ಧಾರಾವಾಹಿಯಾಗಿ ಮೂಡಿ ಬರಲಿದೆ ಜನಪ್ರಿಯ ಕಾದಂಬರಿ. ಸಿಂದೂರು, ಸಕಲೇಶಪುರದಲ್ಲಿ ಚಿತ್ರೀಕರಣ ಮುಕ್ತಾಯ  

ಲೇಖಕ, ಪತ್ರಕರ್ತ ರವಿಬೆಳಗೆರೆ ಅವರ ಬಹು ಜನಪ್ರಿಯ ಪ್ರೇಮ ಕಾದಂಬರಿ ‘ಹೇಳಿ ಹೋಗು ಕಾರಣ’ ಶೀಘ್ರದಲ್ಲೇ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಧಾರಾವಾಹಿಯಾಗಿ ಮೂಡಿ ಬರಲಿದೆ.

ಹಿಮವಂತ, ಪ್ರಾರ್ಥನಾ, ಊರ್ಮಿಳಾ ಪಾತ್ರಗಳ ತ್ರಿಕೋನ ಪ್ರೇಮದ ಕತೆಯುಳ್ಳ ಜನಪ್ರಿಯ ಕಾದಂಬರಿ ‘ಹೇಳಿ ಹೋಗು ಕಾರಣ’ ಕಾದಂಬರಿ ಆಧರಿಸಿದ ಧಾರಾವಾಹಿಯನ್ನು ಕೋರಮಂಗಲ ಅನಿಲ್‌ ನಿರ್ದೇಶನ ಮಾಡುತ್ತಿದ್ದಾರೆ. ಗುರುಪ್ರಸಾದ್‌ ಎಲೆಕೊಪ್ಪ ಛಾಯಾಗ್ರಾಹಣ ಮಾಡುತ್ತಿದ್ದು, ಚೇತನ್‌ ಆರ್‌ ನಿರ್ಮಿಸುತ್ತಿದ್ದಾರೆ. ನಿರ್ದೇಶಕ ರಾಘವ ದ್ವಾರ್ಕಿ ಚಿತ್ರಕತೆ, ಸಂಭಾಷಣೆ ಬರೆಯುತ್ತಿದ್ದಾರೆ.

ದೊಡ್ಡ ಪ್ರಾಜೆಕ್ಟ್‌ನೊಂದಿಗೆ ಕಿರುತೆರೆಗೆ ಸೂರಜ್ ಹೊಳಲು ಕಮ್‌ಬ್ಯಾಕ್!

ಈಗಾಗಲೇ ಸಕಲೇಶಪುರ, ಸಿಗಂದೂರು ಮುಂತಾದ ಕಡೆ ಈಗಾಗಲೇ ಚಿತ್ರೀಕರಣ ಆಗಿದೆ. ಹಸಿರು, ಮಳೆ, ಮಂಜು, ಹಿತವಾದ ಸಂಭಾಷಣೆಗಳೊಂದಿಗೆ ಧಾರಾವಾಹಿಯ ಪಾತ್ರಧಾರಿಗಳಾದ ಹಿಮವಂತ ಹಾಗೂ ಪ್ರಾರ್ಥನಾಳ ದೃಶ್ಯಗಳು ಮೂಡಿ ಬಂದಿರುವುದು ಪ್ರೋಮೋಗಳ ಹೈಲೈಟ್‌. ಸುರೇಂದ್ರನಾಥ್‌ ಸಂಗೀತ ನೀಡಿದ್ದಾರೆ.

ತಾರಾಗಣದಲ್ಲಿ ಹಿಮವಂತನ ಪಾತ್ರದಲ್ಲಿ ಸೂರಜ್‌, ಪ್ರಾರ್ಥನಾ ಪಾತ್ರದಲ್ಲಿ ರಕ್ಷಾ ನಟಿಸುತ್ತಿದ್ದಾರೆ. ಉಳಿದಂತೆ ಮೆರಿನಾ ತಾರಾ, ಸಿಂಧುಶ್ರೀ, ಲಕ್ಷ್ಮಣ್‌ ಮುಂತಾದವರು ನಟಿಸಿದ್ದಾರೆ. ಊರ್ಮಿಳಾ ಹಾಗೂ ದೇಬಶಿಶ್‌ ಪಾತ್ರಗಳಿಗೆ ಕಲಾವಿದರ ಆಯ್ಕೆ ನಡೆಯಬೇಕಿದೆ.