Asianet Suvarna News Asianet Suvarna News

ನಟಿ ಸುಪ್ರೀತಾ ಸತ್ಯನಾರಾಯಣ್‌ಗೆ ಕೊರೋನಾ ಪಾಸಿಟಿವ್; ಗೌಪ್ಯವಾಗಿಡಲು ಕಾರಣ ಇಷ್ಟೆ!

'ಸರಸು' ನಟಿ ಸುಪ್ರೀತಾ ಕ್ವಾರಂಟೈನ್‌ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯಾರಿಗೂ ಹೇಳದೆ ಸುಮ್ಮನಿರಲು ಕಾರಣವೇನು? 
 

Star Suvarna Sarsu fame Supritha recovers from covid19 says to stay positive  vcs
Author
Bangalore, First Published May 1, 2021, 3:29 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸರಸು' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಸುಪ್ರೀತಾ ಸತ್ಯನಾರಾಯಣ್‌ಗೆ ಕೊರೋನಾ ಸೋಂಕು ತಗುಲಿತ್ತು. ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದ ನಟಿ ವೈದ್ಯರ ಸಲಹೆ ಹಾಗೂ ಔಷಧಿಯನ್ನು ತೆಗೆದುಕೊಂಡು ಗುಣಮುಖರಾಗಿದ್ದಾರೆ. 15 ದಿನಗಳ ಐಸೋಲೇಷನ್‌ ಹೇಗಿತ್ತು ಎಂದು ಖಾಸಗಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. 

‘ಸೀತಾವಲ್ಲಭ’ ಗುಬ್ಬಿ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ! 

'ನನ್ನ ಜೀವನದ ತುಂಬಾ ಕಷ್ಟಕರವಾದ 15 ದಿನಗಳು ಇದಾಗಿತ್ತು. ಆದರೆ ನಾನು ಆದಷ್ಟು ಸ್ಟ್ರಾಂಗ್ ಹಾಗೂ ಪಾಸಿಟಿವ್ ಆಗಿದ್ದೆ. ಅರಂಭದಲ್ಲಿ ನನಗೆ ತಲೆ ನೋವು, ಮೈಕೈ ನೋವು ಮತ್ತು ಜ್ವರ ಇತ್ತು. ವಾಸನೆ ಕಂಡು ಹಿಡಿಯಲು ಆಗುತ್ತಿರಲಿಲ್ಲ.ಕೆಲ ದಿನಗಳು ಹೀಗಿದ್ದ ಕಾರಣ ನನಗೆ ಆಸ್ಪತ್ರೆ ಅವಶ್ಯಕತೆ ಇರಲಿಲ್ಲ. ವೈದ್ಯರು ಕೊಟ್ಟ ಮಾತ್ರೆ ಸೇವಿಸುತ್ತಿದ್ದೆ. ಬಿಸಿ ನೀರಿನ ಶಾಖ ತೆಗೆದುಕೊಳ್ಳುತ್ತಿದ್ದೆ. ಮನೆಯಲ್ಲಿಯೇ ಮಾಡಿದ ಕಷಾಯ ಸೇವಿಸುತ್ತಿದ್ದೆ. ಈ 15 ದಿನದಲ್ಲಿ ಅನೇಕ ಪುಸ್ತಕಗಳನ್ನು ಓದಿರುವೆ, ಸಿನಿಮಾ ನೋಡಿದ್ದೀನಿ ಹಾಗೂ ಪೇಂಟಿಂಗ್ ಮಾಡುತ್ತಿದ್ದೆ' ಎಂದು ಸುಪ್ರೀತಾ ಹೇಳಿದ್ದಾರೆ.

Star Suvarna Sarsu fame Supritha recovers from covid19 says to stay positive  vcs

ಯಾರಿಗೂ ಹೇಳಿಲ್ಲ ಯಾಕೆ?

ಸುಪ್ರೀತಾ ಗುಣಮುಖರಾದ ನಂತರ ಅನೇಕರಿಗೆ ಸುಪ್ರೀತಾ ಆರೋಗ್ಯ ಸ್ಥಿತಿ ಬಗ್ಗೆ ತಿಳಿಯಿತು. ಯಾಕೆ ಮೇಡಂ ಕೊರೋನಾ ಎಂದು ಪೋಸ್ಟ್ ಹಾಕಿಲ್ಲ ಯಾರಿಗೂ ತಿಳಿಸಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 'ಸೋಷಿಯಲ್ ಮೀಡಿಯಾದಲ್ಲಿ ಕೊರೋನಾ ಬಗ್ಗೆ ಈಗಾಗಲೇ ಸಾಕಷ್ಟು ನೆಗೆಟಿವ್ ವಿಚಾರಗಳು ಹರಿದಾಡುತ್ತಿದೆ. ನಾನು ಯಾರೆಲ್ಲಾ ಸಂಪರ್ಕದಲ್ಲಿನೋ ಅವರಿಗೆ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿದೆ. ಇದನ್ನು ಹೀಗೆ ನಿರ್ಲಕ್ಷ್ಯ ಮಾಡಲು ಆಗುವುದಿಲ್ಲ. ಯುರೋಪ್‌ನಲ್ಲಿ ಈಗಾಗಲೇ ಮೂರನೇ ಅಲೆ ನೋಡುತ್ತಿದ್ದಾರೆ. ನಮ್ಮ ಶೂಟಿಂಗ್ ಆರಂಭವಾಗುತ್ತಿದ್ದಂತೆ ನಾವು ಏನೆಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತೀರ್ಮಾನ ಮಾಡಬೇಕಿದೆ. ಕೆಲವೊಂದು ಸಂಶೋಧನೆಗಳು ಹೇಳಿರುವ ಪ್ರಕಾರ ಎರಡನೇ ಅಲೆ ದೊಡ್ಡ ಪರಿಣಾಮ ಬೀರಲಿದೆ' ಎಂದು ಸುಪ್ರೀತಾ ಮಾತನಾಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios