ಮಧುರ ದಾಂಪತ್ಯಕ್ಕೆ ಉದಾಹರಣೆಯಾಗಿದ್ದ ಮುದ್ದುಲಕ್ಷ್ಮಿ ಹಾಗೂ ಧೃವಂತ್‌ ದಂಪತಿಗಳು ಬೇರೆಯಾಗಿ ಸಾಕಷ್ಟುಸಮಯವಾಗಿದೆ. ಆದರೆ ಬದುಕು ಗಂಡ-ಹೆಂಡತಿ ಇಬ್ಬರಿಗೂ ಈಗ ಮತ್ತೆ ಒಂದಾಗುವ ಅವಕಾಶ ಕಲ್ಪಿಸಿದೆ. ಆದರೆ ಮತ್ತೊಮ್ಮ ಇವರಿಬ್ಬರ ಬದುಕಲ್ಲಿ ಮುಳ್ಳಾಗಲಿದ್ದಾಳೆ ಶಾರ್ವರಿ. ಮುದ್ದು ಲಕ್ಷ್ಮಿ ಹಾಗೂ ಧೃವಂತ್‌ ಒಂದಾಗಲಿದ್ದಾರೆ ಎಂಬ ಸತ್ಯ ಗೊತ್ತಾಗುತ್ತಿದ್ದ ಹಾಗೆ- ಮುದ್ದುಲಕ್ಷ್ಮಿಯ ಮಗಳು ದೃಷ್ಟಿಯನ್ನು ಕಿಡ್ನಾಪ್‌ ಮಾಡುವ ಶಾರ್ವರಿ, ಲಕ್ಷ್ಮಿಯನ್ನು ಬ್ಲ್ಯಾಕ್‌ಮೇಲ್‌ ಮಾಡಿ ಮುದ್ದುಲಕ್ಷ್ಮಿ- ಧೃವಂತ್‌ ಒಂದಾಗದ ಹಾಗೆ ತಂತ್ರ ಮಾಡುತ್ತಾಳೆ. ಆದರೆ ಕಿಡ್ನಾಪ್‌ ಆದ ದೃಷ್ಟಿಪ್ರೇಮಲೋಕದ ನಾಯಕ ಸೂರ್ಯನಿಗೆ ಸಿಗುತ್ತಾಳೆ. ದೃಷ್ಟಿಯನ್ನು ಮುದ್ದುಲಕ್ಷ್ಮಿಗೆ ವಾಪಾಸು ತಲುಪಿಸುವ ಪ್ರಯತ್ನ ಮಾಡಿ ತಾನೇ ದೊಡ್ಡ ಸಂಕಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾನೆ ಸೂರ್ಯ. ಅಂತಿಮವಾಗಿ ಶಾರ್ವರಿ ಶಕುನಿ ತಂತ್ರಗಾರಿಕೆ ಪ್ರಯೋಗ ಮಾಡಿ ಎಲ್ಲಾ ಅಡೆತಡೆಗಳನ್ನು ದಾಟಿ ಮುದ್ದು ಬದುಕಿಗೆ ಮುಂಚಿಗಿಂತಲೂ ದೊಡ್ಡ ಸಮಸ್ಯೆಯಾಗಿ ಕಾಡುತ್ತಾಳೆ.

ಕಿರುತೆರೆ ಕಪ್ಪು ಸುಂದರಿಯ ಬದುಕು!

ಸ್ವಾಭಿಮಾನ ಮತ್ತು ಆದರ್ಶವನ್ನೇ ಉಸಿರಾಡುವ ಪಾತ್ರ ಮುದ್ದುಲಕ್ಷ್ಮಿ. ಪ್ರತಿ ಹೆಣ್ಣು ಜೀವನದ ಒಂದು ಹಂತದಲ್ಲಿ ಲಕ್ಷ್ಮಿಯ ಪಾತ್ರಕ್ಕೆ ಕನೆಕ್ಟ್ ಆಗುತ್ತಾಳೆ. ಬದುಕಿನ ಪ್ರತಿ ಸಂಕಟವನ್ನೂ ಪ್ರಾಮಾಣಿಕತೆಯ ಮೂಲಕ ಗೆಲ್ಲಬಹುದು ಎನ್ನುವ ನಂಬಿಕೆ ಮಹಾಸಂಗಮದಲ್ಲಿ ಇನ್ನಷ್ಟುಗಟ್ಟಿಯಾಗಲಿದೆ.- ಅಶ್ವಿನಿ

