ಅಕ್ಟೋಬರ್‌ 12ರಿಂದ ಪ್ರತಿದಿನ ಬೆಳಗ್ಗೆ 7.30ಕ್ಕೆ ಮುಂಜಾವನ್ನು ಸುಂದರಗೊಳಿಸಲು ‘ಸುವರ್ಣ ಸಂಕಲ್ಪ’ ಶುರುವಾಗುತ್ತಿದೆ. ಜ್ಯೋತಿಷ್ಯ, ಯೋಗ, ಮುದ್ರಾ, ಸಂಜೀವಿನಿ ಸಂಕಲ್ಪ, ಗೀತ ಸಾರ, ಗೃಹಿಣಿ ಗುಟ್ಟು ಹೀಗೆ ಆತ್ಮ, ದೇಹ ಮತ್ತು ಮನಸ್ಸನ್ನು ಮುದಗೊಳಿಸುವ ಕಾರ್ಯಕ್ರಮ ಸುವರ್ಣ ಸಂಕಲ್ಪ. ಡಾ. ಬ್ರಹ್ಮಶ್ರೀ ಗೋಪಾಲ ಶರ್ಮ ಗುರುಗಳ ಮಾರ್ಗದರ್ಶನದೊಂದಿಗೆ, ಪ್ರೀತಿ ಶ್ರೀನಿವಾಸ್‌ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸ್ಟಾರ್ ಸುವರ್ಣ 'ರಾಧಾಕೃಷ್ಣ' ಧಾರಾವಾಹಿಯ ಮಹಾ ತಿರುವು! 

ಅಕ್ಟೋಬರ್‌ 19ರಂದು ಪ್ರಾರಂಭವಾಗಲಿರುವ ಮತ್ತೊಂದು ಕಾರ್ಯಕ್ರಮ ಬೊಂಬಾಟ್‌ ಭೋಜನ. ಮಧ್ಯಾಹ್ನ 12ಗಂಟೆಗೆ ಕಲಾವಿದ ಮತ್ತು ಪಾಕ ಪ್ರವೀಣ ಸಿಹಿ ಕಹಿ ಚಂದ್ರು ಮತ್ತೊಮ್ಮೆ ಬೊಂಬಾಟ್‌ ಭೋಜನ ಬಡಿಸಲಿದ್ದಾರೆ. ನವರಾತ್ರಿಯ ಆರಂಭದ ಜೊತೆ ಸಿಹಿ ಕಹಿ ಚಂದ್ರು ಅವರ ರಸಗವಳ ಕೂಡ ಸಿದ್ಧವಾಗುತ್ತಿದೆ. ನವರಾತ್ರಿ ವಿಶೇಷವಾಗಿ ಜನಪ್ರಿಯ ತಾರೆಯರು ಚಂದ್ರು ಅವರಿಗೆ ಅಡುಗೆ ಮನೆಯಲ್ಲಿ ಜೊತೆಯಾಗಲಿದ್ದಾರೆ. ಅನುಪಮ ಗೌಡ, ಹರ್ಷಿಕಾ ಪೂಣಚ್ಚ, ನೇಹಾ ಗೌಡ, ವನಿತಾ ವಾಸು, ಕೃಷಿ ತಾಪಂಡ, ಕಾರುಣ್ಯ ರಾಮ್‌ ಸಿಹಿ ಕಹಿ ಚಂದ್ರು ಅವರ ಜೊತೆ ನವರಾತ್ರಿಯಲ್ಲಿ ಬೊಂಬಾಟ್‌ ಭೋಜನ ತಯಾರಿಸಲಿದ್ದಾರೆ.

 

ನವರಾತ್ರಿ ಹೊರತಾಗಿ ಬೊಂಬಾಟ್‌ ಭೋಜನದಲ್ಲಿ ಹಲವು ವಿಶೇಷತೆಗಳಿದ್ದು, ಚಂದ್ರು ಅವರು ಪ್ರತಿದಿನ ‘ನಳಪಾಕ’ ಸಿದ್ಧಪಡಿಸಲಿದ್ದಾರೆ. ಡಾ.ಗೌರಿಯವರು ‘ಆರೋಗ್ಯ ಆಹಾರ’ದ ಬಗ್ಗೆ ಬೆಳಕು ಚೆಲ್ಲಲ್ಲಿದ್ದಾರೆ. ರುಚಿಕರ ಅಡುಗೆ ಮಾಡಲು ‘ಟಿಪ್‌ ಟಿಪ್‌ ಟಿಪ್ಪಣಿ’ ಸಹ ಇರಲಿದೆ. ‘ನಮ್ಮೂರ ಊಟ’ ಸೆಗ್ಮೆಂಟ್‌ನಲ್ಲಿ ಚಂದ್ರು ಅವರು ಕರ್ನಾಟಕದ ಸುಪ್ರಸಿದ್ಧ ಹೊಟೇಲ್‌, ಢಾಬಾ, ಫಾಸ್ಟ್‌ ಪುಡ್‌ ಸೆಂಟರ್ಸ್‌, ಖಾನಾವಳಿಗಳಿಗೆ ಭೇಟಿ ನೀಡಿ ಅಲ್ಲಿನ ವಿಶೇಷತೆ ಹಂಚಿಕೊಳ್ಳಲಿದ್ದಾರೆ. ಇಷ್ಟಅಲ್ಲದೆ ‘ರಸ ಪಾಕ’ ಮತ್ತು ‘ಬೊಂಬಾಟ್‌ ವೀಕೆಂಡ್‌’ನಲ್ಲಿ ಭೋಜನ ಪ್ರಿಯರಿಗಾಗಿ ವಿಶೇಷ ಮೆನು ತಯಾರಾಗಲಿದೆ.

'ಸರ್ವ ಮಂಗಳ ಮಾಂಗಲ್ಯೆ' ಧಾರಾವಾಹಿಯ ಸಂದೀಪ್‌ ರಾಜು ಕಲರ್‌ಫುಲ್‌ ಜರ್ನಿ ಇದು!