Asianet Suvarna News Asianet Suvarna News

ಕರ್ನಾಟಕದ 'ಜಲ ಸಂಕಷ್ಟ'ಪರಿಹಾರಕ್ಕೆ ಸಾಥ್ ನೀಡಿದ ಸ್ಟಾರ್ ಸುವರ್ಣ; ಉಚಿತ ಜಲ ವಿತರಣೆ!

ಕರುನಾಡಲ್ಲಿ ನೀರಿನ ಬರದ ಬಿಸಿ ತಟ್ಟಿದ್ದು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಸುವರ್ಣ ವಾಹಿನಿಯು ತಮ್ಮ 'ಸುವರ್ಣ ಸಂಕಲ್ಪ' ಕಾರ್ಯಕ್ರಮದ ಮೂಲಕ ವಿದ್ವಾನ್ ಡಾ|| ಗೋಪಾಲಕೃಷ್ಣ ಗುರೂಜಿಯವರ ನೇತೃತ್ವದಲ್ಲಿ 'ಜಲ ಸಂಕಷ್ಟಕ್ಕೆ ಸುವರ್ಣ ಸಂಕಲ್ಪ' ಎಂಬ ಬರಹದಡಿ..

Star Suvarna Channel distributes water in many areas in Bangalore through Suvarna Sankalpa programme srb
Author
First Published Mar 27, 2024, 1:52 PM IST

ಕರ್ನಾಟಕದ ಬಹಳಷ್ಟು ಕಡೆ ಕುಡಿಯುವ ನೀರಿಗೂ ಸಾಕಷ್ಟು ಪರದಾಟ ಅನುಭವಿಸುತ್ತಿರುವುದು ಬಹುತೇಕ ಎಲ್ಲರಿಗೂ ಗೊತ್ತು. ಬೆಂಗಳೂರಿನ ಕೆಲವು ಕಡೆಗಳು ಸೇರಿದಂತೆ ರಾಜ್ಯದ ಬಹಳಷ್ಟು ಕಡೆ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. ಕೆಲವು ರಾಜಕೀಯ ಪಕ್ಷಗಳು, ರಾಜಕೀಯ ನಾಯಕರು, ಹಲವು ಸಂಘ-ಸಂಸ್ಥೆಗಳೂ ಸೇರಿದಂತೆ ನೀರಿನ ಸಮಸ್ಯೆಯ ಪರಿಹಾರಕ್ಕೆ ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಇದೀಗ ಕರ್ನಾಟಕದಲ್ಲಿ ಮನೆಮಾತಾಗಿರುವ ಮನರಂಜನಾ ವಾಹಿನಿ 'ಸ್ಟಾರ್ ಸುವರ್ಣ' (Star Suvarna) ಸಹ ಈ ದಿಸೆಯಲ್ಲಿ ಸಾಥ್ ನೀಡುತ್ತಿದೆ. 

ಕನ್ನಡ ಕಿರುತೆರೆಯಲ್ಲಿ ಸದಾ ಹೊಸತನದ ಛಾಪು ಮೂಡಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿ, ಇದೀಗ ಜನರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚುವ ಮೂಲಕ ಸಮಾಜಮುಖಿ ಕಾರ್ಯದ ಮೂಲಕವೂ ಜನಮೆಚ್ಚುಗೆ ಗಳಿಸುತ್ತಿದೆ. ಜನರು ಕುಡಿಯುವ ನೀರಿಗಾಗಿ ಭಾರೀ ಪರದಾಟ ಅನುಭವಿಸುತ್ತಿದ್ದು, ಅದೆಷ್ಟೋ ಮೂಲಗಳಿಂದ ಸಹಾಯ ಪಡೆಯುತ್ತಿದ್ದಾರೆ. ಆದರೆ, ಅದು 'ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ' ಎಂಬಂತೆ ಆಗಿದ್ದು, ಇದೀಗ ಈ ನಿಟ್ಟಿನಲ್ಲಿ ಸ್ಟಾರ್ ಸುವರ್ಣ ವಾಹಿನಿ ಕೈ ಜೋಡಿಸುವ ಮೂಲಕ ಹಲವರ ಮುಖದಲ್ಲಿ ಮುಗುಳ್ನಗು ಮೂಡಲು ನೆರವಾಗಿದೆ.

ಸಿನಿಮಾ ನಟ ಮಾತ್ರ ಹೀರೋ ಅಲ್ಲ, ಯಾರಾದ್ರೂ ಆಗಬಹುದು; ಯಾಕೆ ಹೀಗಂದ್ಬಿಟ್ರು ರಾಮ್‌ ಚರಣ್?

