ಬರೂ ಒಟ್ಟಿಗೆ ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧೆ ಶ್ಯಾಮದಲ್ಲಿ (Radhe Shyama) ಕಾಣಿಸಿಕೊಳ್ಳುತ್ತಿರುವುದಾಗಿ ಅನೌನ್ಸ್ ಮಾಡಿದ್ದರು. ಇದೇ ಮೊದಲ ಬಾರಿ ಶ್ವೇತಾ ಆನ್‌ಸ್ಕ್ರೀನ್‌ನಲ್ಲಿ ತುಂಬಾನೇ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು. ಸ್ಕಂದ ಹಾಗೆಯೇ ತಮ್ಮ ಒರಿಜಿನಲ್ ಚಾರ್ಮ್ ಉಳಿಸಿಕೊಂಡಿದ್ದಾರೆ. 

ಬಾಲಿವುಡ್‌ನಲ್ಲಿ ಶಿಲ್ಪಾ, ಸ್ಯಾಂಡಲ್‌ವುಡ್‌ನಲ್ಲಿ ಶ್ವೇತಾ; 'ಇದೆಂತಾ ಹೇರ್‌ ಸ್ಟೈಲ್?'

ರಾಧಾ ರಮಣ ಧಾರಾವಾಹಿ ನಂತರ ಶ್ವೇತಾ ಯಾವ ಪ್ರಾಜೆಕ್ಟ್ ಒಪ್ಪಿಕೊಂಡಿರಲಿಲ್ಲ. ಕೆಲವೊಂದು ರಿಯಾಲಿಟ ಶೋ ಹೊರತು ಪಡಿಸಿದರೆ, ಮೇಕಪ್ ಆರ್ಟಿಸ್ಟ್ ಮತ್ತು ಬ್ರ್ಯಾಂಡ್‌ಗಳ ಜೊತೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದರು. ಆನಂತರ ತಮ್ಮದೇ Organic ಮತ್ತು ನ್ಯಾಚುರಲ್‌ ವಸ್ತುಗಳನ್ನು ಮಾರಾಟ ಮಾಡಲು ವಿತ್ ಲವ್ ಸ್ಟೋರ್ ಎಂಬ ವೆಬ್‌ಸೈಟ್ ಆರಂಭಿಸಿದ್ದರು.  ಸೆಲೆಬ್ರಿಟಿ ಅಂದ್ಮೇಲೆ ಬದಲಾವಣೆ ಡಿಮ್ಯಾಂಡ್ ಮಾಡುವುದು ಕಾಮನ್. ಹೀಗಾಗಿ ವಿಭಿನ್ನ ಹೇರ್ ಸ್ಟೈಲ್ ಮಾಡಿಸಿಕೊಂಡು ಕ್ರೇಜ್ ಆಗಿ ಸುದ್ದಿ ಆಗಿದ್ದರು. ಕುತ್ತಿಗೆ ಭಾಗದಲ್ಲಿ ಶೇವ್ ಮಾಡಿಸಿಕೊಂಡು, ಕ್ರಿಸ್‌ಕ್ರಾಸ್‌ ಕಟ್ ಮಾಡಿಸಿಕೊಂಡಿದ್ದರು. 

ಇನ್ನು ರಮಣ ಅಲಿಯಾಸ್ ಸ್ಕಂದ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಾಧಾ ರಮಣ ನಂತರ ಸರಸು ಧಾರಾವಾಹಿಯಲ್ಲಿ ನಟಿಸಿದ್ದರು. ಜೊತೆಗೆ ಕುಟುಂಬಕ್ಕೆ ಮುದ್ದಾದ ಹೆಣ್ಣು ಮಗುವನ್ನು ಬರ ಮಾಡಿಕೊಂಡರು. ಮಗಳಿಗೆ ಒಂದು ವರ್ಷ ಆಗುತ್ತಿದ್ದಂತೆ ಮಾಲ್ಡೀವ್ಸ್ (Maldives) ಟ್ರಿಪ್ ಮಾಡಿ ಅಲ್ಲಿಯೇ ಫೋಟೋಶೂಟ್ ಮತ್ತು ಕೇಕ್‌ ಕಟ್ಟಿಂಗ್ ಮಾಡಿದ್ದರು. ಕಾರಣಾಂತರಗಳಿಂದ ಸರಸು (Sarasu) ಧಾರಾವಾಹಿ ಅರ್ಧಕ್ಕೇ ನಿಂತಾಗ ತಮ್ಮ ಹುಟ್ಟೂರಿನಲ್ಲಿರುವ ಕಾಫಿ ತೋಟಕ್ಕೆ ಭೇಟಿ ನೀಡಿ ಅಲ್ಲಿನ ಸಣ್ಣ ಪುಟ್ಟ ಕೆಲಸ ಮಾಡುತ್ತಿರುವುದಾಗಿ ಹಂಚಿಕೊಂಡಿದ್ದರು. ಮಧ್ಯೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಧಾರಾವಾಹಿಯಲ್ಲಿಯೂ ಕೆಲವು ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡಿದ್ದರು. 

ಇಬ್ಬರು ಡಿಫರೆಂಟ್ ಆಗಿ ಬ್ಯುಸಿಯಾಗಿರುವ ಸಮಯದಲ್ಲಿ ವೀಕ್ಷಕರಿಗಾಗಿ ಇವರನ್ನು ಮತ್ತೆ ಒಟ್ಟಿಗೆ ಇರುತ್ತಿರುವ ನಿರ್ದೇಶಕರಿಗೆ ಫ್ಯಾನ್ ಪೇಜ್‌ಗಳು ಧನ್ಯವಾಗಳನ್ನು ತಿಳಿಸಿವೆ.

 

Follow Us:
Download App:
  • android
  • ios