200 ಸಂಚಿಕೆ ಪೂರೈಸಿದ ಸ್ಟಾರ್ ಸುವರ್ಣ ವಾಹಿನಿಯ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ'!
ಕನ್ನಡ ಕಿರುತೆರೆ ವೀಕ್ಷಕರಿಗೆ ಪುರಾಣ, ಅಧ್ಯಾತ್ಮ ಮತ್ತು ಮೌಲ್ಯಾಧಾರಿತ ಕತೆಗಳನ್ನು ನೀಡುತ್ತಾ ಬಂದಿರುವ ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" ಧಾರಾವಾಹಿಗೆ ಇದೀಗ 200 ಸಂಚಿಕೆಗಳ ಸಂಭ್ರಮ

ಬೆಂಗಳೂರು(ಸೆ.05): ಪೌರಾಣಿಕ ಕಥೆಯುಳ್ಳ ಶ್ರೀ ರೇಣುಕಾ ಯಲ್ಲಮ್ಮ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, 200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಈ ಸೀರಿಯಲ್ ಕಥೆ ಏನು?
ಕನ್ನಡ ಕಿರುತೆರೆ ವೀಕ್ಷಕರಿಗೆ ಪುರಾಣ, ಅಧ್ಯಾತ್ಮ ಮತ್ತು ಮೌಲ್ಯಾಧಾರಿತ ಕತೆಗಳನ್ನು ನೀಡುತ್ತಾ ಬಂದಿರುವ ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗುತ್ತಿರುವ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ" ಧಾರಾವಾಹಿಗೆ ಇದೀಗ 200 ಸಂಚಿಕೆಗಳ ಸಂಭ್ರಮ. ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.
ನಿಮ್ಮ ಮನೆ ಮಗಳ 'ಕ್ಯಾಡ್ಬರಿಸ್' ಇದು- ಸಪೋರ್ಟ್ ಮಾಡಿ ಎನ್ನುತ್ತಲೇ ಬಿಗ್ ಅಪ್ಡೇಟ್ ನೀಡಿದ ಸೋನು ಗೌಡ
ಸ್ಟಾರ್ ಸುವರ್ಣ ವಾಹಿನಿಯ ಇತಿಹಾಸದಲ್ಲಿ ಆರಂಭದಿಂದಲೇ ಅತೀ ಹೆಚ್ಚು ರೇಟಿಂಗ್ ಪಡೆದು ಮುನ್ನುಗ್ಗುತ್ತಿರುವ ಹೆಗ್ಗಳಿಕೆಗೆ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿ ಪಾತ್ರವಾಗಿದೆ. ಇನ್ನು ರೇಣುಕಾ ದೇವಿಯ ಪವಾಡಗಳನ್ನು ತಿಳಿಯುವ ಸಲುವಾಗಿ ಸಾವಿರಾರು ಜನರು ಪ್ರತಿದಿನ ಈ ಧಾರಾವಾಹಿಯನ್ನು ಮಿಸ್ ಮಾಡದೇ ನೋಡುತ್ತಿದ್ದರೆ. ಈ ಧಾರಾವಾಹಿಯು ಹಲವು ರೀತಿಯಲ್ಲಿ ವಿಶೇಷವಾಗಿದ್ದು ಕನ್ನಡ ಕಿರುತೆರೆಯಲ್ಲಿ ಮೊದಲ ಬಾರಿಗೆ ಪೌರಾಣಿಕ ಧಾರಾವಾಹಿಯೊಂದು ಸಂಪೂರ್ಣವಾಗಿ ಕರ್ನಾಟಕದಲ್ಲಿ ಚಿತ್ರೀಕರಣಗೊಂಡಿರುವುದು. ಎಷ್ಟೋ ಜನರ ಪರಿಶ್ರಮದಿಂದ ಎಲ್ಲಾ ರೀತಿಯಲ್ಲಿ ಸಂಶೋಧನೆ ನಡೆಸಿ ವಿಶೇಷವಾದ ಸೆಟ್ ಗಳನ್ನು ಬೆಂಗಳೂರಿನಲ್ಲಿ ಹಾಕಲಾಗಿದೆ. ಧಾರಾವಾಹಿಯು ಅದ್ಭುತವಾಗಿ ಕಾಣಿಸಲು ವಿಶಿಷ್ಟ ರೀತಿಯಲ್ಲಿ ವಸ್ತ್ರವಿನ್ಯಾಸ ಹಾಗು ವಸ್ತ್ರಾಭರಣ ಮಾಡಲಾಗಿದ್ದು ನೋಡುಗರಿಗೆ ಮನೋಲ್ಲಾಸ ನೀಡುತ್ತಿದೆ.
ರೇಣುಕಾ ಹಾಗೂ ಎಲ್ಲಮ್ಮ ಪಾತ್ರಕ್ಕೆ ಜೀವ ತುಂಬಿದ ಮಕ್ಕಳು ಅದ್ಭುತವಾಗಿ ನಟಿಸಿ ಜನಾಭಿಮಾನಿಗಳ ಮನಗೆದ್ದು ಮನೆಮಾತಾಗಿದ್ದಾರೆ. ಕನ್ನಡ ಮಣ್ಣಿನ ಕತೆಯನ್ನು ಪ್ರೇಕ್ಷಕರು ಈ ಮಟ್ಟಿಗೆ ಯಶಸ್ಸುಗೊಳಿಸಿರುವುದು ಇತಿಹಾಸ ಅಂತಾನೆ ಹೇಳಬಹುದು. ಇದೀಗ ಧಾರಾವಾಹಿಯು 200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಪ್ರೇಕ್ಷಕರ ಮನಗೆದ್ದು ಮನೆಮಾತಾಗಿ ಮುನ್ನುಗ್ಗುತ್ತಿದೆ. ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತಾ ತಪ್ಪದೇ ವೀಕ್ಷಿಸಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಸೋಮ-ಶನಿ ರಾತ್ರಿ 8.30ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.