ಹಾಗಾದರೆ ಮುದ್ದುಲಕ್ಷ್ಮಿ ಹಾಗೂ ಧೃವಂತ್‌ ಒಂದಾಗುವ ದಾರಿ ಯಾವುದು? ಪ್ರೇಮಲೋಕದ ನಾಯಕ ಸೂರ್ಯ ಹಾಗೂ ನಾಯಕಿ ಪ್ರೇರಣಾ, ಮುದ್ದು ಲಕ್ಷ್ಮಿ ಬದುಕಿಗೆ ಹೇಗೆ ಸಹಾಯ ಮಾಡುತ್ತಾರೆ? ಸಹಾಯ ಮಾಡಲು ಹೊರಟ ಜೋಡಿ ಎದುರಿಸುವ ಸಂಕಟವೇನು? ಅಂತಿಮವಾಗಿ ಗೆಲುವು ಯಾರದ್ದು? ಈ ಎಲ್ಲಾ ಸಂಗತಿಗಳಿಗೆ ಒಂದು ವಾರ ಪ್ರಸಾರವಾಗುವ ಮಹಾಸಂಗಮದಲ್ಲಿ ಉತ್ತರ ಸಿಗಲಿದೆ.

ಧಾರಾವಾಹಿಗಳಲ್ಲಿ ನಾಯಕನ ಪಾತ್ರವೊಂದು ಎರಡು ವಿಭಿನ್ನ ಶೇಡ್‌ನಲ್ಲಿ ಜನರ ಮನಸ್ಸಲ್ಲಿ ಶಾಶ್ವತವಾಗಿ ನೆಲೆಸುವುದು ಅಪರೂಪ. ಧೃವಂತ್‌ ಪಾತ್ರದ ವಿಶೇಷವೇ ಅದು. ಮಹಾಸಂಗಮದಲ್ಲಿ ನೋಡುಗರಿಗೆ ತುಂಬ ಇಷ್ಟವಾಗುವ ವ್ಯಕ್ತಿತ್ವದ ಧೃವಂತ್‌ ನಿಮ್ಮ ಮುಂದೆ ಅನಾವರಣಗೊಳ್ಳಲಿದ್ದಾನೆ.- ಚರಿತ್‌ ಬಾಳಪ್ಪ

ಮುದ್ದುಲಕ್ಷ್ಮಿ ಮತ್ತು ಪ್ರೇಮಲೋಕದ ಮಹಾಸಂಗಮದಿಂದ ಕಿರುತೆರೆ ವೀಕ್ಷಕರಿಗೆ ಎರಡು ಧಾರಾವಾಹಿಗಳ ದುಪ್ಪಟ್ಟು ಮನರಂಜನೆ ಸವಿಯುವ ಅವಕಾಶ. ಮಹಾಸಂಗಮದ ಮೂಲಕ ವೀಕ್ಷಕರ ಕುತೂಹಲ ಮತ್ತು ಅಚ್ಚರಿಯನ್ನು ಹೆಚ್ಚಿಸುವ ಪ್ರಯತ್ನ ವಾಹಿನಿಯದ್ದು. ಮಹಾಸಂಗಮದ ಸಂಚಿಕೆಗಳು ಜನವರಿ 27ರಿಂದ ಫೆ.1ರವರೆಗೆ ರಾತ್ರಿ 7.30ರಿಂದ 8.30ರವರೆಗೆ ಪ್ರಸಾರವಾಗಲಿದೆ.

‘ಪ್ರೇಮಲೋಕ’ ಕ್ಕೆ ಮಲ್ಲಿಕಾ ಎಂಬ ಮೋಹಕ ಚೆಲುವೆ ಎಂಟ್ರಿ!

ಮುದ್ದುಲಕ್ಷ್ಮಿಯ ಕಥೆ ಪ್ರೇಮಲೋಕದಲ್ಲಿ ಸೇರಿ ಒಂದು ಕುತೂಹಲಕಾರಿ ತಿರುವಿನೊಂದಿಗೆ ನೋಡುಗರನ್ನು ರಂಜಿಸಲಿದೆ. ಮಹಾಸಂಗಮದಲ್ಲಿ ನನ್ನ ಪಾತ್ರ ಮುದ್ದುಲಕ್ಷ್ಮಿ ಬದುಕಿನ ಮಹತ್ವದ ಬದಲಾವಣೆಯೊಂದಕ್ಕೆ ಕಾರಣವಾಗಲಿದೆ.- ವಿಜಯ್‌ ಸೂರ್ಯ