ಕರುನಾಡಲ್ಲಿ ನೀರಿನ ಬರದ ಬಿಸಿ ತಟ್ಟಿದ್ದು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಸುವರ್ಣ ವಾಹಿನಿಯು ತಮ್ಮ 'ಸುವರ್ಣ ಸಂಕಲ್ಪ' ಕಾರ್ಯಕ್ರಮದ ಮೂಲಕ ವಿದ್ವಾನ್ ಡಾ|| ಗೋಪಾಲಕೃಷ್ಣ ಗುರೂಜಿಯವರ ನೇತೃತ್ವದಲ್ಲಿ 'ಜಲ ಸಂಕಷ್ಟಕ್ಕೆ ಸುವರ್ಣ ಸಂಕಲ್ಪ' ಎಂಬ ಬರಹದಡಿ ಹೊಸ ಅಭಿಯಾನಕ್ಕೆ ಕೈ ಹಾಕಿದೆ. 

'ವಿದ್ಯಾಪತಿ'ಗೆ ಕಿಕ್ ಸ್ಟಾರ್ಟ್; ಹೊಸ ಅವತಾರದಲ್ಲಿ ನಾಗಭೂಷಣ್-ರಂಗಾಯಣ ರಘು

ಪ್ರಸ್ತುತ ಬೆಂಗಳೂರಿನಲ್ಲಿ ನೀರಿನ ಅಭಾವವಿರುವ  ಒಂದಷ್ಟು ಪ್ರದೇಶಗಳಾದ ಅಂದ್ರಹಳ್ಳಿ, ವಿದ್ಯಾಮಾನ ನಗರ್, ಚಕ್ರನಗರ, ವಾಲ್ಮೀಕಿ ನಗರ, ಬಸವಣ್ಣ ದೇವಸ್ಥಾನ ಸರ್ಕಲ್, ಸುಂಕದಕಟ್ಟೆ, ಮಾಗಡಿ ರೋಡ್, ಶ್ರೀಗಂಧ ಕಾವಲ್, ಭೈರವೇಶ್ವರ ನಗರ ಹಾಗು ವಿಘ್ನೇಶ್ವರ ನಗರ ಸೇರಿದಂತೆ ಇನ್ನು ಹಲವು  ಪ್ರದೇಶಗಳಿಗೆ, ಅಲ್ಲಿರುವ ಜನರಿಗೆ ಸ್ಟಾರ್ ಸುವರ್ಣದ ವತಿಯಿಂದ ಉಚಿತ ನೀರನ್ನು ವಿತರಿಸಲಾಗುತ್ತಿದೆ.

ಸೆಟ್ಟೇರಿತು ಬುಚ್ಚಿಬಾಬು-ರಾಮ್ ಚರಣ್ ಜೋಡಿ ಸಿನಿಮಾ; ಬಲಗಾಲಿಟ್ಟು ಬಂದ್ರು ಜಾಹ್ನವಿ ಕಪೂರ್

ಸ್ಟಾರ್ ಸುವರ್ಣ ವಾಹಿನಿ ಕಡೆಯಿಂದ ಇಲ್ಲಿವರೆಗೆ 3,65,500 ಲೀಟರ್ ಗಿಂತಲೂ ಅಧಿಕ ನೀರನ್ನು ಜನರಿಗೆ ವಿತರಿಸಲಾಗಿದ್ದು, ಪ್ರತಿದಿನ 60,000 ಲೀಟರ್‌ಗೂ ಅಧಿಕ ನೀರನ್ನು ಜನರಿಗೆ ತಲುಪಿಸುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ನೀರಿನ ಸಮಸ್ಯೆ ಹೊಂದಿರುವ ಪ್ರದೇಶದಲ್ಲಿರುವ ಜನರಿಗೆ ನೀರನ್ನು ತಲುಪಿಸುವ ಗುರಿಯನ್ನು ಸ್ಟಾರ್ ಸುವರ್ಣ ಚಾನೆಲ್ ಹೊಂದಿದೆ. ಈ ಮೂಲಕ ಜನಸಾಮಾನ್ಯರ ಕಷ್ಟಕ್ಕೆ ಕರಗಿ, ಸಹಾಯ ಹಸ್ತ ಚಾಚಲು ಮುಂದಾಗಿದೆ ಸ್ಟಾರ್ ಸುವರ್ಣ. 

Follow Us:
Download App:
  • android
  • ios